Mango

ಮಾವು

ಅಂದಾಜು

ಅಂದಾಜು ಇಳುವರಿ

15-20 ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

200-220  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )
74,977
ಅಂದಾಜು ಆದಾಯ (ರೂ )

1,75,000

ಉತ್ತಮ ವಾತಾವರಣ

ವಾತಾವರಣ
  • ಮಾವು ತೀವ್ರವಾದ ಹಿಮವನ್ನು ಸಹಿಸುವುದಿಲ್ಲ, ವಿಶೇಷವಾಗಿ ಮರವು ಚಿಕ್ಕದಾಗಿದ್ದಾಗ.
  • ಸಮೃದ್ಧವಾಗಿ ಹೂಬಿಡುವುದಕ್ಕಾಗಿ ಹೂಬಿಡುವ ಮೊದಲು ಶುಷ್ಕ ಹವಾಮಾನವು ಒಳ್ಳೆಯದು. 
  • ಹೂಬಿಡುವ ಸಮಯದಲ್ಲಿ ಮಳೆ ಬೆಳೆಗೆ ಹಾನಿಕಾರಕವಾಗಿದೆ ಕಾರಣ ಅದು  ಪರಾಗಸ್ಪರ್ಶಕ್ಕೆ ಅಡ್ಡಿಯುಂಟುಮಾಡುತ್ತದೆ. ಆದರೆ, ಹಣ್ಣಿನ ಬೆಳವಣಿಗೆಯ ಸಮಯದಲ್ಲಿ ಮಳೆ ಒಳ್ಳೆಯದು ಆದರೆ ಭಾರೀ ಮಳೆಯು ಹಣ್ಣಾಗುವ ಮಾವುಗಳಿಗೆ ಹಾನಿಯನ್ನುಂಟುಮಾಡುತ್ತದೆ.
  • ಹಣ್ಣಾಗುವ ಅವಧಿಯಲ್ಲಿ, ಜೋರಾದ ಗಾಳಿ ಮತ್ತು ಬಿರುಗಾಳಿಯಿಂದಾಗಿ, ಬಹಳಷ್ಟು ಹಣ್ಣುಗಳು ಉದುರಿ ಬಿಳುತ್ತವೆ. 
ತಾಪಮಾನ
  • ಬೆಳೆಯುವ ಹಂಗಾಮಿನಲ್ಲಿ ಮಾವಿಗೆ  ಹೆಚ್ಚಿನ ತೇವಾಂಶದ ಜೊತೆಗೆ   24-30°C ತಾಪಮಾನ ಸೂಕ್ತವಾಗಿದೆ. 
  • ಹೆಚ್ಚಿನ ಉಷ್ಣತೆಯು ಮಾವಿಗೆ ಅಷ್ಟೊಂದು ಹಾನಿಕಾರಕವಲ್ಲ, ಆದರೆ ಅಂತಹ ತಾಪಮಾನದಲ್ಲಿ ಕಡಿಮೆ ಆರ್ದ್ರತೆ ಮತ್ತು ಹೆಚ್ಚಿನ ಗಾಳಿ ಇದ್ದರೆ, ಅದರ ಮರವು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.
  • ಚಳಿಗಾಲದಲ್ಲಿ ಸರಾಸರಿ ಕನಿಷ್ಠ ತಾಪಮಾನವು 5°C ಗಿಂತ ಹೆಚ್ಚಿರಬೇಕು.
  • ಮರಗಳು ವಸ೦ತ ಋತುವಿನಲ್ಲಿದ್ದಾಗ ತಾಪಮಾನ ಕಡಿಮೆಯಿದ್ದರೆ ಹಣ್ಣುಗಳು ಚಿಕ್ಕದಾಗುತ್ತವೆ ಮತ್ತು ಅವು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಹಣ್ಣುುಗಳು ಬಹಳಷ್ಟು ಇದ್ದರೆ ಉತ್ಪಾದನೆ ಕಡಿಮೆಯಾಗುತ್ತದೆ.
  • ಹೆಚ್ಚು ತಾಪಮಾನದಲ್ಲಿ (45 °C), ಮಾವಿನ ಮರಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಉತ್ತಮ ಇಳುವರಿಯನ್ನು ನೀಡುತ್ತವೆ. ಆದರೆ, ತಾಪಮಾನವು 46 °C ಗಿಂತ ಹೆಚ್ಚಾದಾಗ, ಶಾಖೆಯ ಬೆಳವಣಿಗೆ ನಿಲ್ಲುತ್ತದೆ,
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • ಬೆಳೆಗೆ 900-1100 ಮಿ.ಮೀ ಮಳೆಯಷ್ಟು ನೀರು ಬೇಕಾಗುತ್ತದೆ.

