Paddy

ಭತ್ತ

ಅಂದಾಜು

ಅಂದಾಜು ಇಳುವರಿ

12-16  ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

160 ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )

14,915

ಅಂದಾಜು ಆದಾಯ (ರೂ )

24,000

ಉತ್ತಮ ವಾತಾವರಣ

ವಾತಾವರಣ
 • ಈ ಬೆಳೆಗೆ ಉಷ್ಣತೆ ಜೊತೆಗೆ ತೇವಾಂಶ ವಾತಾವರಣ ಬೇಕು ಮತ್ತು ಇದು ದೀರ್ಘಕಾಲದ ಬಿಸಿಲು ಮತ್ತು ಸಾಕಷ್ಟು ನೀರಿರುವ ಪ್ರದೇಶಕ್ಕೆ ಸೂಕ್ತವಾಗಿರುತ್ತದೆ.
 • ಭತ್ತ ಬೆಳೆಯಲು 65 ರಿಂದ 75% ಕ್ಕಿಂತ ಹೆಚ್ಚು ತೇವಾಂಶ ಒಳ್ಳೆಯದು
ತಾಪಮಾನ
 • ಭತ್ತದ ಬೆಳೆಗೆ ಸರಾಸರಿ 21 ರಿಂದ 35°C ತಾಪಮಾನ ಬೇಕು
 • ಇದು ಗರಿಷ್ಠ 40 ರಿಂದ 42°C ತಾಪಮಾನವನ್ನು ಸಹಿಸಿಕೊಳ್ಳಬಲ್ಲದು.
 • ಕೃಷಿ ಪ್ರಕ್ರಿಯೆಗಳಾದ ಮೊಳಕೆಯೊಡೆಯುವಿಕೆ (10°C), ಹೂಬಿಡುವಿಕೆ (23°C), ತೆನೆಯೊಡೆಯುವ ಹಂತ(26-29°C), ಧಾನ್ಯಗಳ ರಚನೆ (21°C) ಮತ್ತು ಮಾಗುವ ಹಂತ (20-25°C) ನಂತಹ ಪ್ರತಿಯೊಂದು ಹಂತದಲ್ಲಿ ಬೇರೆ ತಾಪಮಾನದ ಅವಶ್ಯಕತೆಯಿದೆ ಎಂದು ಗಮನಿಸಲಾಗಿ
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಭತ್ತದ ಅಧಿಕ ಇಳುವರಿ ಮತ್ತು ಗುಣಮಟ್ಟಕ್ಕೆ ಬೆಳವಣಿಗೆಯ ಹಂತದಲ್ಲಿ ಸಾಕಷ್ಟು ಮತ್ತು ಚೆನ್ನಾಗಿ ಚದುರಿದ ಮಳೆ ಅತ್ಯಗತ್ಯ.
 • ಭತ್ತವನ್ನು 800 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.

