Maize

ಮೆಕ್ಕೆಜೋಳ

ಅಂದಾಜು

ಅಂದಾಜು ಇಳುವರಿ

28-40  ಕ್ವಿಂಟಾಲ್ / ಎಕರೆಗೆ 

ಅಂದಾಜು ಅವಧಿ

100-120   ದಿನಗಳು 

ಅಂದಾಜು ಖರ್ಚು (ರೂ )

26,017 /-​

ಅಂದಾಜು ಆದಾಯ (ರೂ )

44,200 /-

ಉತ್ತಮ ವಾತಾವರಣ

ವಾತಾವರಣ
 • ಮೆಕ್ಕೆ ಜೋಳವು ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
 • ಇದು ವಿಶೇಷವಾಗಿ ಸಮಶೀತೋಷ್ಣವಲಯ ಬೆಳೆ.
 • ಬೆಳವಣಿಗೆಯ ಎಲ್ಲಾ ಹಂತಗಳಲ್ಲಿಯೂ ಇದು ಶೀತವನ್ನು ಸಹಿಸಿಕೊಳ್ಳುವುದಿಲ್ಲ.
ತಾಪಮಾನ
 • 22-30℃ ವರೆಗಿನ ತಾಪಮಾನದಲ್ಲಿ ಬೆಳೆಯುತ್ತದೆ, ಆದರೂ ಇದು 35℃ ಗಿಂತ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಬಲ್ಲದು.
 • ಹೂಬಿಡುವ ಮತ್ತು ಹಣ್ಣು ಹಿಡಿಯುವ ಸಮಯದಲ್ಲಿ ಅತಿಯಾದ ಮಳೆಯಾದರೆ ಹಾನಿಯಾಗುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಬೆಳೆಗೆ 500-800 ಮಿ.ಮೀ ಮಳೆಯಷ್ಟು ನೀರು ಬೇಕಾಗುತ್ತದೆ.
 • ಹೂಬಿಡುವಿಕೆ ಮತ್ತು ಧಾನ್ಯ ತುಂಬುವ ಹಂತದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದಿದ್ದರೆ, ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

 

ಉತ್ತಮ ಮಣ್ಣು

ವಿಧ
 • ಅದರ ಫಲವತ್ತಾದ ಕೃಷಿಗೆ ಜೆಡಿ ಮಣ್ಣು ಮತ್ತು ಮರಳು ಮಿಶ್ರಿತ ಮಣ್ಣು ಸೂಕ್ತವಾಗಿರುತ್ತದೆ. 
 • ಮೊಳಕೆ ಹಂತವು ಲವಣಾಂಶ ಮತ್ತು ನಿಂತ ನೀರಿನಿಂದ ಹೆಚ್ಚು ಹಾನಿಗೊಳಗಾಗುತ್ತದೆ

 

ರಸಸಾರ
 • ಉತ್ತಮ ಶ್ರೇಣಿ – 5–5 ರಿಂದ 8.0 
 • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್). 
 • ರಸಸಾರ 8.0 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು. 