ಉತ್ತಮ ಮಣ್ಣು

ವಿಧ
  • ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುವ ಜೇಡಿ, ಮೆಕ್ಕಲು, ಚೆನ್ನಾಗಿ ನೀರು ಬಸಿದು ಹೋಗುವ, ಗಾಳಿಯಾಡುವ ಮತ್ತು ಆಳವಾದ ಸಾವಯವ ಮಣ್ಣು (2-2.5 ಮೀ) ಮಾವಿನ ಕೃಷಿಗೆ ಸೂಕ್ತವಾಗಿದೆ. 
  • ಸರಿಯಾಗಿ ಗೊಬ್ಬರ ಹಾಕಿದರೆ ಹಗುರವಾದ ಮಣ್ಣಿನಲ್ಲಿಯೂ ಸಹ ಇದನ್ನು ಬೆಳೆಯಬಹುದು. 
  • ಕ್ಷಾರೀಯ ಮತ್ತು ಲವಣಯುಕ್ತ ಮಣ್ಣನ್ನು ಉಪಯೋಗಿಸಬಾರದು. 
  • ಮಣ್ಣಿನಲ್ಲಿ ಹೆಚ್ಚಿನ ಉಪ್ಪಿನಂಶವಿದ್ದರೆ ಮಾವು ಅದನ್ನು ಸಹಿಸುವುದಿಲ್ಲ
ರಸಸಾರ
  • ಉತ್ತಮ ಶ್ರೇಣಿ – 5–5 ರಿಂದ 7.5
  • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
  • ರಸಸಾರ 7.5 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು. 

ಬಿತ್ತನೆಯ ಬೀಜಗಳು

ಅಲ್ಫೊನ್ಸೊ (ಹಾಪುಸ್)
ಅವಧಿ
ನಿಯಮಿತ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಅತ್ಯುತ್ತಮ ರುಚಿ, ಬಣ್ಣ ಮತ್ತು ಬಾಳಿಕೆ, ಹಂಗಾಮಿನ ಆರಂಭಿಕ ಹಣ್ಣುಗಳು, ರಫ್ತು ಮಾಡಲು ಉತ್ತಮ, ಒಂದು ವರ್ಷ ಬಿಟ್ಟು ಒಂದು ವರ್ಷಕ್ಕೆ ಹಣ್ಣಿನ ಉತ್ಪಾದನೆ, ಈ ಪ್ರಕ್ರಿಯೆಯ ನಂತರವೂ ಹಣ್ಣಿನ ಸುವಾಸನೆ ಇರುತ್ತದೆ, ಸ್ಪಾಂಜಿ ಟಿಶ್ಯೂ ರೋಗಕ್ಕೆ ತುತ್ತಾಗುತ್ತದೆ.
ರತ್ನಾ
ಅವಧಿ
ನಿಯಮಿತ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಪ್ರತಿ ವರ್ಷ ಕಾಯಿ ಕಟ್ಟುತ್ತದೆ, ದೊಡ್ಡ ಹಣ್ಣುಗಳು.
ಸಿಂಧು
ಅವಧಿ
ನಿಯಮಿತ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಹೆಚ್ಚು ತಿರುಳು, ಪ್ರತಿ ವರ್ಷ ಕಾಯಿ ಕಟ್ಟುವುದು, ಹಣ್ಣಿನ ಮೇಲ್ಮೈಯಲ್ಲಿ ಆಕರ್ಷಕ ಕೆಂಪುಬಣ್ಣ, ಮಧ್ಯಮ ಗಾತ್ರದ ಹಣ್ಣುಗಳು, ಸ್ಪಾಂಜಿ ಟಿಶ್ಯೂ ಮುಕ್ತವಾಗಿರುತ್ತದೆ.
ಕೇಸರ
ಅವಧಿ
ನಿಯಮಿತ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಹೆಚ್ಚಿನ ಇಳುವರಿ, ಅಲ್ಫೊನ್ಸೊಗಿಂತ ಹೆಚ್ಚಿನ ಇಳುವರಿ, ತಿನ್ನಲು ಒಳ್ಳೆಯದು.
ಪೈರಿ
ಅವಧಿ
ಪರ್ಯಾಯ ವರ್ಷ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಹಣ್ಣಿನ ರಸ, ಕಡಿಮೆ ಬಾಳಿಕೆ, ಪರ್ಯಾಯ ಕಾಯಿ ಕಟ್ಟುವಿಕೆ
ಸುವರ್ಣಾ
ಅವಧಿ
ನಿಯಮಿತ ಕಾಯಿ ಕಟ್ಟುವಿಕೆ
ವಿಶಿಷ್ಠ ಲಕ್ಷಣ
ಪ್ರತಿ ವರ್ಷ ಹಣ್ಣುಗಳಾಗುತ್ತವೆ, ಒಂದೇ ಗಾತ್ರದ ಹಣ್ಣುಗಳು, ತಿನ್ನಲು ಒಳ್ಳೆಯದು, ಬೇಗನೆ ಪಕ್ವಗೊಳ್ಳುವ ತಳಿ, ಸ್ಪಾಂಜಿ ಟಿಶ್ಯೂ ಮುಕ್ತವಾಗಿರುತ್ತದೆ.

