Turmeric

ಅರಿಶಿಣ

ಅಂದಾಜು

ಅಂದಾಜು ಇಳುವರಿ

25-30  ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

250-270  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )
77,000
ಅಂದಾಜು ಆದಾಯ (ರೂ )

2,75,000

ಉತ್ತಮ ವಾತಾವರಣ

ವಾತಾವರಣ
 • ಬೆಳವಣಿಗೆಯ ಹಂತದಲ್ಲಿ ಉಷ್ಣತೆ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಉತ್ತಮ
ತಾಪಮಾನ
 • 25-35 °C ಬೆಳೆಗೆ ಉತ್ತಮ
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • 1500 ಮಿಲಿ.ಮೀ ಬೆಳೆಗೆ ಮಳೆಬೀಳುವ ಪ್ರದೇಶ ಅಥವಾ ನೀರಾವರಿ ಬೇಕು

ಉತ್ತಮ ಮಣ್ಣು

ವಿಧ
 • ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ  ಮಣ್ಣು
 • ನೀರು ಬಸಿದು ಹೋಗುವಂತಹ  ಮಣ್ಣಲ್ಲಿ ಬೆಳೆಯಬಹುದಾಗಿದೆ.
 • ಬೆಳೆಯು ನೀರುನಿಂತರೇ  ಸರಿಯಾಗಿ ಬೆಳೆಯುವುದಿಲ್ಲ

 

ರಸಸಾರ
 • ಉತ್ತಮ ರಸಸಾರ  4.5-7.5 ಸಾರ
 • ರಸಸಾರ  4.5  ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.5  ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು. 

ಬಿತ್ತನೆಯ ಬೀಜಗಳು

ಸೇಲಂ
ಅವಧಿ
270 ದಿನಗಳು
ವಿಶಿಷ್ಠ ಲಕ್ಷಣ
ಒಳ್ಳೆಯ ಗಾತ್ರದ ಗಡ್ಡೆಗಳನ್ನು ನೀಡುತ್ತದೆ, ಆದರೆ ಕಡಿಮೆ ಕುರ್ಕುಮಿನ್ ಅಂಶವಿರುತ್ತದೆ (2-3%).
ಪ್ರಗತಿ
ಅವಧಿ
180 ದಿನಗಳು
ವಿಶಿಷ್ಠ ಲಕ್ಷಣ
ಇದು ಗಿಡ್ಡವಾದ ತಳಿ ,ಗಿಡದ ಎತ್ತರ 4 ಅಡಿಗಿಂತ ಕಡಿಮೆಯಿರುತ್ತದೆ. 6 ತಿಂಗಳಿಗೆ ಕೊಯ್ಲಿಗೆ ಬರುತ್ತದೆ , ಮಾಧ್ಯಮ ಪ್ರಮಾಣದಲ್ಲಿ ಕುರ್ಕುಮಿನ್ ಅಂಶವನ್ನು ಒಳಗೊಂಡಿರುತ್ತದೆ (5%)
ಪ್ರತಿಭಾ
ಅವಧಿ
270 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿಯನ್ನು ಕೊಡುವ ತಳಿಯಾಗಿದೆ, ಗಿಡವು 5 ಅಡಿಗಳಷ್ಟು ಎತ್ತರವಿರುತ್ತದೆ ಮತ್ತು ಹೆಚ್ಚು ಕುರ್ಕುಮಿನ್ ಅಂಶವನ್ನು ಒಳಗೊಂಡಿರುತ್ತದೆ (6%)
ಬೀಜದ ಪ್ರಮಾಣ
ತಳಿಗಳು
800 ಕೆಜಿ ಪ್ರತಿ ಎಕರೆಗೆ
ಬಿತ್ತನೆಗೆ ತಾಯಿ ಗಡ್ಡೆಗಳು ಮತ್ತು ಸಣ್ಣ ಕೊಂಬುಗಳನ್ನು ಉಪಯೋಗಿಸಬಹುದು . ಕೊಂಬುಗಳನ್ನು 4-5 ಸೆಂ .ಮೀ ಉದ್ದ ತುಂಡುಗಳಾಗಿ ಕತ್ತರಿಸಿ ಮತ್ತು ತಾಯಿ ಗಡ್ಡೆಗಳನ್ನು ಎರಡು ಭಾಗ ಮಾಡಿ ಬಿತ್ತಬೇಕು , ಗಡ್ಡೆಗಳಲ್ಲಿ ಒಂದಾದರೂ ಮೊಳಕೆ ಇರಬೇಕು.

