Red Chilli_Kannada

ಕೆಂಪು ಮೆಣಸಿನಕಾಯಿ

ಅಂದಾಜು

ಅಂದಾಜು ಇಳುವರಿ

15-20 ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

200-220  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )
74,977
ಅಂದಾಜು ಆದಾಯ (ರೂ )

1,75,000

ಉತ್ತಮ ವಾತಾವರಣ

ವಾತಾವರಣ
  • ಸಿಹಿ ಮೆಣಸು/ದೊಣ್ಣೆ ಮೆಣಸಿನ ಕಾಯಗಿಂತ ಕೆಂಪು ಮೆಣಸಿನಕಾಯಿ ಉಷ್ಣ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, 
  • ಮೆಣಸಿನಕಾಯಿ ಬೆಳಕಿಗೆ ಸೂಕ್ಷ್ಮವಾಗಿರುವುದಿಲ್ಲ (ಹಗಲಿನ ಉದ್ದವು ಹೂವು ಅಥವಾ ಹಣ್ಣು ಧಾರಣದ ಮೇಲೆ ಪರಿಣಾಮ ಬೀರುವುದಿಲ್ಲ).
ತಾಪಮಾನ
  • ಮೆಣಸಿನಕಾಯಿ ಬೆಳವಣಿಗೆಗೆ ಗರಿಷ್ಠ 20 ರಿಂದ 30°C ವರೆಗೆ ದಿನದ ತಾಪಮಾನವು ಸೂಕ್ತವಾಗಿದೆ
  • ರಾತ್ರಿಯ ಉಷ್ಣತೆಯು 24°C ಗಿಂತ ಹೆಚ್ಚಿರುವಾಗ, ಹಣ್ಣುಗಳು ಸರಿಯಾಗಿ ಆಗುವುದಿಲ್ಲ. 
  • ತಾಪಮಾನವು 15°C ಗಿಂತ ಕಡಿಮೆಯಾದಾಗ ಅಥವಾ 32°C ಗಿಂತ ಹೆಚ್ಚಾದಾಗ, ಬೆಳವಣಿಗೆ ಮತ್ತು ಇಳುವರಿ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. 
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • ಸಾಮಾನ್ಯವಾಗಿ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
  • ಮೆಣಸಿನಕಾಯಿ ಹೂಬಿಡುವಿಕೆ ಮತ್ತು ಹಣ್ಣಿನ ಬೆಳವಣಿಗೆ ಪ್ರಮುಖ ಹಂತಗಳಾಗಿವೆ. ಈ ಪರಿಸ್ಥಿತಿಗಳಿಗೆ ನೀರಿನ ಲಭ್ಯತೆಯ ಅಗತ್ಯವಿರುತ್ತದೆ. 
  • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ ಸರಾಸರಿ  800-1200 ಮಿ.ಮೀ ಮಳೆಯಷ್ಟು ನೀರು ಬೇಕಾಗುತ್ತದೆ.

