Sugarcane

ಕಬ್ಬು

ಅಂದಾಜು

ಅಂದಾಜು ಇಳುವರಿ
 • 400-600 ಕ್ವಿಂಟಾಲ್/ಎಕರೆಗೆ
ಅಂದಾಜು ಅವಧಿ
 • 330-360  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)
ಅಂದಾಜು ಖರ್ಚು (ರೂ )

60,000

ಅಂದಾಜು ಆದಾಯ (ರೂ )

 

1,25,000

ಉತ್ತಮ ವಾತಾವರಣ

ವಾತಾವರಣ
 • ಉಷ್ಣತೆ ಜೊತೆಗೆ ತೇವಾಂಶವಿರುವ ವಾತಾವರಣ 
 • ಧೀರ್ಘವಾದ ಹಗಲು ಇದ್ದರೆ ಗಿಡಗಳು ಹೆಚ್ಚು ಇಳುಕುಗಳು, ರಸ ಮತ್ತು ಸಕ್ಕರೆ ಅಂಶ ಹೆಚ್ಚಾಗುತ್ತದೆ
ತಾಪಮಾನ
 • ಕುಡಿಯೊಡೆಯುವ ಹಂತದಲ್ಲಿ – 30 ರಿಂದ 34°C ತಾಪಮಾನ ಬೇಕು.
 • ಬೆಳವಣಿಗೆಯ ಹಂತದಲ್ಲಿ – 20 -30°C ತಾಪಮಾನ ಬೇಕು.
 • ಬಲಿಯುವ ಹಂತದಲ್ಲಿ – 12- 15°C ತಾಪಮಾನ ಬೇಕು.
 • ತಾಪಮಾನ 50°Cಗಿಂತ ಜಾಸ್ತಿಯಿದ್ದರೆ ಬೆಳವಣಿಗೆ ನಿಲ್ಲುತ್ತದೆ ಮತ್ತು 20 °C ಗಿಂತ ಕಡಿಮೆಯಿದ್ದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. 
 • 25° -30°C ಕ್ಕಿಂತ ತಾಪಮಾನ ಹೆಚ್ಚಿದ್ದರೆ ಕಾಡಿಗೆರೋಗ ಕಾಣಿಸಿಕೊಳ್ಳುತ್ತದೆ , ಅದೇ ರೀತಿ ತಾಪಮಾನ(37°-40°C) ಹೆಚ್ಚಿದ್ದರೆ ಕೆಂಪು ಕಾಂಡ ಕೊಳೆರೋಗ ಬರುವ ಸಾಧ್ಯತೆಗಳು ಹೆಚ್ಚು.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಈ ಬೆಲೆಯೂ ಸಾಮಾನ್ಯವಾಗಿ ನೀರಾವರಿ ಜಮೀನಿನಲ್ಲಿ ಬೆಳೆಯುವ ಬೆಳೆಯಾಗಿದೆ 1800-2200 ಮಿಮಿ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಬಹುದು
 • ಒಟ್ಟುಒಂದು ಎಕರೆ ಜಮೀನಿಗೆ ನೀರು ಹಾಯಿಸಲು 1400 to 2000 ಮಿಮಿ ನೀರು ಬೇಕು ( 20% ಜಮೀನಿಗೆ ಹಾಯಿಸುವಾಗ ವ್ಯರ್ಥವಾಗುವ ನೀರಿನ ಪ್ರಮಾಣವನ್ನು ಸೇರಿಸಿ )
 • ಕಬ್ಬು ಬಲಿಯುವಾಗ ಹೆಚ್ಚಿಗೆ ಮಳೆಯಾಗುವುದು ಒಳ್ಳೆಯದಲ್ಲ ಇದರಿಂದ, ಬರಿ ಬೆಳವಣಿಗೆ ಹೆಚ್ಚಾಗಿ, ರಸದ ಗುಣಮಟ್ಟ ಕಡಿಮೆಯಾಗಿ ಕಾಂಡ ನೀರುತುಂಬಿದ ಜಲ್ಲೆಗಳಾಗುತ್ತವೆ​