ಬೀಜೋಪಚಾರ

 • ಸರಿಯಾಗಿ ಮೊಳಕೆಯೊಡೆಯಲು – 2 ಗ್ರಾಂ ಕಾಪರ್ ಆಕ್ಸಿ ಕ್ಲೋರೈಡ್ + ಡೈಮಿಥೋಯೇಟ್2 ಮೀ.ಲಿ ಪ್ರತಿ ಲೀಟರ್ ನೀರಿಗೆ ಕಲೆಸಿ 
 • ಬೀಜದ ಗಡ್ಡೆಗಳನ್ನುಮಿಶ್ರಣದಲ್ಲಿ15 – 20ನಿಮಿಷ  ಅದ್ದಿ.
 • 800 ಕೆಜಿ ಬೀಜಕ್ಕೆ 200 ಲೀಟರ್ ಮಿಶ್ರಣ ಬೇಕು

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನಬಿತ್ತನೆ ಮಾಡುವ ಮೊದಲು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಆಳಕ್ಕೆ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.
 • ಕೊನೆಯ ಉಳುಮೆಯೊಂದಿಗೆ 2 ಟನ್   ಕೊಟ್ಟಿಗೆ ಗೊಬ್ಬರವನ್ನು ಮತ್ತು ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ 3 ಕೆಜಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು.ಹತ್ತು ದಿನ ಚೆನ್ನಾಗಿ ಕೊಳೆಯಲು ಬಿಡಬೇಕು
ಸಾಲು-ಬದು ತಯಾರಿ
 • ಚಪ್ಪಟೆಯಾಗಿ 1ಮೀ. ಅಗಲ , 30 ಸೆಂ. ಮೀ. ಎತ್ತರ & 50 ಸೆಂ. ಮೀ. ಅಂತರದ ಮಡಿ ತಯಾರಿಸಿ. 

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.6 ಅಡಿ
ಗಿಡಗಳ ನಡುವಿನ ಅಂತರ
0.9 ಅಡಿ
ಗಿಡಗಳ ಸಂಖ್ಯೆ
30,555

ಬೇರು ಉಪಚಾರ

 • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
 • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
 • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
 • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

 • ಸಸಿಗಳನ್ನು ಬದುಗಳ ಮೇಲೆ 60 ಸೆಂ.ಮೀ ಅಂತರದಲ್ಲಿ  ಕಸಿ ಮಾಡಿ.

ಪೋಷಕಾಂಶಗಳ ನಿರ್ವಹಣೆ

 • ಬೇಕಾಗುವ ಒಟ್ಟು ಪ್ರಮಾಣ : 80:40:40 ಕೆಜಿ ಎನ್ .ಪಿ.ಕೆ  ಪ್ರತಿ ಎಕರೆಗೆ ಸಾರಜನಕ ಅರ್ಧ ಪ್ರಮಾಣ (45 ಮತ್ತು  75 ದಿನಗಳ ನಂತರ ) + ಪೊಟ್ಯಾಸಿಯಂ ಮತ್ತು ಫಾಸ್ಪರಸ್  ಪೂರ್ತಿ ಪ್ರಮಾಣ ಬಿತ್ತನೆ ಸಮಯದಲ್ಲಿ  ಹಾಕಿ

  • ಬಿತ್ತನೆ ಸಮಯದಲ್ಲಿ –  246 ಕೆಜಿ ಯಸ್. ಯಸ್. ಪಿ. + 66 ಕೆಜಿ ಎಂ.. ಪಿ ( ಪ್ರತಿ ಎಕರೆಗೆ
  • 45 ದಿನಗಳ ನಂತರ -50 ಕೆಜಿ ಯೂರಿಯಾ
  75 ದಿನಗಳ ನಂತರ -86 ಕೆಜಿ ಯೂರಿಯಾ