ಉತ್ತಮ ಮಣ್ಣು

ವಿಧ
  • ಮೆಣಸಿನಕಾಯಿ ನೀರು ಹಿಡಿಯುವ ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಮೆಕ್ಕಲು ಹಾಗೂ ಮರಳು ಮಿಶ್ರಿತ ಮೆಕ್ಕಲು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ, ಆದರೆ  ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಇದ್ದರೆ ಅದು ವಿವಿಧ ಪ್ರಕಾರದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. 
ರಸಸಾರ
  • ಉತ್ತಮ ಶ್ರೇಣಿ – ಮಣ್ಣಿನ ರಸಸಾರ 5.5 ಮತ್ತು 6.8 ರ ನಡುವೆ ಇರಬೇಕು.
  • ಅತಿಯಾದ ಆಸಿಡ್ ಮತ್ತು ಕ್ಷಾರೀಯ ಭೂಮಿ ಮೆಣಸು ಬೆಳೆಯಲು ಸೂಕ್ತವಲ್ಲ.
  • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
  • ರಸಸಾರ 6.8 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ಎಲೈಚಿಪುರ ಸನ್ನಮ-ಎಸ್ 4 ಪ್ರಕಾರ
ಅವಧಿ
150-200 ದಿನಗಳು
ವಿಶಿಷ್ಠ ಲಕ್ಷಣ
ಇದನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಕೆಂಪು ಬಣ್ಣ ಮತ್ತು ತುಂಬಾ ಖಾರವಾಗಿರುತ್ತದೆ. ಕ್ಯಾಪ್ಸೈಸಿನ್ -0.2%
ಗುಂಟೂರು ಸನ್ನಮ-ಎಸ್ 4 ಪ್ರಕಾರ
ಅವಧಿ
75 ದಿನಗಳು
ವಿಶಿಷ್ಠ ಲಕ್ಷಣ
ಆಂಧ್ರಪ್ರದೇಶದ ಗುಂಟೂರು, ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಬೆಳೆಲಾಗುತ್ತದೆ. ದಪ್ಪ ಸಿಪ್ಪೆ, ಖಾರ ಮತ್ತು ಕೆಂಪು. ಕ್ಯಾಪ್ಸೈಸಿನ್ -0.226%
ಬ್ಯಾಡಗಿ (ಕಡ್ಡಿ)
ಅವಧಿ
150 ದಿನಗಳು
ವಿಶಿಷ್ಠ ಲಕ್ಷಣ
ಕರ್ನಾಟಕದ ಧಾರವಾಡದಲ್ಲಿ ಬೆಳೆಯಲಾಗುತ್ತದೆ. ಕೆಂಪು ಬಣ್ಣ, ಕಡಿಮೆ ಖಾರ ಅಥವಾ ಖಾರ ಇಲ್ಲದ್ದು. ಕೊಯ್ಲು ಹಂಗಾಮು- ಜನವರಿಯಿಂದ ಮೇ
ಮಧ್ಯಪ್ರದೇಶ ಜಿ.ಟಿ.ಸನ್ನಮ್
ಅವಧಿ
150-200 ದಿನಗಳು
ವಿಶಿಷ್ಠ ಲಕ್ಷಣ
ಮಧ್ಯಪ್ರದೇಶದ ಇಂದೋರ್, ಮಲ್ಕಾಪುರ್ ಚಿಕ್ಲಿ ಮತ್ತು ಎಲಾಚ್ಪುರ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕೆಂಪು ಬಣ್ಣ ಮತ್ತು ಖಾರ ಕೊಯ್ಲು ಹಂಗಾಮು- ಜನವರಿಯಿಂದ ಮಾರ್ಚ್

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ
  • ವಿಧಾನ-1

    • 1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 0.08 ಎಕರೆ (3 ಗುಂಟೆ) ಸಸಿ ಮಡಿ ಅಗತ್ಯವಿದೆ
    • 7.5 ಮೀ ಉದ್ದ X 1.2 ಮೀ ಅಗಲ X 10 ಸೆಮಿ. ಎತ್ತರದ ಆರು ಮಡಿಗಳನ್ನು ತಯಾರಿಸಿ.
    • ಸಾಲಿನಲ್ಲಿ 7.5 ಸೆಂ.ಮೀ ಅಂತರದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಮಣ್ಣಿನಿಂದ ಮುಚ್ಚಿ.
    • ಮಡಿಯಲ್ಲಿನ ಸಸಿಗಳಿಗೆ ಮೊಳಕೆಯೊಡೆಯುವವರೆಗೆ ದಿನದಲ್ಲಿ ಎರಡು ಬಾರಿ ಮತ್ತು ಮೊಳಕೆಯೊಡೆದ ನಂತರ ಒಮ್ಮೆ ನೀರು ಹಾಕಿ.
    • ನಾಟಿ ಮಾಡುವ ಹತ್ತು ದಿನಗಳ ಮೊದಲು ಮೊಳಕೆ ಬಿರುಸಾಗಲು ಸಸಿ ಮಡಿಗಳಿಗೆ ನೀರು ಹಾಕುವ  ಪ್ರಮಾಣವನ್ನು ಕಡಿಮೆ ಮಾಡಿ.
    • ಕೊಳೆ ರೋಗದಿಂದ (ಡ್ಯಾಂಪಿಂಗ್ ರೋಗ) ಸಸಿಮಡಿಯನ್ನು ಸಂರಕ್ಷಿಸಲು ಬೀಜ ಮೊಳಕೆಯೊಡೆಯುವ 3 ದಿನಗಳ ನಂತರ ರಿಡೋಮಿಲ್ @ 20 ಗ್ರಾಂ.10 ಲೀ ನೀರಿನ್ನು ಸಿಂಪಡನೆ ಮಾಡಿ.
    • ಬಿತ್ತನೆ ಮಾಡಿದ 25 ದಿನಗಳ ನಂತರ 19:19:19 @ 5 ಗ್ರಾಂ + ಥಿಯೊಮೆಥೋಕ್ಷೊಮ್@ 0.25 ಗ್ರಾಂ/ಲೀಟರ್ ನೀರನ್ನು ಸಿಂಪಡನೆ ಮಾಡಿ.