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ

ವಿಧಾನ-1

  • 1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 0.08 ಎಕರೆ (3 ಗುಂಟೆ) ಸಸಿ ಮಡಿ ಅಗತ್ಯವಿದೆ
  • 7.5 ಮೀ ಉದ್ದ X 1.2 ಮೀ ಅಗಲ X 10 ಸೆಮಿ. ಎತ್ತರದ ಆರು ಮಡಿಗಳನ್ನು ತಯಾರಿಸಿ.
  • ಸಾಲಿನಲ್ಲಿ 7.5 ಸೆಂ.ಮೀ ಅಂತರದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಮಣ್ಣಿನಿಂದ ಮುಚ್ಚಿ.
  • ಮಡಿಯಲ್ಲಿನ ಸಸಿಗಳಿಗೆ ಮೊಳಕೆಯೊಡೆಯುವವರೆಗೆ ದಿನದಲ್ಲಿ ಎರಡು ಬಾರಿ ಮತ್ತು ಮೊಳಕೆಯೊಡೆದ ನಂತರ ಒಮ್ಮೆ ನೀರು ಹಾಕಿ.
  • ನಾಟಿ ಮಾಡುವ ಹತ್ತು ದಿನಗಳ ಮೊದಲು ಮೊಳಕೆ ಬಿರುಸಾಗಲು ಸಸಿ ಮಡಿಗಳಿಗೆ ನೀರು ಹಾಕುವ  ಪ್ರಮಾಣವನ್ನು ಕಡಿಮೆ ಮಾಡಿ.
  • ಕೊಳೆ ರೋಗದಿಂದ (ಡ್ಯಾಂಪಿಂಗ್ ರೋಗ) ಸಸಿಮಡಿಯನ್ನು ಸಂರಕ್ಷಿಸಲು ಬೀಜ ಮೊಳಕೆಯೊಡೆಯುವ 3 ದಿನಗಳ ನಂತರ ರಿಡೋಮಿಲ್ @ 20 ಗ್ರಾಂ.10 ಲೀ ನೀರಿನ್ನು ಸಿಂಪಡನೆ ಮಾಡಿ.
  • ಬಿತ್ತನೆ ಮಾಡಿದ 25 ದಿನಗಳ ನಂತರ 19:19:19 @ 5 ಗ್ರಾಂ + ಥಿಯೊಮೆಥೋಕ್ಷೊಮ್@ 0.25 ಗ್ರಾಂ/ಲೀಟರ್ ನೀರನ್ನು ಸಿಂಪಡನೆ ಮಾಡಿ.

ವಿಧಾನ-2

  • ಪ್ರೊ ಟ್ರೇಗಳಲ್ಲಿ  ಪ್ರತಿ ಟ್ರೇ @ 1.2 ಕೆಜಿ ಪ್ರಮಾಣದಲ್ಲಿ ಕೊಕೊಪೀಟ್  ಹಾಕಿ. 
  • ಪ್ರೋಟ್ರೇಗಳಲ್ಲಿ ಬೀಜೋಪಚಾರ ಮಾಡಿದ ಬೀಜಗಳನ್ನು ಪ್ರತಿ ಕುಣಿಯಲ್ಲಿ @ 1 ಬೀಜದ ಪ್ರಮಾಣದಲ್ಲಿ ಬಿತ್ತನೆ ಮಾಡಿ.
  • ಬೀಜವನ್ನು ಕೊಕೊಪೀಟ್‌ನಿಂದ ಮುಚ್ಚಿ ಮತ್ತು ಟ್ರೇಗಳನ್ನು ಒಂದರ ಮೇಲೊಂದರಂತೆ ಇರಿಸಿ ಮತ್ತು ಮೊಳಕೆಯೊಡೆಯುವಿಕೆ ಪ್ರಾರಂಭವಾಗುವವರೆಗೆ ಪಾಲಿಥೀನ್ ಹಾಳೆಯಿಂದ ಮುಚ್ಚಿ (ಬಿತ್ತನೆ ಮಾಡಿದ 5 ದಿನಗಳ ನಂತರ).
  • 6 ದಿನಗಳ ನಂತರ, ಮೊಳಕೆಯೊಡೆದ ಬೀಜಗಳೊಂದಿಗೆ ಪ್ರೊ ಟ್ರೇಗಳನ್ನು ಪ್ರತ್ಯೇಕವಾಗಿ ಶೆಡ್ ನೆಟನಲ್ಲಿ ಇರಿಸಿ.
ನರ್ಸರಿ ಅವಧಿ
  • ಅವಧಿ-35 ದಿನಗಳು 
  • ಎಲೆಗಳು ಕಡು ಹಸಿರು ಮತ್ತು ಕಾಂಡ ದಪ್ಪಗಾದಾಗ ಸಸ್ಯಗಳು ನಾಟಿ ಮಾಡಲು ಸಿದ್ಧವಾಗುತ್ತವೆ
ಬೀಜದ ಪ್ರಮಾಣ
ತಳಿಗಳು
380.0 - 400.0 ಗ್ರಾಂ/ಎಕರೆಗೆ
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿ ನೀಡುವ ತಳಿ