ನೀರಾವರಿ

 • ಹನಿನೀರಾವರಿದಿನಬಿಟ್ಟು ದಿನ ನೀರುಣಿಸಬೇಕು
 • ಬೆಳೆಗೆ ಪಾತಳಿ ನೀರಾವರಿ ಪದ್ಧತಿಯಲ್ಲಿಸಾಲುಬೋದು ವಿನ್ಯಾಸದಲ್ಲಿ 8-10 ದಿನಗಳಿಗೊಮ್ಮೆ  ನೀರು ಉಣಿಸುವುದುಮಳೆಯನ್ನು ಆಧರಿಸಿ ನೀರು ಹಾಯಿಸಬೇಕು

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 400ಗ್ರಾಂ
ಬಿತ್ತನೆ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ
ಪೆಂಡಿಮೆಥಲೀನ್
600 ಮಿಲಿ ಪ್ರತಿ ಎಕರೆಗೆ

ಕೀಟ ಮತ್ತು ರೋಗಗಳ ನಿರ್ವಹಣೆ

rhizome rot disease in turmeric farmingrhizome rot disease in turmeric farming
ಗಡ್ಡೆ ಕೊಳೆ ರೋಗ
ಲಕ್ಷಣಗಳು
ಗಡ್ಡೆ ಕೊಳೆಯುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಮೆಟಲಾಕ್ಸಿಲ್
250 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ,( ಬೇರಿಗೆ ತಲುಪುವಂತೆ ಹಾಕಿ ).
white grub pest in turmeric plants
ಬಿಳಿ ಮರಿ ಹುಳು/ ಗೊಬ್ಬರದ ಹುಳು
ಲಕ್ಷಣಗಳು
ಎಲೆ ಹಳದಿ ಬಣ್ಣಕೆ ತಿರುಗುತ್ತದೆ, ರೆಂಬೆ ಮತ್ತು ಎಲೆಗಳು ಉದುರುತ್ತವೆ ಗಿಡಗಳು ಬಾಡಿ ಒಣಗಿಹೋಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೊಫ್ಯೂರೋನ್
5 ಕೇಜಿ / ಎಕರೆಗೆ
ಉಪಯೋಗಿಸುವ ವಿಧಾನ
ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಜಮೀನಿಗೆ ಹಾಕಿ.
Shoot borer
ಕಾಂಡ ಕೊರಕ
ಲಕ್ಷಣಗಳು
ಕಾಂಡದ ಮೇಲೆ ರಂಧ್ರಗಳನ್ನು ಕೊರೆಯುತ್ತದೆ ಅದರಲ್ಲಿ ಹಿಕ್ಕೆಗಳು ಕಂಡುಬರುತ್ತವೆ ಮತ್ತು ಗಿಡ ಮುದುಡುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಬೇವಿನ ಎಣ್ಣೆ ಅಥವಾ ಲಾಂಬ್ದ ಸೈಹಾಲೊಥ್ರಿನ್
ಮಿಲಿ/ಎಕರೆಗೆ ಅಥವಾ ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಕಾಂಡದ ಚಿಪ್ಪಿನ ಹುಳು
ಲಕ್ಷಣಗಳು
ಗಡ್ಡೆಯು ಮುದುಡಿ ಒಣಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್
250 ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರಿಪ್ ಮೂಲಕ ಗಿಡಗಳಿಗೆ ಹಾಕಿ
leaf blotch disease in turmeric farming
ಎಲೆಗುಳ್ಳೆ / ಎಲೆ ಚ್ಚುಕ್ಕೆ ರೋಗ
ಲಕ್ಷಣಗಳು
ಎಲೆಯ ಎರಡು ಬದಿಯಲ್ಲಿ ಕಂದು ಬಣ್ಣದ ಚ್ಚುಕ್ಕೆಗಳಾಗುತ್ತವೆ, ಸೋಂಕು ಹೆಚ್ಚಾದಾಗ ಎಲೆಯ ಮೇಲೆ ಗಾಯವಾದಂತೆ ಕಂಡುಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಅಜೊಕ್ಸೋಸ್ಟ್ರೊಬಿನ್ + ಡೈಫೆಂಕನಾಜೋಲ್ ಅಥವಾ ಪ್ರೊಪಿಕೋನಾಜೋಲ್
300 ಮಿಲಿ/ಎಕರೆಗೆ ಅಥವಾ 200 ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ.
leaf roller pest in turmeric
ಎಲೆ ಸುರುಳಿ ರೋಗ
ಲಕ್ಷಣಗಳು
ಎಲೆಗಳು ಮಡಚಿಕೊಳ್ಳುತ್ತವೆ, ಸುರುಳಿಯಾಗುತ್ತವೆ ಮತ್ತು ಅದರ ಒಳಗೆ ಹುಳು ಸೇರಿಕೊಂಡು ಎಲೆಯನ್ನು ತಿನ್ನುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಲಾಂಬ್ದ ಸೈಹಾಲೊಥ್ರಿನ್