    ವಿಧಾನ-2

    • ಪ್ರೊ ಟ್ರೇಗಳಲ್ಲಿ  ಪ್ರತಿ ಟ್ರೇ @ 1.2 ಕೆಜಿ ಪ್ರಮಾಣದಲ್ಲಿ ಕೊಕೊಪೀಟ್  ಹಾಕಿ. 
    • ಪ್ರೋಟ್ರೇಗಳಲ್ಲಿ ಬೀಜೋಪಚಾರ ಮಾಡಿದ ಬೀಜಗಳನ್ನು ಪ್ರತಿ ಕುಣಿಯಲ್ಲಿ @ 1 ಬೀಜದ ಪ್ರಮಾಣದಲ್ಲಿ ಬಿತ್ತನೆ ಮಾಡಿ.
    • ಬೀಜವನ್ನು ಕೊಕೊಪೀಟ್‌ನಿಂದ ಮುಚ್ಚಿ ಮತ್ತು ಟ್ರೇಗಳನ್ನು ಒಂದರ ಮೇಲೊಂದರಂತೆ ಇರಿಸಿ ಮತ್ತು ಮೊಳಕೆಯೊಡೆಯುವಿಕೆ ಪ್ರಾರಂಭವಾಗುವವರೆಗೆ ಪಾಲಿಥೀನ್ ಹಾಳೆಯಿಂದ ಮುಚ್ಚಿ (ಬಿತ್ತನೆ ಮಾಡಿದ 5 ದಿನಗಳ ನಂತರ).
    • 6 ದಿನಗಳ ನಂತರ, ಮೊಳಕೆಯೊಡೆದ ಬೀಜಗಳೊಂದಿಗೆ ಪ್ರೊ ಟ್ರೇಗಳನ್ನು ಪ್ರತ್ಯೇಕವಾಗಿ ಶೆಡ್ ನೆಟನಲ್ಲಿ ಇರಿಸಿ.
ನರ್ಸರಿ ಅವಧಿ
  • ಅವಧಿ-35 ದಿನಗಳು 
  • ಎಲೆಗಳು ಕಡು ಹಸಿರು ಮತ್ತು ಕಾಂಡ ದಪ್ಪಗಾದಾಗ ಸಸ್ಯಗಳು ನಾಟಿ ಮಾಡಲು ಸಿದ್ಧವಾಗುತ್ತವೆ
ಬೀಜದ ಪ್ರಮಾಣ
ತಳಿಗಳು
380.0 - 400.0 ಗ್ರಾಂ/ಎಕರೆಗೆ
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿ ನೀಡುವ ತಳಿ

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

    • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

    ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

    • ಕಾರ್ಬೆಂಡೆಜಿಮ್- 2 ಗ್ರಾಂ 

    ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಮಡಿ ತಯಾರಿ- ಟ್ರಾಕ್ಟಾರ್ ಸಹಾಯದಿಂದ 75 ಸೆಂ.ಮೀ ಅಥವಾ 60 ಸೆಂ.ಮೀ ಅಂತರದಲ್ಲಿ ಬದು ಮತ್ತು ನೇಗಿಲ ಸಾಲುಗಳನ್ನು ನಿರ್ಮಿಸಿ. 

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.9 ಅಡಿ
ಗಿಡಗಳ ನಡುವಿನ ಅಂತರ
0.9 ಅಡಿ
ಗಿಡಗಳ ಸಂಖ್ಯೆ
22,220
ಹೈಬ್ರಿಡ್
ಸಾಲುಗಳ ಅಂತರ
1.5 ಅಡಿ
ಗಿಡಗಳ ನಡುವಿನ ಅಂತರ
1.5 ಅಡಿ
ಗಿಡಗಳ ಸಂಖ್ಯೆ
19,750

ಬೇರು ಉಪಚಾರ

  • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
  • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
  • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
  • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

  • ಸಸಿಗಳನ್ನು ಬದುಗಳ ಮೇಲೆ 60 ಸೆಂ.ಮೀ ಅಂತರದಲ್ಲಿ  ಕಸಿ ಮಾಡಿ.

ಪೋಷಕಾಂಶಗಳ ನಿರ್ವಹಣೆ

  • 40:20:20 ಕಿ.ಗ್ರಾಂ. ಎನ್‌ಪಿಕೆ ಪ್ರತಿ ಎಕರೆಗೆ 
  • ಬಿತ್ತನೆಯ ಸಮಯದಲ್ಲಿ ಹಾಕಿ(ಪ್ರತಿ ಎಕರೆ)- 

ಯೂರಿಯಾ – 44 ಕಿ.ಗ್ರಾಂ.

ಎಸಎಸಪಿ – 122 ಕಿ.ಗ್ರಾಂ.