ಉತ್ತಮ ಮಣ್ಣು

ವಿಧ
 • ಕಬ್ಬಿಗೆ ಹೆಚ್ಚು ಸಾವಯವ ಅಂಶವಿರುವ ಮಣ್ಣು ಸೂಕ್ತ.
  ನೀರು ಬಸಿದು ಹೋಗುವ ಕೆಂಪು ಮತ್ತು ಕಪ್ಪು ಮಣ್ಣು ಸೂಕ್ತ.
  ಕಬ್ಬು ಬೆಳೆಗೆ ಪೂರ್ವಭಾವಿಯಾಗಿ ಹಸಿರೆಲೆ ಗೊಬ್ಬರಗಳಾದ ಚಂಬೆ, ಅಪ್ಸೆಣಬು ಇತ್ಯಾದಿಗಳನ್ನು ಬೆಳೆದು ಹೂ ಬಿಡುವ ಹಂತದಲ್ಲಿ ಭೂಮಿಗೆ ಸೇರಿಸಬಹುದು .​

ರಸಸಾರ
 • ಉತ್ತಮ ಶ್ರೇಣಿ – 6.5-7.5
 • ರಸಸಾರ 6.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.5 ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆಯ ಬೀಜಗಳು

ಕೊ – 86032
ಅವಧಿ
280
ವಿಶಿಷ್ಠ ಲಕ್ಷಣ
ಬರವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಕೂಳೆ ಕಬ್ಬು ಕೂಡ ಒಳ್ಳೆಯ ಇಳುವರಿ ನೀಡುತ್ತದೆ
ಕೊ ಎಂ -0265
ಅವಧಿ
540 ದಿನಗಳು
ವಿಶಿಷ್ಠ ಲಕ್ಷಣ
ಬರವನ್ನು ಮತ್ತು ಲವಂಶವನ್ನು ತಡೆದುಕೊಳ್ಳುವ ಶಕ್ತಿ ಕೂಳೆ ಕಬ್ಬು ಕೂಡ ಒಳ್ಳೆಯ ಇಳುವರಿ ನೀಡುತ್ತದೆ.
ಕೊ ಸಿ -671
ಅವಧಿ
300
ಬೀಜದ ಪ್ರಮಾಣ
ತಳಿಗಳು
6000 ಎರಡು ಮೊಳಕೆ/ಗೆಣ್ಣುಗಳಿರುವ ತುಂಡು / ಎಕರೆಗೆ ( 28 ಕ್ವಿನ್ಟಾಲ್ /ಎಕರೆಗೆ).

ಬೀಜೋಪಚಾರ

 • 200 ಲೀಟರ್ ನೀರಿಗೆ ಕಾಪರ್ ಆಕ್ಸಿ ಕ್ಲೋರೈಡ್ – 2 ಗ್ರಾಂ + ಡೈಮಿಥೋಯೇಟ್ – 2 ಮಿಲಿ ಔಷಧಗಳನ್ನು ಹಾಕಿಮಿಶ್ರಣ ಮಾಡಿ.
 • 800 ಕೇಜಿ ತುಂಡುಗಳನ್ನುಅದರಲ್ಲಿ 10-15 ನಿಮಿಷ ನೆನೆಸಿ. 

ಜಮೀನಿನ ತಯಾರಿ

ಜಮೀನಿನ ತಯಾರಿ

 