ಜಮೀನಿನ ತಯಾರಿ

ಜಮೀನಿನ ತಯಾರಿ
  • ಮೊದಲಿನ ಬೆಳೆ ಅವಶೇಷ ಮತ್ತು ಕಸವನ್ನು ತೆಗೆದು ಹೊಲಗಳನ್ನು ಸ್ವಚಗೊಳಿಸಿ.
  • ಮಳೆ ಪ್ರಾರಂಭವಾಗುವ ಮೊದಲು ಮೇ ತಿಂಗಳಲ್ಲಿ 1 x 1 x 1 ಮೀಟರ್ ಹಳ್ಳವನ್ನು ಅಗೆಯಿರಿ 
  • 2 ಟನ್ ಕೊಟ್ಟಿಗೆ ಗೊಬ್ಬರ ಮತ್ತು 3 ಕೆಜಿ ಕಾಂಪೋಸ್ಟಿಂಗ್ ಬ್ಯಾಕ್ಟೀರಿಯಾವನ್ನು ಬೆರೆಸಿ ಇದನ್ನು ಪ್ರತಿ ಹಳ್ಳದಲ್ಲಿ ಸಮಾನವಾಗಿ ಹಾಕಿ (ಪ್ರತಿ ಹಳ್ಳಕ್ಕೆ 5 ಕೆಜಿ).

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ಭಾರಿ ಮಣ್ಣು
ಸಾಲುಗಳ ಅಂತರ
32 ಅಡಿ
ಗಿಡಗಳ ನಡುವಿನ ಅಂತರ
32 ಅಡಿ
ಗಿಡಗಳ ಸಂಖ್ಯೆ
40
ಹಗುರ ಮಣ್ಣು
ಸಾಲುಗಳ ಅಂತರ
26 ಅಡಿ
ಗಿಡಗಳ ನಡುವಿನ ಅಂತರ
26 ಅಡಿ
ಗಿಡಗಳ ಸಂಖ್ಯೆ
62
ಆಮ್ರಪಾಲಿ ಹೆಚ್ಚಿನ ಸಾಂದ್ರತೆಯ ನಾಟಿಕೆ
ಸಾಲುಗಳ ಅಂತರ
16 ಅಡಿ
ಗಿಡಗಳ ನಡುವಿನ ಅಂತರ
16 ಅಡಿ
ಗಿಡಗಳ ಸಂಖ್ಯೆ
250

ಬೇರು ಉಪಚಾರ

  • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 30 ಲೀಟರ್ ನೀರು ತೆಗೆದುಕೊಳ್ಳಿ.
  • 60 ಗ್ರಾಂ ಕಾರ್ಬೆಂಡೆಜಿಮ್ + 60 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ. 
  • ನಾಟಿ ಮಾಡುವ ಮೊದಲು ಬೇರುಗಳನ್ನು ದ್ರಾವಣದಲ್ಲಿ ಅದ್ದಿ.