ಎಮ್ಓಪಿ – 34 ಕಿ.ಗ್ರಾಂ.

  • ಕಸಿ ಮಾಡಿದ 30 ದಿನಗಳ ನಂತರ- 22 ಕಿ.ಗ್ರಾ. ಯೂರಿಯಾ
  • ಕಸಿ ಮಾಡಿದ 45 ದಿನಗಳ ನಂತರ – 22 ಕಿ.ಗ್ರಾ. ಯೂರಿಯಾ

ನೀರಾವರಿ

  • ಹನಿ ನೀರಾವರಿ- ಪರ್ಯಾಯ ದಿನಗಳಲ್ಲಿ
  • ಕಾಲುವೆ ನೀರಾವರಿ- ವಾರಕ್ಕೊಮ್ಮೆ (ಮಳೆಯಧಾರಿತ ಪ್ರಕಾರ)
  • ಬೇಸಿಗೆ ಹಂಗಾಮು- 5-6 ದಿನಗಳ ಮಧ್ಯಂತರದಲ್ಲಿ
  • ಪ್ರತಿ ಬಾರಿ ಮೆಣಸಿನಕಾಯಿ ಕಟಾವಿನ ನಂತರ ಒಂದು ಸಲ ನೀರು ಹಾಯಿಸಬೇಕು. ಒಂದು ವೇಳೆ ಮೇಲಿನಿಂದ ನೀರು ಒದಗಿಸುವುದಾದರೆ, ಬೆಳಗ್ಗೆ ಬೇಗನೆ ಒದಗಿಸಬೇಕು ಇದರಿಂದ ರಾತ್ರಿಯ ಮೊದಲು ಎಲೆಗಳು ಒಣಗುತ್ತವೆ.

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 400ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್
ಪ್ರತಿ ಎಕರೆಗೆ 100 ಗ್ರಾಂ

ಸಸ್ಯ ಪ್ರಚೋದಕಗಳು

  • ಹೂಬಿಡುವಿಕೆಯನ್ನು ಹೆಚ್ಚಿಸಲು ನಾಟಿ ಮಾಡಿದ 20, 40, 60 ದಿನಗಳ ನಂತರ ಟ್ರೈಕೊಂಟನಾಲ್@ 1.25 ಮಿಲಿ ಪ್ರತಿ ಲೀಟರ್ ನೀರನ್ನು ಸಿಂಪಡನೆ ಮಾಡಿ. 
  • ಹೂ ಉದರುವಿಕೆ ಕಡಿಮೆ ಮಾಡಲು ಮತ್ತು ಕಾಯಿ ಉತ್ಪಾದನೆ ಹೆಚ್ಚಾಗಲು ನೆಪ್ಥಲೀನ್ ಅಸಿಟಿಕ್ ಆಮ್ಲ 2 ಮಿಲಿ ಪ್ರತಿ 1ಲೀಟರ್ ನೀರಿಗೆ ಬೆರೆಸಿ ಕಸಿ ಮಾಡಿದ ನಂತರ 60 ಮತ್ತು 90 ದಿನಗಳಲ್ಲಿ ಸಿಂಪಡನೆ ಮಾಡಿ. 

ಕೀಟ ಮತ್ತು ರೋಗಗಳ ನಿರ್ವಹಣೆ

thrips and aphids in chilli
ರಸ ಹೀರುವ ಕೀಟಗಳು ( ಥ್ರಿಪ್ಸ್ )
ಲಕ್ಷಣಗಳು
ಎಲೆಗಳಿಂದ ರಸ ಹೀರುತ್ತವೆ. ಎಲೆಗಳು ಮೇಲ್ಭಾಗಕ್ಕೆ ಮುದುಡಿ ಕೊಂಡಿರುತ್ತವೆ, ಎಲೆಗಳ ಗಾತ್ರ ಚಿಕ್ಕದಾಗಿರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಥೈಯಾಮೆಥೋಕ್ಸಾಂ
100 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
Damping off disease in chilli plant
ಸಸಿಕೊಳೆ ರೋಗ
ಲಕ್ಷಣಗಳು
ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದ್ದು, ತೆಳ್ಳಗಾಗುತ್ತವೆ . ಸಸಿಮಡಿಗಳಲ್ಲಿ ಕ್ರಮೇಣ ಗಿಡಗಳು ಬಾಡಿ, ಕುಸಿದು ನೆಲಕ್ಕೆ ಬೀಳುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್