ಬಿತ್ತನೆಯ ಬೀಜಗಳು

ವಿವೇಕ-9
ಅವಧಿ
80-90 ದಿನಗಳು
ವಿಶಿಷ್ಠ ಲಕ್ಷಣ
ಅಲ್ಪಾವಧಿಯ ತಳಿ: ಸುಧಾರಿತ ತಳಿ, ಲೈಸಿನ್ ಮತ್ತು ಟ್ರಿಪ್ಟೊಫಾನ್ ಮತ್ತು ವಿಟಮಿನ್ A ಸಮೃದ್ಧವಾಗಿದೆ.
ಹೈಬ್ರಿಡ್ ಎಎಚ್ 58
ಅವಧಿ
78-83 ದಿನಗಳು
ವಿಶಿಷ್ಠ ಲಕ್ಷಣ
ಬೇಗನೆ ಪಕ್ವಗೊಳ್ಳುವ, ದಪ್ಪ ಹಳದಿ ಬೀಜಗಳು, ಶಾಖದ ಪ್ರತಿ ನಿರೋಧಕ.
ಗಂಗಾ ಸಫೇದ-2
ಅವಧಿ
95-100 ದಿನಗಳು
ವಿಶಿಷ್ಠ ಲಕ್ಷಣ
ಹೈಬ್ರಿಡ್ ಮೆಕ್ಕೆ ಜೋಳ, ಸಸ್ಯವು ಬಯಲು ಮೇಡಿನ ಶಿಲೀಂಧ್ರ, ಎಲೆಗಳ ಅಂಗಮಾರಿ ರೋಗ, ತುಕ್ಕು, ಕೊರಕ ಮತ್ತು ಕಾಂಡಗಳನ್ನು ಬಾಗುವದಕ್ಕೆ ಮಧ್ಯಮವಾಗಿ ನಿರೋಧಕವಾಗಿದೆ. ಧಾನ್ಯಗಳು ಮಧ್ಯಮ-ದುಂಡಾದ ಬಿಳಿ ಮತ್ತು ಚಪ್ಪಟೆಯಾಗಿರುತ್ತವೆ.
ಬೀಜದ ಪ್ರಮಾಣ
ತಳಿಗಳು
6-8 ಕಿ.ಗ್ರಾ./ಎಕರೆ

ಬೀಜೋಪಚಾರ

 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

  • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

  ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

  • ಕಾರ್ಬೆಂಡೆಜಿಮ್- 2 ಗ್ರಾಂ 

  ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
  1. ಕೊಟ್ಟಿಗೆ ಗೊಬ್ಬರ – 2 ಟನ್
  2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
 • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
 • ಮಡಿ ತಯಾರಿಕೆ- ಟ್ರಾಕ್ಟರ್ ಸಹಾಯದಿಂದ 1.5 ಅಡಿ ಅಥವಾ 1.5 ಅಡಿ ಅಗಲ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.5 ಅಡಿ
ಗಿಡಗಳ ನಡುವಿನ ಅಂತರ
0.8 ಅಡಿ
ಗಿಡಗಳ ಸಂಖ್ಯೆ
36,666

ಬಿತ್ತನೆ

 • ನೇಗಿಲ ಸಾಲುಗಳ  ( ಇದರಲ್ಲಿ ರಸಗೊಬ್ಬರಗಳನ್ನು ಹಾಕಿ ಮಣ್ಣು ಮುಚ್ಚಲಾಗುತ್ತದೆ ) ಬದಿಯಲ್ಲಿ 4 ಸೆಂ.ಮೀ ಆಳದಲ್ಲಿ ಬೀಜಗಳನ್ನು ಬಿತ್ತಿ. 
 • ಕಡಿಮೆ ಮೊಳಕೆಯೊಡೆಯುವ ತಳಿಯ ಬೀಜಗಳಿದ್ದರೆ ಒಂದು ಗುಳಿಯಲ್ಲಿ 2 ಬೀಜಗಳನ್ನು ಹಾಕಿ. 

ಪೋಷಕಾಂಶಗಳ ನಿರ್ವಹಣೆ

 •  
 • ಬೇಕಾಗುವ ಒಟ್ಟು ಪ್ರಮಾಣ:16:24:16 kg ಎನಪಿಕೆ/ಎಕರೆ 
 • ಬಿತ್ತನೆಯ ಸಮಯದಲ್ಲಿ ಹಾಕಿ- 
  • ಯೂರಿಯಾ – 35 kg
  • ಸಿಂಗಲ್ ಸೂಪರ್ ಫಾಸ್ಫೇಟ್-150 ಕಿ.ಗ್ರಾ.
  • ಮ್ಯೂರೇಟ್ ಆಫ್ ಪೊಟ್ಯಾಶ್- 27 ಕಿ.ಗ್ರಾ.
 • ಬಿತ್ತನೆ ಮಾಡಿದ 30 ದಿನಗಳ ನಂತರ 
  • ಯೂರಿಯಾ – 35 kg
 • ಬಿತ್ತನೆ ಮಾಡಿದ 45 ದಿನಗಳ ನಂತರ
  • ಯೂರಿಯಾ – 35 kg