200 ಮಿಲಿ.ಲಿ / ಪ್ರತಿ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Leaf eating caterpillar on turmeric plant
ಎಲೆ ಕೊರಕ / ಎಲೆ ತಿನ್ನುವ ಹುಳು
ಲಕ್ಷಣಗಳು
ಎಲೆಗಳ ಮೇಲೆ ಸಣ್ಣ ರಂದ್ರಗಳಾಗುತ್ತವೆ ಎಲೆಗಳು ಉದ್ದಕ್ಕೆ ತುತ್ತಾಗುತ್ತವೆ / ಕತ್ತರಿಸಿದಂತಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಪ್ಲೇಥೋರ (ಅಗಾಧ ) - ಇಂಡಕ್ಸೋಕಾರ್ಬ್ + ನೋವಲೂರನ್
250 ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Leaf spot disease and its prevention
ಎಲೆ ಚ್ಚುಕ್ಕೆ/ ಎಲೆ ಮಚ್ಚೆ ರೋಗ
ಲಕ್ಷಣಗಳು
ಎಲೆಗಳಲ್ಲಿ ವೃತ್ತಾಕಾರದ ಅಥವಾ ಆಕಾರವಿಲ್ಲದ ಗಾಢ ಕಂದು ಅಥವಾ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ, ಎಲೆಗಳ ಮೇಲೆ ಮಧ್ಯದಲ್ಲಿ ಬಿಳಿ/ ಬೂದಿ ಬಣ್ಣದ ಚ್ಚುಕ್ಕೆ ಅದರ ಸುತ್ತ ಕಂದುಬಣ್ಣದ ಮಚ್ಚೆ, ಅದರ ಸುತ್ತ ಹಸಿರು /ಹಳದಿ ಚ್ಚುಕ್ಕೆಗಳಾಗುತ್ತವೆ, ಅವು ದಡ್ದದಾಗುತ್ತಾ ಹೋಗುತ್ತವೆ ಮತ್ತು ಗಾಯದಂತೆ ಕಂಡುಬರುತ್ತವೆ. ಕಲೆಗಳು ಅಧಿಕವಾಗಿ ಅವುಗಳ ಮಧ್ಯದಲ್ಲಿ ಸೂಕ್ಷ್ಮ ಬೀಜಗಳಾಗುತ್ತವೆ. ಅಧಿಕ ಹಾನಿಗೊಳಗಾದ ಎಲೆಗಳು ಉದುರಿಹೋಗುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ಮ್ಯಾಂಕೊಜೆಬ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
250-270 ದಿನಗಳ ನಂತರ
ಕೊಯ್ಲಿನ ಸಮಯ
ಜನವರಿ - ಮಾರ್ಚ್
ಕೊಯ್ಲಿಗೆ 20 ದಿನ ಮೊದಲು ನೀರು ಹಾಯಿಸುವುದನ್ನು ನಿಲ್ಲಿಸಬೇಕು.

ಇಳುವರಿ

ಇಳುವರಿ
ಹಸಿ ಕೊಂಬು
120-150 ಕ್ವಿನ್ಟ್ಯಾಲ್ ಪ್ರತಿ ಎಕರೆಗೆ
ಒಣ ಗಡ್ಡೆಗಳು
25-30 ಕ್ವಿನ್ಟ್ಯಾಲ್ ಪ್ರತಿ ಎಕರೆಗೆ

3 thoughts on “Turmeric

 1. Pingback: Turmeric - BharatAgri

 2. Pingback: Turmeric farming guide for maximum yield of turmeric - BharatAgri

 3. Pingback: हल्दी की खेती कैसे करें? यह आधुनिक तकनीक से होती है ज्यादा उपज। - BharatAgri

Leave a Reply

Your email address will not be published. Required fields are marked *