ಉತ್ತಮ ಮಣ್ಣು

ವಿಧ
 • ಚೆನ್ನಾಗಿ ನೀರು ಹಿಡಿದಿಟ್ಟುಕೊಳ್ಳುವ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು ಮತ್ತು ಇದು ಲವಣದ ಅಂಶವನ್ನು ತಡೆದುಕೊಳ್ಳುತ್ತದೆ
 • ಶ್ರೀ ಪದ್ಧತಿ- ಲವಣ ಅಥವಾ ಆಸಿಡ್ ಅಂಶವಿರುವ ಮಣ್ಣು ಶ್ರೀ ಪದ್ಧತಿ ಕೃಷಿಗೆ ಸೂಕ್ತವಲ್ಲ.
ರಸಸಾರ
 • ಇದನ್ನು ಅಲ್ಪ ಆಸಿಡ್ ಅಂಶ ಸ್ವಲ್ಪ ಲವಣದ ಅಂಶವಿರುವ ಮಣ್ಣಿನಲ್ಲಿ ಬೆಳೆಯಬಹುದು.
 • ಉತ್ತಮ ಶ್ರೇಣಿ 5.0 to 8.0
 • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 8.0 ಕ್ಕಿಂತ ಕಡಿಮೆಯಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ಇಂದ್ರಾಯಿಣಿ
ಅವಧಿ
135-140 ದಿನಗಳು
ವಿಶಿಷ್ಠ ಲಕ್ಷಣ
ಉದ್ದ ಮತ್ತು ತೆಳುವಾದ ಧಾನ್ಯಗಳು
ಫುಲೆ ಮಾವಳ
ಅವಧಿ
125-130 ದಿನಗಳು
ವಿಶಿಷ್ಠ ಲಕ್ಷಣ
ಉದ್ದ ಮತ್ತು ದಪ್ಪ, ಅಗಲವಾದ ಧಾನ್ಯಗಳು
ಸುಗಂಧಾ
ಅವಧಿ
110-115 ದಿನಗಳು
ವಿಶಿಷ್ಠ ಲಕ್ಷಣ
ಉದ್ದ ವಾಸನೆಯುಳ್ಳ ಧಾನ್ಯಗಳು
ಸಹ್ಯಾದ್ರಿ-1
ಅವಧಿ
130-135 ದಿನಗಳು
ವಿಶಿಷ್ಠ ಲಕ್ಷಣ
ಉದ್ದ ಮತ್ತು ತೆಳುವಾದ ಧಾನ್ಯಗಳೊಂದಿಗೆ ಹೆಚ್ಚಿನ ಇಳುವರಿ ನೀಡುವ ಹೈಬ್ರಿಡ್ ತಳಿ

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ
 • ಸಸಿ ಮಡಿ ತಯಾರಿಕೆ 

  • 1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 0.1 ಎಕರೆ (4 ಗುಂಟೆ) ಸಸಿ ಮಡಿ ಅಗತ್ಯವಿದೆ
  • 1.25 ಮೀ ಅಗಲ 10 ಸೆಂ.ಮೀ ಎತ್ತರ ಮತ್ತು ಅನುಕೂಲಕರ ಉದ್ದವಿರುವ ಏರು ಮಡಿಯನ್ನು ತಯಾರಿಸಿ
  • ನಾಟಿ ಮಾಡುವ ಮೊದಲು 250 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ, 1 ಕಿ.ಗ್ರಾಂ. ಯೂರಿಯಾವನ್ನು ಹಾಕಿ.
  • ಶ್ರೀ ಪದ್ಧತಿಗಾಗಿ-