ನೀರಾವರಿ

 • ಬೆಳವಣಿಗೆಯ ಪ್ರಮುಖ ಹಂತಗಳು – ಹೂಬಿಡುವ ಮತ್ತು ತೆನೆ ಬೆಳವಣಿಗೆಯ ಹಂತ
 • ಕಾಲುವೆ ನೀರು –  ಬಿತ್ತನೆ ಸಮಯದಲ್ಲಿ 1 ನೇ ನೀರಾವರಿ
 • ಬಿತ್ತನೆಯ 3 ದಿನಗಳ ನಂತರ ಮತ್ತು ಒಂದು ವಾರದ ಮಧ್ಯಂತರದಲ್ಲಿ ಎರಡನೇ ನೀರಾವರಿ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 100 ಗ್ರಾಂ
ಬಿತ್ತನೆ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್
ಪ್ರತಿ ಎಕರೆಗೆ 100 ಗ್ರಾಂ

ಕೀಟ ಮತ್ತು ರೋಗಗಳ ನಿರ್ವಹಣೆ

ಸೊರಗು ರೋಗ
ಲಕ್ಷಣಗಳು
ಗಿಡಗಳು ಮುದುಡಿ ಒಣಗಿಹೋಗುತ್ತವೆ. ಸೋಂಕು ಹೆಚ್ಚಾದಂತೆ ಎಳೆಯ ಗರಿಗಳು ಬಾದೆಗೊಳಗಾಗಿ ಗಿಡ ಹಂತಹಂತವಾಗಿ ಸಾಯುತ್ತಾಬರುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ಡೈಜಿಂ ಮತ್ತು ಇಮಿಡಾಕ್ಲೋಪ್ರಿಡ್
2 ಗ್ರಾಂ/ಎಕರೆಗೆ ಮತ್ತು 2 ಮಿಲಿ/ ಎಕರೆಗೆ
ಬಳಕೆ ವಿಧಾನ
ಬೀಜೋಪಚಾರ ಮಾಡಿ
Nematode in maize
ದುಂಡಾಣುಜಂತು (ನೇಮಟೋಡ್)
ಲಕ್ಷಣಗಳು
ದುಂಡಾಣುಜಂತು (ನೇಮಟೋಡ್) ತೆನೆಗಳನ್ನು ನಾಶಪಡಿಸುತ್ತದೆ. ಗಿಡ ಸರಿಯಾಗಿ ಬೆಳೆಯದೆ ಕುಬ್ಜವಾಗುತ್ತದೆ, ತೆನೆ ಸರಿಯಾಗಿ ಕಟ್ಟುವುದಿಲ್ಲ, ಗರಿಯು ಹಳದಿಯಾಗಿ ತೆನೆಯ ಗಾತ್ರ ಕಡಿಮೆಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಬೇವಿನ ಹಿಂಡಿ
100 ಕೇಜಿ /ಎಕರೆಗೆ
ಬಳಕೆ ವಿಧಾನ
ಬಿತ್ತನೆ ಮಾಡುವ ಮೊದಲು ಜಮೀನಿಗೆ ಹಾಕಿ.
Corn borer pest
ತೆನೆ ಕೊರಕ /ಕಾಳು ಕೊರಕ
ಲಕ್ಷಣಗಳು
ತೆನೆಯ ಮೇಲೆ ರಂಧ್ರಗಳನ್ನು ಹುಳು ಕೊರೆಯುತ್ತದೆ.
ಬೇಕಾಗುವ ಔಷಧ ಪ್ರಮಾಣ
ಮೆಲಾಥಿಯೋನ್
200 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
Leaf spot disease symptoms and control
ಎಲೆಚ್ಚುಕ್ಕೆ ರೋಗ ಮತ್ತು ಎಲೆ ಅಂಗಮಾರಿ
ಲಕ್ಷಣಗಳು
ಎಲೆಗಳ ಅಂಚಿಗೆ ಕಂದುಬಣ್ಣದ ಕಲೆಗಳು ಕಂಡುಬರುತ್ತವೆ ಗಾಢ / ತಿಳಿಯಾದ ಸುರುಳಿಯಂತಹ ಕಲೆಗಳು ಎಲೆ ಮತ್ತು ಕಾಂಡದ ಮೇಲೆ ಹಬ್ಬುತ್ತವೆ
ಬೇಕಾಗುವ ಔಷಧ ಪ್ರಮಾಣ