ನಾಟಿ ಮಾಡುವುದು

  • ಮಾವನ್ನು ಬೀಜದಿಂದ(ಓಟೆ) ಅಥವಾ ಸಸಿಗಳನ್ನು ನೆಟ್ಟು ಬೆಳೆಯಬಹುದು.
  • ಕಸಿ ಮಾಡುವಂತಹ ಹಲವಾರು ತಂತ್ರಗಳನ್ನು ಬಳಸಿಕೊಂಡು ಸಸ್ಯಗಳ ರೆಂಬೆಗಳನ್ನು ಕಸಿ ಮಾಡುವ ಮೂಲಕ ಬೆಳೆಯಬಹುದು
  • ಮಾನ್ಸೂನ್ ಪ್ರಾರಂಭವಾದಾಗ, ಕಸಿ ಮಾಡಿದ ಸಸಿಯನ್ನು ಹಳ್ಳದಲ್ಲಿ ನಾಟಿ ಮಾಡಿ.
  • ಮುಖ್ಯ ಕ್ಷೇತ್ರದಲ್ಲಿ (ಪಿಟ್) ನಾಟಿ ಮಾಡುವ ಮೊದಲು ಪ್ಲಾಸ್ಟಿಕ್ ಚೀಲವನ್ನು ತೆಗೆದುಹಾಕಿ
  • ರಾಸಾಯನಿಕ ಪ್ರಕ್ರಿಯೆ: ಗೆದ್ದಲುಗಳಿಂದ ಸಸಿಗಳನ್ನು ರಕ್ಷಿಸಲು ನಾಟಿ ಸಮಯದಲ್ಲಿ 100 ಗ್ರಾಂ 2% ಮೀಥೈಲ್ ಪ್ಯಾರಾಥಿಯಾನ್ ಅಥವಾ 10% ಕಾರ್ಬಾರಿಲ್ ಪುಡಿಯನ್ನು ಹಳ್ಳದಲ್ಲಿ ಹಾಕಿ.
  • ನಾಟಿ ಸಮಯ: ಜೂನ್ ನಿಂದ ಸೆಪ್ಟೆಂಬರ್

ಪೋಷಕಾಂಶಗಳ ನಿರ್ವಹಣೆ

  • 1 ನೇ ವರ್ಷ- ಕೊಟ್ಟಿಗೆ ಗೊಬ್ಬರ- 1 ಕೆಜಿ + 120:150:50 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 260 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-920 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 85 ಕಿ.ಗ್ರಾ.

  • 2 ನೇ ವರ್ಷ- ಕೊಟ್ಟಿಗೆ ಗೊಬ್ಬರ- 2 ಕೆಜಿ + 240:300:100 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 520 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-1845 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 167 ಕಿ.ಗ್ರಾ.

  • 3 ನೇ ವರ್ಷ- ಕೊಟ್ಟಿಗೆ ಗೊಬ್ಬರ- 3 ಕೆಜಿ + 360:450:150 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 780 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-2767 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 250 ಕಿ.ಗ್ರಾ.

  • 4 ನೇ ವರ್ಷ- ಕೊಟ್ಟಿಗೆ ಗೊಬ್ಬರ- 4 ಕೆಜಿ + 480:600:200 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 1040 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-3690 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 334 ಕಿ.ಗ್ರಾ.

  • 5 ನೇ ವರ್ಷ- ಕೊಟ್ಟಿಗೆ ಗೊಬ್ಬರ- 5 ಕೆಜಿ + 600:750:250 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 1300 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-4612 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 418 ಕಿ.ಗ್ರಾ.

  • 6 ನೇ ವರ್ಷ- ಕೊಟ್ಟಿಗೆ ಗೊಬ್ಬರ- 6 ಕೆಜಿ + 720:900:300 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 1560 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-5535 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 500 ಕಿ.ಗ್ರಾ.

  • 7 ನೇ ವರ್ಷ- ಕೊಟ್ಟಿಗೆ ಗೊಬ್ಬರ- 7 ಕೆಜಿ + 840:1050:359 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 1830 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-6460 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 600 ಕಿ.ಗ್ರಾ.

  • 8 ನೇ ವರ್ಷ- ಕೊಟ್ಟಿಗೆ ಗೊಬ್ಬರ- 8 ಕೆಜಿ + 960:1200:400 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 2085 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-7380 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 668 ಕಿ.ಗ್ರಾ.

  • 9 ನೇ ವರ್ಷ- ಕೊಟ್ಟಿಗೆ ಗೊಬ್ಬರ- 9 ಕೆಜಿ + 1080:1350:450 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 2345 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-8300 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 750 ಕಿ.ಗ್ರಾ.

  • 10 ನೇ ಮತ್ತು ಮೇಲ್ಪಟ್ಟ ವರ್ಷ- ಕೊಟ್ಟಿಗೆ ಗೊಬ್ಬರ- 10 ಕೆಜಿ +  1200:1500:500 ಗ್ರಾಂ ಎನ್‌ಪಿಕೆ/ಸಸ್ಯ

ಯೂರಿಯಾ- 2600 ಗ್ರಾಂ

ಸಿಂಗಲ್ ಸೂಪರ್ ಫಾಸ್ಫೇಟ್-9225 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 835 ಕಿ.ಗ್ರಾ.

ಸೂಚನೆ: ಮಳೆಯ ಶುರುವಾದಾಗ ಸಂಪೂರ್ಣ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧದಷ್ಟು ಎನ್‌ಪಿಕೆ ಪ್ರಮಾಣವನ್ನು ಹಾಕಬೇಕು ಮತ್ತು ಉಳಿದ ಅರ್ಧದಷ್ಟು ಎನ್‌ಪಿಕೆ ಯನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹಾಕಬೇಕು

ನೀರಾವರಿ

 

1 ವರ್ಷ

ಶುಷ್ಕ ಋತುವಿನಲ್ಲಿ 2-3 ದಿನಗಳ ಮಧ್ಯಂತರದಲ್ಲಿ ನೀರಾವರಿ ಮಾಡಲಾಗುತ್ತದೆ.