   • ಮಡಿ 4 ಅಡಿ ಅಗಲ ಇರಬೇಕು. 
   • ಅಗತ್ಯ ಮತ್ತು ಲಭ್ಯವಿರುವ ಅಂತರವನ್ನು ಅವಲಂಬಿಸಿ ಉದ್ದವು ಬದಲಾಗಬಹುದು.
   •  ಇದನ್ನು ಹೆಚ್ಚಿಸಲು, 400 ಚದರ ಅಡಿ ವಿಸ್ತೀರ್ಣದ ಸಸಿ ಮಡಿ ಅಗತ್ಯವಿರುತ್ತದೆ. 
   • ಅನುಕೂಲಕ್ಕೆ ಅನುಗುಣವಾಗಿ ಒಂದೇ ಮಡಿ ಅಥವಾ ಹಲವಾರು ಸಣ್ಣ ಮಡಿಗಳನ್ನು (4 x 25 ಅಡಿ 4 ಮಡಿಗಳು) ತಯಾರಿಸಬಹುದು. 
   • 8-12 ದಿನಗಳ ಮೊಳಕೆ ಬೇರುಗಳು 30 ಇಂಚುಗಳವರೆಗೆ ಇಳಿಯುವುದರಿಂದ, 5-6 ಇಂಚುಗಳಷ್ಟು ಏರು ಮಡಿಗಳನ್ನು ತಯಾರಿಸುವುದು ಅವಶ್ಯಕ.
   • ಸಸಿ ಮಡಿಯನ್ನು ಈ ರೀತಿ ತಯಾರಿಸಲಾಗುತ್ತದೆ:
   • ಮೊದಲ ಪದರ: 1 ಇಂಚು ದಪ್ಪ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ, 2 ನೇ ಪದರ 1 ½ ಇಂಚು ಮಣ್ಣು, 3 ನೇ ಪದರ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಮತ್ತು 4 ನೇ ಪದರ 2 ½ ಇಂಚು ಮಣ್ಣು 
   • ಈ ಎಲ್ಲಾ ಪದರಗಳನ್ನು ಸರಿಯಾಗಿ ಮಿಶ್ರಣ ಮಾಡಿ
   • ಸಸಿ ಮಡಿ ಸುತ್ತಲೂ ಕಾಲುವೆ ಮಾಡಿ. 
   • ಒದ್ದೆಯಾದ ಮಣ್ಣನ್ನು ಮಡಿಯಿಂದ ಬೀಳದಂತೆ ತಡೆಗಟ್ಟಲು ಮರದ ಹಲಗೆಗಳು, ಬಿದಿರುಗಳು ಅಥವಾ ಯಾವುದೇ ಸೂಕ್ತವಾದ ವಸ್ತುಗಳಿಂದ ಎಲ್ಲಾ ಕಡೆಗಳಲ್ಲಿ ಸುರಕ್ಷಿತವಾಗಿಸಬೇಕು.
   • ಸಸಿ ಮಡಿಗಳಲ್ಲಿ ಬಿತ್ತನೆ ಮಾಡಲು ಬೀಜಗಳ ಮೊಳಕೆಯೊಡೆಯುವಿಕೆ: ಭತ್ತದ ಬೀಜವನ್ನು 12 ಗಂಟೆಗಳ ಕಾಲ ನೆನೆಸಿಡಬೇಕು. ನೆನೆಸಿದ ಬೀಜವನ್ನು ಗೋಣಿ ಚೀಲಕ್ಕೆ ಹಾಕಿ ಅಥವಾ ಒಂದು ಕಡೆ ರಾಶಿ ಮಾಡಿ ಅದನ್ನು ಗೋಣಿ ಚೀಲದಿಂದ ಮುಚ್ಚಿ. 24 ಗಂಟೆಗಳ ಕಾಲ ಹಾಗೆಯೆ ಬಿಡಿ. ಈ ಸಮಯದಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ನೀವು ಬೀಜದಿಂದ ಬಿಳಿ ಬೇರು ಅಥವಾ ಮೂಲಾಂಕುರ ಹೊರಹೊಮ್ಮುವುದನ್ನು ಗಮನಿಸಬಹುದು. ಈ ಬೀಜವನ್ನು ಸಸಿಮಡಿಗಳಲ್ಲಿ ಬಿತ್ತನೆ ಮಾಡಲು ಬಳಸಲಾಗುತ್ತದೆ. ಬಿತ್ತನೆ ವಿಳಂಬವಾದರೆ, ಬೇರುಗಳು ಬೆಳೆದು ಒಟ್ಟಿಗೆ ಸೇರುತ್ತವೆ, ಆದ್ದರಿಂದ ಹೆಚ್ಚಿನ ಜಾಗವನ್ನು ಬಿಟ್ಟು ಬೀಜಗಳನ್ನು ಬಿತ್ತನೆ ಮಾಡುವುದು ತುಂಬಾ ಕಷ್ಟ. 
ನರ್ಸರಿ ಅವಧಿ
 • ಅವಧಿ- 30 ರಿಂದ 40 ದಿನಗಳು
ಬೀಜದ ಪ್ರಮಾಣ
ದಪ್ಪ ಬೀಜದ ತಳಿ
ಪ್ರತಿ ಎಕರೆಗೆ 22 ಕಿ.ಗ್ರಾಂ.
ಸಣ್ಣ ಬೀಜದ ತಳಿ
ಪ್ರತಿ ಎಕರೆಗೆ 16 ಕಿ.ಗ್ರಾಂ.
ಹೈಬ್ರಿಡ್
ಪ್ರತಿ ಎಕರೆಗೆ 8 ಕಿ.ಗ್ರಾಂ
ಶ್ರೀ ಪದ್ದತಗಾಗಿ
ಎಕರೆಗೆ 2 ಕಿ.ಗ್ರಾಂ. ಬೀಜ