 • ಭೂಮಿಯನ್ನು  1 – 2 ಸಾರಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು ಪುಡಿಮಾಡಿ ಕಳೆಕಸಗಳನ್ನು ಆರಿಸಿ ತೆಗೆಯಬೇಕು.
 • ಕಡೇ ಉಳುಮೆಯೊಂದಿಗೆ ರೋಟೋವೇಟರ್ ಸಹಾಯದಿಂದ ಅಥವಾ ಕೈಯಿಂದ ಎಲ್ಲಾ ಪದಾರ್ಥಗಳನ್ನು ಕಲಸಿ – 5 ಟನ್ ಕೊಟ್ಟಿಗೆ ಗೊಬ್ಬರ + 2 ಕೆಜಿ ಸಾರಜನಕ ಮಣ್ಣಿಗೆ ಸೇರಿಸುವ ಬ್ಯಾಕ್ಟೇರಿಯ + 2 ಕೆಜಿ ಫಾಸ್ಫರಸ್ ಮಣ್ಣಿಗೆ ಸೇರಿಸುವ ಬ್ಯಾಕ್ಟೇರಿಯ + 2 ಕೆಜಿ ಪೊಟ್ಯಾಸಿಯಂ ಮಣ್ಣಿಗೆ ಸೇರಿಸುವ ಬ್ಯಾಕ್ಟೇರಿಯ + 2 ಕೆಜಿ ಜಿಂಕ್ ಮಣ್ಣಿಗೆ ಸೇರಿಸುವ ಬ್ಯಾಕ್ಟೇರಿಯ ಹಾಕಬೇಕು .
ಸಾಲು-ಬದು ತಯಾರಿ
 • ಸಾಲುಬದು ತಯಾರಿ –  120 ಸೆಂ.ಮೀ ಅಂತರ   ಸಾಲು ಬದುಗಳನ್ನು ನಿರ್ಮಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.2 ಮೀಟರ್
ಗಿಡಗಳ ನಡುವಿನ ಅಂತರ
0.9 ಮೀಟರ್
ಗಿಡಗಳ ಸಂಖ್ಯೆ
5555

ಪೋಷಕಾಂಶಗಳ ನಿರ್ವಹಣೆ

 1. 120:56:56  ಕೆಜಿ  ಎನ್.ಪಿ.ಕೆ / ಎಕರೆಗೆ 
 2. 15 ದಿನಗಳ ನಂತರಯೂರಿಯಾ : 130 ಕೆಜಿಯಸ್.ಯಸ್.ಪಿ : 172 ಕೆಜಿಎಂ..ಪಿ :48 ಕೆಜಿ 
 3. 130 ದಿನಗಳ ನಂತರ  –ಯೂರಿಯಾ : 130ಕೆಜಿಯಸ್.ಯಸ್.ಪಿ  : 172ಕೆಜಿಎಂ..ಪಿ  :48 ಕೆಜಿ

ನೀರಾವರಿ

 • ಪಾತಳಿ ನೀರಾವರಿ ಪದ್ಧತಿಯಲ್ಲಿ– 6-8  ದಿನಗಳಿಗೊಮ್ಮೆ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆಗೆ 20 ದಿನ ಮೊದಲು
ವಿಧಾನ
ಸಿಂಪಡಣೆ
ಗ್ಲೈಫೋಸೈಟ್
600 ಮಿಲಿ / ಎಕರೆಗೆ
ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಝಿನ್ ಅಥವಾ ಮೆಟ್ರಿಬ್ಯುಝಿನ್
600 ಗ್ರಾಂ/ಎಕರೆಗೆ ಅಥವಾ 400 ಗ್ರಾಂ/ ಎಕರೆಗೆ
ಬಿತ್ತನೆ ಮಾಡಿದ 21 ದಿನಗಳ ನಂತರ
ವಿಧಾನ
ಸಿಂಪಡಣೆ
2,4- ಡಿ
1 ಕೆಜಿ / ಎಕರೆಗೆ

ನಿರ್ವಹಣಾ ಕ್ರಮಗಳು

 • ಸಸ್ಯ ಸಂಖ್ಯೆಯನ್ನು ಕಾಪಾಡಿಕೊಳ್ಳಲು –  ಬಿತ್ತನೆ ಮಾಡಿದ  30 ದಿನಗಳ ನಂತರ,ಮೊಳಕೆಯೊಡೆಯದ ಜಾಗದಲ್ಲಿ ಗುಣಿಯಲ್ಲಿ ಮೊಳಕೆಯೊಡೆದ ತುಂಡುಗಳನ್ನು ಊಳಬೇಕು 
 • ಮೊದಲನೇ ಬಾರಿ ಮಣ್ಣು ಏರಿಸುವುದು 45 ದಿನಗಳ ನಂತರ ಸಾಲಿನ ಎರಡೂ ಬದಿಗಳಲ್ಲಿನ ಮಣ್ಣನ್ನು ಕಾಂಡದ ಸುತ್ತಲೂ ಹಾಕಿ ಒತ್ತಬೇಕು
 • ಎರಡನೇ  ಬಾರಿ ( ಪೂರ್ಣ )ಮಣ್ಣು ಏರಿಸುವುದು120 ದಿನಗಳ ನಂತರ ಸಾಲಿನ ಎರಡೂಬದುಗಳಲ್ಲಿನ ಮಣ್ಣನ್ನು ತೆಗೆದು ಕಬ್ಬಿನ ಕಾಂಡದ ಹತ್ತಿರ  ಸುತ್ತಲೂ ಹಾಕಿ. 