2-5 ವರ್ಷ

ನೀರಾವರಿ ಮಧ್ಯಂತರ- 4-5 ದಿನಗಳು.

5-8/ ಪರಿಪಕ್ವತೆೆಗಾಗಿ ನಿಗದಿತ ಹಣ್ಣುಗಳು

ಪ್ರತಿ 10-15 ದಿನಗಳ ನಂತರ ನೀರಾವರಿ

ಸಂಪೂರ್ಣ ಧಾರಣ ಹಂತ

ಹಣ್ಣಿನ ಧಾರಣದ ನಂತರ 2-3 ಬಾರಿ ನೀರಾವರಿ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ- ಅಗತ್ಯವಿದ್ದಾಗ ಸಸ್ಯಗಳ ನಡುವೆ ಅಟ್ರಾಜಿನ್ ಅನ್ನು ಮತ್ತೆ ಸಿಂಪಡಿಸಿ.

ಕಸಿ ಮಾಡುವ 10 ದಿನಗಳ ಮೊದಲು
ವಿಧಾನ
ಸಿಂಪಡಣೆ
ಗ್ಲೈಫೋಸೇಟ್
ಪ್ರತಿ ಎಕರೆಗೆ 500 ಗ್ರಾಂ
ಕಸಿ ಮಾಡಿದ 90 ದಿನಗಳ ನಂತರ
ವಿಧಾನ
ಸಿಂಪಡಣೆ
ಪ್ಯಾರಾಕ್ವಾಟ್ ಅಥವಾ ಅಟ್ರಾಜಿನ್
ಪ್ರತಿ ಎಕರೆಗೆ 500 ಗ್ರಾಂ ಪ್ರತಿ ಎಕರೆಗೆ 400 ಗ್ರಾಂ

ಸಸ್ಯ ಪ್ರಚೋದಕಗಳು

  • ಬೇಸಿಗೆಯಲ್ಲಿ ಹೆಚ್ಚುವರಿ ಶಾಖದಿಂದ ಗಿಡಗಳನ್ನು ರಕ್ಷಿಸಲು ಸಸ್ಯದ ಕಾಂಡಕ್ಕೆ ಬೋರ್ಡೆಕ್ಸ್ ಪೇಸ್ಟ್ ಅನ್ನು ಹಚ್ಚಿರಿ.
  • ರಸಗೊಬ್ಬರ ಹಾಕುವ ಮೊದಲೆ ಕಳೆ ತೆಗಯಿರಿ.

ಬೆಳೆವಣಿಗೆ ಹೆಚ್ಚಿಸುವ ಗೊಬ್ಬರಗಳು :

  • ಹಣ್ಣಿನ ಧಾರಣವನ್ನು ಹೆಚ್ಚಿಸಲು ಎನ್ಎಎ @ 20 ಪಿಪಿಎಮ್ ಅನ್ನು ಹೂಬಿಡುವ ಸಮಯದಲ್ಲಿ ಸಿಂಪಡಿಸಲಾಗುತ್ತದೆ.
  • ಫೆಬ್ರವರಿ ಸಮಯದಲ್ಲಿ ಮರಗಳು ಹೂಬಿಡದಿದ್ದರೆ ಹೂಬಿಡುವಿಕೆಯನ್ನು ಹೆಚ್ಚಿಸಲು 0.5% ಯೂರಿಯಾ (5 ಗ್ರಾಂ/ಲಿಟರ.) ಅಥವಾ 1% ಪೊಟ್ಯಾಸಿಯಮ್ ನೈಟ್ರೇಟ್ (10 ಗ್ರಾಂ /ಲಿಟರ) ಸಿಂಪಡಿಸಬಹುದು. 
  • ಹಣ್ಣುಗಳು ಸಾಸಿವೆ ಗಾತ್ರದಲ್ಲಿದ್ದಾಗ 2% ಕೆಎನ್‌ಒ 3 ಸಿಂಪಡಿಸುವುದರಿಂದ ಹಣ್ಣಿನ ಸೆಟ್ ಮತ್ತು ಹಣ್ಣುಗಳ ಧಾರಣ ಹೆಚ್ಚಾಗುತ್ತದೆ.
  • ಹಣ್ಣುಗಳು ಆಗದಿದ್ದರೆ ಸೆಪ್ಟೆಂಬರ್ ಮೊದಲ ಹದಿನೈದು ದಿನಗಳಲ್ಲಿ ಪ್ರತಿ ಮರಕ್ಕೆ ಪ್ಯಾಕ್ಲೋಬುಟ್ರಾಜೋಲ್ @ 10 ಗ್ರಾಂ ಹಾಕುವುದರಿಂದ ಹಣ್ಣುಗಳು ಆಗದ ವರ್ಷಗಳಲ್ಲಿ ಹೂಬಿಡುವ ಮತ್ತು ಹಣ್ಣಿನ ಇಳುವರಿಯನ್ನು ಹೆಚ್ಚಿಸುತ್ತದೆ.