ಬೀಜೋಪಚಾರ

 • ಬೀಜಗಳನ್ನು ಕೆಳಗೆ ತಿಳಿಸಿರುವ ರಾಸಾಯನಿಕಗಳಿಂದ ಬೀಜೋಪಚಾರ ಮಾಡಿ

 •  ಕ್ಲೋರೋಪ್ಯರಿಫಾಸ್- 4 ಮಿಲಿ
  ಸಲಹೆ- ಮೇಲಿನ ಪ್ರಮಾಣವನ್ನು ಎರಡು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

 • ಕಾರ್ಬೆಂಡೆಜಿಮ್- 2 ಗ್ರಾಂ
  ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ –
         1) ಕೊಟ್ಟಿಗೆ ಗೊಬ್ಬರ-2 ಟನ್
         2) ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
 • ಈ ಮೇಲಿನ ಮಿಶ್ರಣವನ್ನು ಮಣ್ಣಿನಲ್ಲಿ ಹರಡಿ ಮತ್ತು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.
 • ಶ್ರೀ ಪದ್ಧತಿಗಾಗಿ- ಎಚ್ಚರಿಕೆಯಿಂದ
  ಸಮತಟ್ಟು ಮತ್ತು ಕುಂಟೆ ಹೊಡೆಯುವುದು ಅಗತ್ಯವಿದೆ, ಹಾಗೆಯೆ ನೀರು ಹರಿದುಹೋಗಲು ಎರಡು ಮೀಟರ್ ಅಂತರದಲ್ಲಿ 30 ಸೆಂ.ಮೀ ಅಗಲದ ಕಾಲುವೆ ಮಾಡುವುದು ಅವಶ್ಯಕವಾಗಿದೆ.
  ಅಗತ್ಯವಿರುವ ಅಂತರದಲ್ಲಿ ಬಿತ್ತನೆ ಮಾಡಲು ಗಂಟು ಹಾಕಿದ ಹಗ್ಗದ ಸಹಾಯದಿಂದ ಗುರುತು ಮಾಡಿಕೊಳ್ಳಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ಅಲ್ಪಕಾಲದ ತಳಿಗಳಿಗೆ/ ಶ್ರೀ ಪದ್ಧತಿ
ಸಾಲುಗಳ ಅಂತರ
0.6 ಅಡಿ
ಗಿಡಗಳ ನಡುವಿನ ಅಂತರ
0.6 ಅಡಿ
ಗಿಡಗಳ ಸಂಖ್ಯೆ
122,300
ಮಧ್ಯಮ ಮತ್ತು ಧೀರ್ಘ ಕಾಲದ ತಳಿಗಳಿಗೆ ಎಸ್‌ಆರ್‌ಐ
ಸಾಲುಗಳ ಅಂತರ
0.8 ಅಡಿ
ಗಿಡಗಳ ನಡುವಿನ ಅಂತರ
0.8 ಅಡಿ
ಗಿಡಗಳ ಸಂಖ್ಯೆ
68,300

ಬಿತ್ತನೆ

 • ದಟ್ಟ ಬಿತ್ತನೆಯ ಬದಲು ಹೆಚ್ಚುವರಿ ಅಂತರದಲ್ಲಿ ಬಿತ್ತನೆ ಮಾಡಿದರೆ, ಭತ್ತದ ಬೇರು ಮತ್ತು ಗೊನೆಗಳು ಉತ್ತಮವಾಗಿ ಬೆಳೆಯುತ್ತವೆ.