ಕೀಟ ಮತ್ತು ರೋಗಗಳ ನಿರ್ವಹಣೆ

White grub pest in sugarcane
ಬಿಳಿ ಮರಿಹುಳು
ಲಕ್ಷಣಗಳು
ಶಿರದ/ ತಲೆ ಭಾಗ ಪೂರ್ತಿ ಒಣಗುತ್ತದೆ, ಸೋಂಕಿತ ಕಬ್ಬು ಸುಲಭವಾಗಿ ಕಿತ್ತು ಬರುತ್ತದೆ. ಸೋಂಕಿತ ಜಲ್ಲೆಗಳು ಬಾಗಿರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಫೋರೆಟ್
10 ಕೇಜಿ/ಎಕರೆಗೆ
ಉಪಯೋಗಿಸುವ ವಿಧಾನ
ಬಿತ್ತನೆಗೆ ಮುಂಚೆ ಜಮೀನಿಗೆ ಹಾಕಿ.
Woolly aphid attack on sugarcane
ಬಿಳಿ ತುಪ್ಪಟದ ಹುಳು
ಲಕ್ಷಣಗಳು
ಬಿಳಿ ಹುಳುಗಳು ಎಲೆಯ ಕೆಳಭಾಗದಲ್ಲಿ ಕಂಡುಬರುತ್ತವೆ. ಎಲೆಯ ತುದಿಯಿಂದ ಅಂಚಿನುದ್ದಕ್ಕೂ ಹಿಮ್ಮುಖವಾಗಿ ಹಳಧಿಯಾಗುತ್ತಾ ಬರುತ್ತದೆ. ಅಂಟಿನಂತಹ ದ್ರಾವಣ ಸೋರುವುದರಿಂದ ಕಪ್ಪು ಮಸಿಯಂತಹ ಬೂಸ್ಟ್ ಬೆಳೆಯುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್ ಅಥವಾ ಕ್ಲೋರೋಪೈರಿಫೋಸ್