ಕೀಟ ಮತ್ತು ರೋಗಗಳ ನಿರ್ವಹಣೆ

ಕಪ್ಪು ತುದಿ ಕೊಳೆಯುವಿಕೆ
ಲಕ್ಷಣಗಳು
ಎಳೆಯ ಕಾಯಿಗಳ ತುದಿಯು ಕಪ್ಪಾಗಿ ನಂತರ ಗಟ್ಟಿಯಾಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಬೋರಾಕ್ಸ್
300 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
ಕಾಯಿ ಉದುರುವುದು
ಲಕ್ಷಣಗಳು
ಹಣ್ಣುಗಳು ಬಲಿಯುವುದಕ್ಕೆ ಮೊದಲೇ ಉದುರಿಹೋಗುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ನಾಫ್ತಾಲಿನ್ ಅಸಿಟಿಕ್ ಆಸಿಡ್

300 ಮಿಲಿ / ಎಕರೆಗೆ

ಉಪಯೋಗಿಸುವ ವಿಧಾನ
ನೀರಿನಲ್ಲಿ ಕದಡಿ ಸಿಂಪಡಿಸಿ
ಬೂದಿ ರೋಗ
ಲಕ್ಷಣಗಳು
ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತೆ ಕಂಡುಬರುತ್ತದೆ, ಸೋಂಕಿತ ಹೂಗಳು ಅರಳದೆ ಬಿದ್ದುಹೋಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್ & ಬೋರ್ಡಾಕ್ಸ್ ಮಿಶ್ರಣ
300 ಗ್ರಾಂ/ಎಕರೆಗೆ & 300 ಗ್ರಾಂ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಕೆಂಪು ತುಕ್ಕು ರೋಗ
ಲಕ್ಷಣಗಳು
ಎಲೆಗಳ ಮೇಲೆ ತುಕ್ಕು ಹಿಡಿದಂತೆ ಕಂಡುಬರುತ್ತದೆ, ಮೊದಲು ಎಲೆಗಳ ಮೇಲೆ ಉಂಗುರಾಕಾರದ ರಂದ್ರಗಳು, ಉಬ್ಬು ತಗ್ಗುಗಳಾಗುತ್ತವೆ ನಂತರ ಸಣ್ಣಸಣ್ಣ ಚುಕ್ಕೆಗಳು ಸೇರಿ ದೊಡ್ಡ ಕಲೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಬೋರ್ಡಾಕ್ಸ್ ಮಿಶ್ರಣ
300 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಪ್ಯುಸೇರಿಯಂ ಸೊರಗು ರೋಗ ಮತ್ತು ಹಿಮ್ಮುಖ ಕಾಂಡ ಒಣಗುವ ರೋಗ
ಲಕ್ಷಣಗಳು
ಹೂವಿನ ಭಾಗ ವಿರೂಪಗೊಳ್ಳುತ್ತದೆ ಮತ್ತು ಕಾಂಡ ಕಪ್ಪಾಗಿ ಒಣಗುತ್ತದೆ. ಕಾಪರ್ ಆಕ್ಸಿ ಕ್ಲೋರೈಡ್ ಮೊದಲು ಕೊಂಬೆಗಳು ತುದಿಯಿಂದ ಹಿಮ್ಮುಖವಾಗಿ ಒಣಗಲು ಪ್ರಾರಂಭವಾಗುತ್ತದೆ ನಂತರ ಎಲೆಗಳು ಒಣಗಿ ಉದುರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
300 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿನಲ್ಲಿ ಕದಡಿ ಸಿಂಪಡಿಸಿ
ಜಿಬ್ಬುರೋಗ ( ಅಂತ್ರಕ್ನೋಸ್ )
ಲಕ್ಷಣಗಳು
ಎಲೆಗಳ ಮೇಲೆ ಆಕಾರವಿಲ್ಲದ ಕಂದು ಬಣ್ಣದ ಮಚ್ಚೆಗಳಾಗುತ್ತವೆ. ರೆಂಬೆಗಳು ತುದಿಯಿಂದ ಒಣಗಲು ಪ್ರಾರಂಭವಾಗುತ್ತವೆ ಕಪ್ಪು ಚುಕ್ಕೆಗಳು ಗೊಂಚಲು, ಹೂ ಮತ್ತು ಸಂಗ್ರಹಿಸಿಟ್ಟ ಹಣ್ಣುಗಳ ಮೇಲೆ ಕಂಡು ಬರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
300 ಗ್ರಾಂ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಥ್ರಿಪ್ಸ್ ನುಸಿ
ಲಕ್ಷಣಗಳು