ನಾಟಿ ಮಾಡುವುದು

 • 30 ರಿಂದ 40 ದಿನಗಳ ಸಸಿಗಳನ್ನು ನಾಟಿ ಮಾಡಲಾಗುತ್ತದೆ.
 • ಸಸಿ ಎತ್ತರ 12 ರಿಂದ 15 ಸೆಂ.ಮೀ.
 • ಬೋದುಗಳ ಮೇಲೆ 2 ಸಸಿಗಳನ್ನು ಮತ್ತು ಹೈಬ್ರಿಡ್ ಆಗಿದ್ದಲ್ಲಿ 1 ಸಸಿಯನ್ನು ನೆಡಬೇಕು.
 • ಶ್ರೀ ಪದ್ದತಿಗಾಗಿ- 8 ರಿಂದ 12 ದಿನಗಳ ಸಸಿಗಳಿಗೆ ಎರಡು ಎಲೆಗಳು ಬಂದ ತಕ್ಷಣವೇ ನಾಟಿ ಮಾಡಿ, ಮತ್ತು ಬಿತ್ತನೆ ಮಾಡಿದ ಕನಿಷ್ಠ15 ದಿನಗಳೊಳಗೆ ಉಪಯೋಗಿಸಿ.
 • ಸಸಿಗಳನ್ನು ಅವುಗಳ ಬೇರುಗಳ ಸಹಿತ ಕಸಿ  ಮಾಡಿದ ಚೀಲದ ಜೊತೆಯೇ ನಾಟಿ ಮಾಡಬೇಕು. ಸಸಿಗಳನ್ನು ಮಣ್ಣಿನಲ್ಲಿ ತುಂಬಾ ಆಳದವರೆಗೆ ಹಚ್ಚದೆ ಬಿತ್ತನೆ ಮಾಡುವ ಜಾಗದಲ್ಲಿ 1-2 ಸೆ.ಮಿ. ಅಂತರದಲ್ಲಿ ನಾಟಿಕೆ ಮಾಡಬೇಕು.
 • ಬೇಗನೆ ಬೆಳೆಯಲು ಪ್ರತ್ಯೇಕ ಮೊಳಕೆಯನ್ನು ಎಲ್ (L) -ಆಕಾರದಲ್ಲಿ ನಾಟಿ ಮಾಡಬೇಕು (ಸಮತಲ ಮತ್ತು ಲಂಬ ರೇಖೆಗಳ ಮದ್ಯಬಿಂದುವಿನಲ್ಲಿ 1 ಇಂಚಿನಿಂದ ಪ್ರಾರಂಭಿಸಿ ಮತ್ತು ತೋರು ಬೆರಳನ್ನು ಬಳಸಿ ನಿಧಾನವಾಗಿ ಕೆಳಕ್ಕೆ ಎಳೆಯಿರಿ. ಹೆಬ್ಬೆರಳು ಮತ್ತು ತೋರು ಬೆರಳು ಬಳಸಿ ಮಣ್ಣಿನ ಜೊತೆಗೆ ಸಸಿಗಳನ್ನು ತೆಗೆದುಕೊಳ್ಳಲಾಗುತ್ತದೆ).

ಪೋಷಕಾಂಶಗಳ ನಿರ್ವಹಣೆ

 • ದೇಸಿ ತಳಿ ಭತ್ತಕ್ಕಾಗಿ

  ಬೇಕಾಗುವ ಒಟ್ಟು ಪ್ರಮಾಣ: 100:50:50 ಎನ್‌ಪಿಕೆ  ಕಿ.ಗ್ರಾಂ. ಪ್ರತಿ ಎಕರೆಗೆ ಎನ್‌ಪಿಕೆ ಕಿ.ಗ್ರಾಂ. ಪ್ರತಿ ಎಕರೆಗೆ

  • ಬಿತ್ತನೆ ಸಮಯದಲ್ಲಿ – 75 ಕೆಜಿ ಯೂರಿಯಾ + 312 ಕೆಜಿ ಯಸ್. ಯಸ.ಪಿ. +83 ಕೆಜಿ ಎಂ.ಓ.ಪಿ + 25 ಕೆಜಿ ಮೆಗ್ನೇಸಿಯಂ ಸಲ್ಪೇಟ್   ( ಪ್ರತಿ ಎಕರೆಗೆ ) 
  • ಬಿತ್ತನೆ ಮಾಡಿದ 30 ದಿನಗಳ ನಂತರ – 54.5 ಕೆಜಿ ಯೂರಿಯಾ 
  • ಬಿತ್ತನೆ ಮಾಡಿದ 60 ದಿನಗಳ ನಂತರ – 54.5 ಕೆಜಿ ಯೂರಿಯಾ
  • ಹೈಬ್ರಿಡ್ ಭತ್ತಕ್ಕಾಗಿ