ಮ್ಯಾಂಕೊಜೆಬ್ ಮತ್ತು ಕಾರ್ಬೆನ್ಡೈಜಿಂ
200 ಗ್ರಾಂ/ಎಕರೆಗೆ & 200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
Rust on maize crop
ತುಕ್ಕು ರೋಗ
ಲಕ್ಷಣಗಳು
ಎಲೆಗಳ ಎರಡೂ ಬದಿಗಳಲ್ಲಿ ಕಂದು ಬಣ್ಣದ ಚುಕ್ಕೆಗಳಾಗಿ ಅವು ತುಕ್ಕು ಹಿಡಿದಂತೆ, ಕಜ್ಜಿಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕ್ಲೋರೋಥಲಾನಿಲ್
200 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಕಾಂಡ ಕೊರಕ
ಲಕ್ಷಣಗಳು
ಹುಳುಗಳು ಕಾಂಡದಲ್ಲಿ ರಂಧ್ರಗಳನ್ನು ಕೊರೆಯುತ್ತವೆ ಕಾಂಡದ ನಡುಗೆಣ್ಣೆಗಳ ಮೇಲೆ ರಂದ್ರಗಾಗುತ್ತವೆ,ಅದರೊಳಗೆ ಹುಳುಗಳು ಅಡಗಿಕೊಂಡು ಒಳಗಿನ ತಿರುಳನ್ನು ತಿನ್ನುತ್ತವೆ.
ಬೇಕಾಗುವ ಔಷಧ ಪ್ರಮಾಣ
ಸ್ಪೈನೋಸಾಡ್
100 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಸೈನಿಕ ಹುಳು
ಲಕ್ಷಣಗಳು
ತೆನೆಗಳ ಸಿಪ್ಪೆಯ ಒಳಗೆ ರಂದ್ರಗಳನ್ನು ಕೊರೆಯುತ್ತದೆ.
ಬೇಕಾಗುವ ಔಷಧ ಪ್ರಮಾಣ
ಸ್ಪೈನೇಟೊರಮ್
800 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
Maize plant with leaves showing chlorotic striping caused by Philippine downy mildew
ಬೂಜು ತುಪ್ಪಟ ರೋಗ
ಲಕ್ಷಣಗಳು
ಗಿಡ್ಡವಾದ ಹಳದಿಬಣ್ಣದ ಗಿಡಗಳು ಅವಧಿಗೆ ಮುನ್ನವೇ ಸಾಯುತ್ತವೆ. ಗರಿಗಳ ಮೇಲೆ ಹಳದಿ-ಹಸಿರು ಬಣ್ಣದ ಚಿತ್ರದ ಗಾಯಗಳು ಮತ್ತು ಬಿಳಿ ಗೆರೆಗಳಾಗುತ್ತವೆ.
ಬೇಕಾಗುವ ಔಷಧ ಪ್ರಮಾಣ
ಫಾಸಟೈಲ್ ಆಲ್
200 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ ನಂತರ 100-120 ದಿನಗಳ ನಂತರ

ಇಳುವರಿ

ಇಳುವರಿ
ಮುಂಗಾರು
28-30 ಕ್ವಿಂಟಾಲ್ /ಎಕರೆ
ಹಿಂಗಾರು
38-40 ಕ್ವಿಂಟಾಲ್ /ಎಕರೆ

2 thoughts on “Maize

 1. Pingback: Maize – LeanAgri

 2. Pingback: Maize Crop: Advance technique of maize cultivation for high profit - BharatAgri

Comments are closed.