ಮರಿಹುಳುಗಳು ಎಳೆಯ ಗಿಡಗಳ ಕಾಂಡವನ್ನು ಕೊರೆಯುತ್ತವೆ ಇದರಿಂದ ಕಾಂಡ ಒಣಗುತ್ತದೆ. ಮರಿಹುಳುಗಳು ಮತ್ತು ಪ್ರೌಢ ಕೀಟವು ಕಾಂಡವನ್ನು ಕೊರೆದು ರಸವನ್ನು ಹೀರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ತೈಯಮೆಥೋಕ್ಸಾಂ
300 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಎಲೆಗಳ ಬಲೆ ಹೆಣೆಯುವ ಕೀಟ
ಲಕ್ಷಣಗಳು
ಮೊದಲು ಮರಿಹುಳುಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ ನಂತರ ಎಳೆಯ ಕೊಂಬೆಗಳು ಮತ್ತು ಎಲೆಯನ್ನು ಸೇರಿಸಿ ಬಲೆ ಹೆಣೆದು ಅದರ ಒಳಗಿಂದ ತಿನ್ನಲು ಪ್ರಾರಂಭಿಸುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕ್ವಿನಾಲ್ಫೋಸ್ ಮತ್ತು ಕಾರ್ಬಾರಿಲ್
300 ಮಿಲಿ/ಎಕರೆಗೆ & 300 ಗ್ರಾಂ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಹಣ್ಣಿನ ನೊಣ
ಲಕ್ಷಣಗಳು
ಬಲೆಗಳಲ್ಲಿರುವ ಫೆರಮೋನ್ ಕೀಟವನ್ನು ಆಕರ್ಷಿಸುತ್ತದೆ ಮತ್ತು ಕೊಲ್ಲುತ್ತದೆ. ಮರಿಹುಳುಗಳು ಹಣ್ಣಿನ ತಿರುಳನ್ನು ತಿಂದು ಅವು ಕೊಳೆಯುವಂತೆ ಮಾಡುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಲಿಂಗಾಕರ್ಷಕ ಬಲೆ
5 /ಎಕರೆಗೆ
ಉಪಯೋಗಿಸುವ ವಿಧಾನ
ಜಮೀನಿಗೆ ಅಳವಡಿಸಿ
ಮಾವಿನ ಹಿಟ್ಟು ತಿಗಣೆ
ಲಕ್ಷಣಗಳು
ಅಂಟಿನಂತಹ ದ್ರಾವಣವನ್ನು ಸ್ರವಿಸುವುದರಿಂದ ಮಸಿಯಂತಹ ಬೂಸ್ಟು ಬೆಳೆಯುತ್ತದೆ. ಮರಿಹುಳುಗಳು ಮರವನ್ನು ಏರಿ, ಗೊಂಚಲನ್ನು ಆಕ್ರಮಿಸಿಕೊಳ್ಳುವುದು ಇದರಿಂದ ಹೂ ಉದುರಿ, ಕಾಯಿ ಕಟ್ಟುವಿಕೆ ಕಡಿಮೆಯಾಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕ್ಲೋರೋಪಿರಿಫೋಸ್
50 ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಮಾವಿನ ಜಿಗಿಹುಳು ( ಜಾಸಿಡ್ಸ್ )
ಲಕ್ಷಣಗಳು
ಹೆಚ್ಚು ತೂತಾಗಿ ರಸ ಸೋರುವುದರಿಂದ ಸೋಂಕಿತ ಅಂಗವು ಸುರುಳಿಯಾಗಿ ಒಣಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್
450 ಮಿಲಿ/ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಹಂತ
5 ವರ್ಷಗಳ ನಂತರ ಕೊಯ್ಲು ಪ್ರಾರಂಭವಾಗುತ್ತದೆ (ತಳಿಯನ್ನು ಅವಲಂಬಿಸಿ).
ಕೊಯ್ಲು ಸಮಯ
ಏಪ್ರಿಲ್-ಜೂನ್
ಆಯಸ್ಸು
30-40 ವರ್ಷಗಳು

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
5-8-200-300 ಹಣ್ಣುಗಳು/ಗಿಡಕ್ಕೆ 9 ನೇ ಮತ್ತು ಮೇಲ್ಪಟ್ಟ ವರ್ಷ 300-500 ಹಣ್ಣು / ಮರ

1 thought on “Mango

  1. Pingback: Mango – LeanAgri

Leave a Reply

Your email address will not be published. Required fields are marked *