  ಬೇಕಾಗುವ ಒಟ್ಟು ಪ್ರಮಾಣ: 120:50:50 ಎನ್‌ಪಿಕೆ  ಕಿ.ಗ್ರಾಂ. ಪ್ರತಿ ಎಕರೆಗೆ 

  • ಬಿತ್ತನೆ ಸಮಯದಲ್ಲಿ – 130 ಕೆಜಿ ಯೂರಿಯಾ + 312 ಕೆಜಿ ಯಸ್. ಯಸ.ಪಿ. +83 ಕೆಜಿ ಎಂ.ಓ.ಪಿ 
  • ಬಿತ್ತನೆ ಮಾಡಿದ 30 ದಿನಗಳ ನಂತರ – 65 ಕೆಜಿ ಯೂರಿಯಾ 
  • ಬಿತ್ತನೆ ಮಾಡಿದ 60 ದಿನಗಳ ನಂತರ – 65 ಕೆಜಿ ಯೂರಿಯಾ 

ನೀರಾವರಿ

 • ಪಾತಳಿ ನೀರಾವರಿ – ಸಸ್ಯ ಬೆಳವಣಿಗೆ ಸಮಯದಲ್ಲಿ ಹೊಲದಲ್ಲಿ ನೀರು ನಿಲ್ಲುವಂತೆ ಮಾಡಿ.
 • ಶ್ರೀ ಪದ್ಧತಿಗಾಗಿ-
  ನೀರಾವರಿ ಅಗತ್ಯವಿರುವುದಿಲ್ಲ. ಮಣ್ಣಿನಲ್ಲಿ ಕೂದಲಿನ ಎಳೆಯಂತೆ ಬಿರುಕು ಬೀಳಲು ಪ್ರಾರಂಭಿಸಿದಾಗ, ಹೊಲಕ್ಕೆ ನೀರು ಹಾಯಿಸಿ.
 • ಕಳೆ ತೆಗೆಯುವ ಮೊದಲು ಹೊಲಕ್ಕೆ ನೀರು ಹಾಯಿಸಿದ್ದನ್ನು ಖಚಿತಪಡಿಸಿಕೊಳ್ಳಿ.
 • ಹೂಬಿಡುವ ಹಂತದಿಂದ ಹಿಡಿದು ತೆನೆ ಬಲಿಯುವವರೆಗೂ ಹೊಲದಲ್ಲಿ 1 ಇಂಚು ನೀರು ನಿಲ್ಲಿಸಬೇಕು 70% ಧಾನ್ಯಗಳು ಗಟ್ಟಿಯಾದ ನಂತರ ನೀರನ್ನು ತೆಗೆಯಬಹುದು.

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 - 5 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 300ಗ್ರಾಂ
ನಾಟಿ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ
2,4-D
ಪ್ರತಿ ಎಕರೆಗೆ 400 ಗ್ರಾಂ

ಸಸ್ಯ ಪ್ರಚೋದಕಗಳು

 • ಇಳುವರಿಯನ್ನು ಹೆಚ್ಚಿಸಲು ನಾಟಿ ಮಾಡಿದ 50 ದಿನಗಳ ನಂತರ ಎಕರೆಗೆ 1 ಕಿ.ಗ್ರಾಂ. ಜಿಂಕ್ ಸಲ್ಪೇಟ್ –  400 ಮಿಲಿ ಬೋರಿಕ್ ಆಸಿಡ್ ಸಿಂಪಡಿಸಿ.
 • ಹೆಚ್ಚಿನ ಇಳುವರಿಗಾಗಿ ಮೂಲ ಗೊಬ್ಬರದ ಜೊತೆಗೆ ಸಿಲಿಕಾನ್ ಸೇರಿಸಿ. 