300 ಮಿಲಿ / ಎಕರೆಗೆ ಅಥವಾ 600 ಮಿಲಿ / ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Rust disease in sugarcane
ತುಕ್ಕು ರೋಗ
ಲಕ್ಷಣಗಳು
ಮೊದಲು - ಸಣ್ಣ,ಉದ್ದವಾದ ಹಳದಿ ಬಣ್ಣದ ಕಲೆಗಳು ಎಲೆಯ ಎರಡೂ ಬದಿಯಲ್ಲಿ ಕಂಡುಬರುತ್ತವೆ. ಚ್ಚುಕ್ಕೆಗಳು ದೊಡ್ಡದಾಗಿ ನಂತರ ಕೆಂಪು-ಕಂದು ಬಣ್ಣಕ್ಕೆ ತಿರುಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಪ್ರೊಪಿಕೋನಾಜೋಲ್
600 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ನಡುಗೆಣ್ಣು ಕೊರಕ ಹುಳು
ಲಕ್ಷಣಗಳು
ಕೊರೆದ ರಂದ್ರಗಳು ಹೆಚ್ಚಾದಂತೆಲ್ಲಾ ನಡುಗಡ್ಡೆಗಳ ಅಂತರ ಕಡಿಮೆಯಾಗುತ್ತದೆ. ಸೋಂಕಿತ ಜಾಗದಲ್ಲಿ ಹಿಕ್ಕೆಗಳು ಕಂಡುಬರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಪಿಪ್ರೋನೀಲ್
7 ಕೇಜಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ ( ಬೇರಿಗೆ ತಲುಪುವಂತೆ ಸುರಿಯಿರಿ
ಕಾಂಡ ಹುಲ್ಲಿನಂತಾಗುವುದು
ಲಕ್ಷಣಗಳು
ಕಾಂಡ ಬಲಿಯುವುದಕ್ಕೆ ಮೊದಲೇ ಕೊರೆದ ಸುರಂಗದಂತೆ ಕಂಡುಬರುತ್ತದೆ. ಗಿಡ ಕುಬ್ಜವಾಗಿ ಪೊದೆಯಂತೆ ಕಾಣುತ್ತದೆ. ಇದು ಸಸ್ಯ ಹೇನುಗಳಿಂದ ಹರಡುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್ ಅಥವಾ ಥೈಯೊಫೆನೈಟ್ ಮೀಥೈಲ್
300 ಮಿಲಿ / ಎಕರೆಗೆ ಅಥವಾ 300 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Wilt disease in sugarcane cultivation
ಸೊರಗು ರೋಗ
ಲಕ್ಷಣಗಳು
ಗರಿಗಳು ಹಳದಿಯಾಗಿ ಒಣಗುತ್ತವೆ ಮತ್ತು ಕಬ್ಬು ಸಣ್ಣದಾಗಿ,ಒಣಗಿದಂತಾಗುತ್ತದೆ. ರೋಗದಿಂದ ಗಿಡ ಕೊಳೆಯುತ್ತದೆ,ಇದರಿಂದ ಕೆಟ್ಟ ವಾಸನೆ ಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೇಜಿಮ್

600 ಗ್ರಾಂ/ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ ( ಬೇರಿಗೆ ತಲುಪುವಂತೆ ಸುರಿಯಿರಿ )
ಕೆಂಪು ಕೊಳೆರೋಗ
ಲಕ್ಷಣಗಳು
ಸತ್ತ ಅಂಗಾಂಶಗಳನ್ನು ಸುಲಭವಾಗಿ ಕೀಳಬಹುದು, ಕಾಂಡ ಕೊರೆಯುವುದರಿಂದ ರಂಧ್ರಗಳನ್ನು ಕಾಣಬಹುದು ಮತ್ತು ಕೆಟ್ಟ ವಾಸನೆ ಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೇಜಿಮ್
400 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಗೆದ್ದಲು ಹುಳು
ಲಕ್ಷಣಗಳು
ಸೋಂಕಿತ ಗಿಡದ ಬೇರುಗಳು ಕೊಳೆತು ಹೋಗುವುದರಿಂದ ಸುಲಭವಾಗಿ ಕಿತ್ತುಬರುತ್ತವೆ ಮತ್ತು ಗೆದ್ದಲು ಹುಳು ಗಿಡದ ಹತ್ತಿರ ನೋಡಬಹುದು.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೊಫುರಾನ್
5 ಕೇಜಿ/ಎಕರೆಗೆ
ಉಪಯೋಗಿಸುವ ವಿಧಾನ
ಬಿತ್ತನೆಗೆ ಮುಂಚೆ ಜಮೀನಿಗೆ ಹಾಕಿ ಮಣ್ಣಿಗೆ ಮಿಶ್ರಣ ಮಾಡಿ.

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 330ರಿಂದ 360 ದಿನಗಳ ನಂತರ
ಕೊಯ್ಲಿಗೆ 15 ದಿನ ಮೊದಲು ನೀರುಬಿಡುವುದನ್ನು ನಿಲ್ಲಿಸಿ

ಇಳುವರಿ

ಇಳುವರಿ
ಒಟ್ಟು ಕೊಯ್ಲಿನ ಮೊತ್ತ
1000-1500 ಕ್ವಿನ್ಟಾಲ್ /ಎಕರೆಗೆ

2 thoughts on “Sugarcane

 1. Pingback: Sugarcane - BharatAgri

 2. Pingback: गन्ने की खेती - BharatAgri

Leave a Reply

Your email address will not be published. Required fields are marked *