250 ಗ್ರಾಂ /ಎಕರೆಗೆ

ಉಪಯೋಗಿಸುವ ವಿಧಾನ
ಗಿಡದ ಬುಡಕ್ಕೆ ಹಾಕಬೇಕು( ಡ್ರೇನ್ಚಿಂಗ್ ಮಾಡಿ)
ಬೂದಿ ರೋಗ
ಲಕ್ಷಣಗಳು
ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆಗಳನ್ನು ಕಾಣಬಹುದು.ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಬೂದಿ ರೋಗ
ಲಕ್ಷಣಗಳು
ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆಗಳನ್ನು ಕಾಣಬಹುದು.ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
fusarium wilt disease in chilli farming
ಫುಸ್ಸರಿಯಂ ಸೊರಗುರೋಗ ( ಥ್ರಿಪ್ಸ್ )
ಲಕ್ಷಣಗಳು
ಮೊದಲು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ನಂತರ ಮೇಲಿನಿಂದ ಕೇಳೆಕ್ಕೆ ಒಣಗುತ್ತಾ ಬರುತ್ತವೆ. ಎಲೆಗಳು ಮೇಲ್ಮುಖವಾಗಿ ಒಳಕ್ಕೆ ಸುರುಳಿಯಾಗುತ್ತವೆ. ಎಲೆಗಳು ಹಳದಿಬಣ್ಣಕ್ಕೆ ತಿರುಗಿ ಗಿಡ ಸಾಯುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ಮೆಟಲಾಕ್ಸಿಲ್ +ಮಂಕೋಝೇಬ್ 64% WP
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು( ಡ್ರೇನ್ಚಿಂಗ್ ಮಾಡಿ)
ಕಾಯಿಕೊರಕ ಹುಳು
ಲಕ್ಷಣಗಳು
ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದ್ದು, ತೆಳ್ಳಗಾಗುತ್ತವೆ . ಸಸಿಮಡಿಗಳಲ್ಲಿ ಕ್ರಮೇಣ ಗಿಡಗಳು ಬಾಡಿ, ಕುಸಿದು ನೆಲಕ್ಕೆ ಬೀಳುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಥೈಯಾಮೆಥೋಕ್ಸಾಂ + ಲ್ಯಾ೦ಬ್ಧ ಸೈಹಾಲೊಥ್ರಿನ್ ಮಿಲಿ.ಲಿ/ ಪ್ರತಿ ಎಕರೆಗೆ

100 ಮಿಲಿ.ಲಿ / ಪ್ರತಿ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಅಂತ್ರಾಕ್ನೋಸ್ (ಕಾಯಿ ಕೊಳೆಯುವ ರೋಗ )
ಲಕ್ಷಣಗಳು
ಕಾಯಿಯ ಮೇಲೆ ಕಂದು -ಕಪ್ಪು ಬಣ್ಣದ ಕಲೆಗಳಾಗುತ್ತವೆ. ಕಾಯಿ ಒಣಗುವುದು ಮತ್ತು ಕೊಳೆತುಹೋಗುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಬ್ಯಾಕ್ಟೇರಿಯ ಎಲೆ ಚ್ಚುಕ್ಕೆ ರೋಗ
ಲಕ್ಷಣಗಳು
ಎಲೆಗಳಲ್ಲಿ ವೃತ್ತಾಕಾರದ ಅಥವಾ ಆಕಾರವಿಲ್ಲದ ಗಾಢ ಕಂದು ಅಥವಾ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.ನಂತರ ಒಂದಕ್ಕೊಂದು ಸೇರಿಕೊಂಡು ಅವು ಒಣಗುತ್ತವೆ.ಕಾಯಿಯ ಮೇಲೆ ನೀರು ತುಂಬಿದಂತಹ ಸುತ್ತ ಹಳದಿ ಬಣ್ಣವಿರುವ ಚ್ಚುಕ್ಕೆಗಳಾಗುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್ + ಸ್ಟ್ರೆಪ್ಟೊಸೈಕ್ಲಿನ್
400ಗ್ರಾಂ + 60ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
150-180 ದಿನಗಳು
ಕಟಾವಿನ ಬಾರಿ
5 ರಿಂದ 6
ಕೊಯ್ಲಿನ ಮಧ್ಯಂತರ
10 ದಿನಗಳು

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಪ್ರಮಾಣ
7.5-10 ಕ್ವಿಂಟಾಲ್/ಎಕರೆಗೆ
ಕೊಯ್ಲು ಮಾಡಿದ ಒಟ್ಟು ಇಳುವರಿ
30 ಕ್ವಿಂಟಾಲ್ /ಎಕರೆಗೆ

4 thoughts on “Red Chilli_Kannada

  1. Pingback: Red Chilli – LeanAgri

Leave a Reply

Your email address will not be published. Required fields are marked *