ಕೀಟ ಮತ್ತು ರೋಗಗಳ ನಿರ್ವಹಣೆ

ರಸ ಹೀರುವ ಕೀಟಗಳು ( ಥ್ರಿಪ್ಸ್ )
ಲಕ್ಷಣಗಳು
ಎಲೆಗಳಿಂದ ರಸ ಹೀರುತ್ತವೆ.ಎಲೆಗಳ ಮೇಲೆ ಬೆಳ್ಳಿಯ ಎಳೆಗಳಂತೆ ಕಂಡುಬರುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್
200 ಮಿಲಿ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
ಬೊಬ್ಬೆ ರೋಗ/ ವಿಕೃತ ರೋಗ
ಲಕ್ಷಣಗಳು
ಮರಿಹುಳುಗಳು ಬೆಳೆಯುತ್ತಿರುವ ಗಿಡದ ಬುಡವನ್ನು ಕೊರೆದು ತಿನ್ನುತ್ತದೆ. ಈರುಳ್ಳಿ ಎಲೆಗಳಂತೆ,ಕೊಳವೆಯಂತೆ ಬೊಬ್ಬೆಗಳಾಗುತ್ತವೆ/ ಸೋಂಕಿತ ಪೈರು ತೆನೆಯೊಡೆಯುವುದಿಲ್ಲ.
ಬೇಕಾಗುವ ಔಷಧಗಳು ಪ್ರಮಾಣ
ಕ್ಲೋರೋಪೈರಿಫೋಸ್

400 ಮಿಲಿ / ಎಕರೆಗೆ

ಉಪಯೋಗಿಸುವ ವಿಧಾನ
ಜಮೀನಿಗೆ ನಾಟಿಮಾಡುವ ಮೊದಲು ಔಷಧದಲ್ಲಿ ಬೇರನ್ನು ನೆನೆಸಿ ನಾಟಿ ಮಾಡಬೇಕು
ಕಂದು ಚುಕ್ಕೆ / ಮಚ್ಚೆ ರೋಗ
ಲಕ್ಷಣಗಳು
ಎಲೆ ಮತ್ತು ಧಾನ್ಯಗಳ ಮೇಲೆ ಕಪ್ಪು ಚ್ಚುಕ್ಕೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಟ್ರೈಕೋಡರ್ಮ ವಿರಿಡೆ + ಸುಡೋಮೋನಾಸ್ ಪ್ಲೋರಾಜೇಂಟ್
200 ಗ್ರಾಂ /ಎಕರೆಗೆ & 200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ಬಿತ್ತನೆ ಬೀಜದೊಂದಿಗೆ ಬೆರೆಸಿ ನಂತರ ಬಿತ್ತನೆ ಮಾಡಿ.
ಬೆಂಕಿ ರೋಗ
ಲಕ್ಷಣಗಳು
ಬೆಳೆ ಪೂರ್ತಿ ಸುಟ್ಟಂತೆ, ಬೆಂದುಹೋದಂತೆ ಕಂಡುಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೈಜಿಂ
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಕಾಂಡ ಕೊರಕ
ಲಕ್ಷಣಗಳು
ಮುಖ್ಯ ಕಾಂಡ ಒಣಗುತ್ತದೆ, ಗಿಡ ಸತ್ತುಹೋದಂತೆ ಕಂಡುಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಥೈಯಾಮೆಥೋಕ್ಸಾಂ
100 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ.

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
110 ರಿಂದ 140 ದಿನಗಳು
ಎಸ್‌ಆರ್‌ಐ / ಶ್ರೀ ಪದ್ದತಿಯಲ್ಲಿ
100-130 ದಿನಗಳು
ಧಾನ್ಯದ ಬಣ್ಣವು ಹಸಿರು ಬಣ್ಣದಿಂದ ಬಂಗಾರದ ಬಣ್ಣಕ್ಕೆ ಬದಲಾಗುತ್ತದೆ ಮತ್ತು ಮೇಲ್ಭಾಗ ಬಿರುಸಾಗುತ್ತದೆ.

ಇಳುವರಿ

ಇಳುವರಿ
ದೇಸಿ ತಳಿ
12-16 ಕ್ವಿ/ಪ್ರತಿ ಎಕರೆಗೆ
ಹೈಬ್ರಿಡ್
25 ಕ್ವಿ/ಪ್ರತಿ ಎಕರೆಗೆ
ಎಸ್‌ಆರ್‌ಐ / ಶ್ರೀ ಪದ್ದತಿಯಲ್ಲಿ
20-30% ಹೆಚ್ಚಿನ ಇಳುವರಿ

2 thoughts on “Paddy

 1. Pingback: Paddy – LeanAgri

 2. Pingback: Paddy – BharatAgri

Leave a Reply

Your email address will not be published. Required fields are marked *