Groundnut

ಶೇಂಗಾ

ಅಂದಾಜು

ಅಂದಾಜು ಇಳುವರಿ

8-12 ಕ್ವಿಂಟಾಲ್ / ಎಕರೆಗೆ 

ಅಂದಾಜು ಅವಧಿ

110-120  ದಿನಗಳು 

ಅಂದಾಜು ಖರ್ಚು (ರೂ )

27,073 /-​

ಅಂದಾಜು ಆದಾಯ (ರೂ )

50,000 /-

ಉತ್ತಮ ವಾತಾವರಣ

ವಾತಾವರಣ
 • ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು ತುಂಬಾ ಅನುಕೂಲಕರವಾಗಿದೆ.
 • .ಹವಾಮಾನವು ತಂಪಾದ ಮತ್ತು ತೇವ ವಾತಾವರಣ, ಸಸ್ಯಗಳ ಮೊಳಕೆಯೊಡೆಯುವಿಕೆ ನಿಧಾನಗೊಳಿಸುತ್ತದೆ, ಆದ್ದರಿಂದ ಬೀಜ ಕೊಳೆತ ಮತ್ತು ಸಸಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ತಾಪಮಾನ
 • ಅತ್ಯಂತ ವೇಗವಾಗಿ ಮೊಳಕೆಯೊಡೆಯುವಿಕೆ ಮತ್ತು ಸಸಿಗಳ ಬೆಳವಣಿಗೆಗೆ ಸುಮಾರು 30°C ಉತ್ತಮವಾಗಿರುತ್ತದೆ.
 • 35°C ಗಿಂತ ಹೆಚ್ಚಿನ ತಾಪಮಾನವು ಶೇಂಗಾ ಬೆಳವಣಿಗೆಯನ್ನು ತಡೆಯುತ್ತದೆ.
 • ಬಿತ್ತನೆಯ ಸಮಯದಲ್ಲಿ ಕಡಿಮೆ ತಾಪಮಾನವು ಮೊಳಕೆಯೊಡೆಯುವುದನ್ನು ವಿಳಂಬಗೊಳಿಸುತ್ತದೆ ಮತ್ತು ಸಸ್ಯಗಳ ಬೀಜಗಳು ಮತ್ತು ರೋಗಗಳನ್ನು ಹೆಚ್ಚಿಸುತ್ತದೆ.
 • ಕಾಯಿ ಬಲಿಯುವ ಸಮಯದಲ್ಲಿ, ಇದಕ್ಕೆ ಸುಮಾರು ಒಂದು ತಿಂಗಳ ಕಾಲ ಬೆಚ್ಚಗಿನ ಮತ್ತು ಶುಷ್ಕ ಹವಾಮಾನದ ಅಗತ್ಯವಿರುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಅಧಿಕ ಇಳುವರಿ ಮತ್ತು ಗುಣಮಟ್ಟಕ್ಕಾಗಿ ಹೂಬಿಡುವ, ಮೊಳಕೆಯೊಡೆಯುವ ಮತ್ತು ಶೇಂಗಾ ಕಾಯಿ ಬಲಿಯುವ ಪ್ರಮುಖ ಹಂತದಲ್ಲಿ ನೀರಿನ ಅವಶ್ಯಕತೆ ಹೆಚ್ಚು ಇದೆ.
 • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ 600 – 1500 ಮಿಲಿ.ಮೀ ಸರಾಸರಿ ಮಳೆಬೇಕು

ಉತ್ತಮ ಮಣ್ಣು

ವಿಧ
 • ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ ನೀರು ಬಸಿದು   ಹೋಗುವಂತಹ ಕೆಂಪು ಮಣ್ಣಲ್ಲಿ ಕೂಡ ಬೆಳೆಯಬಹುದಾಗಿದೆ .
ರಸಸಾರ
 • ಉತ್ತಮ ಶ್ರೇಣಿ – 5.0 – 7.0
 • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.0 ಕ್ಕಿಂತ ಕಡಿಮೆಯಿದ್ದರೆ  ಜಿಪ್ಸಮ್ ಹಾಕಬೇಕು.
 • ಅತಿಯಾದ ಆಸಿಡ್ ಮತ್ತು ಕ್ಷಾರೀಯ ಭೂಮಿ ಶೇಂಗಾ ಬೆಳೆಯಲು ಸೂಕ್ತವಲ್ಲ.

ಬಿತ್ತನೆಯ ಬೀಜಗಳು

ಫುಲೆ ಪ್ರಗತಿ
ಅವಧಿ
85-90 ದಿನಗಳು
ವಿಶಿಷ್ಠ ಲಕ್ಷಣ
ಕೊಯ್ಲಿಗೆ ಬೇಗ ಬರುತ್ತದೆ , ಕುಬ್ಜ ತಳಿ (ಉಪಟಿ).
ವಿಕ್ರಮ್ (ಟಿಜಿ 1)
ಅವಧಿ
90-100 ದಿನಗಳು
ವಿಶಿಷ್ಠ ಲಕ್ಷಣ
ಅರೆ ಹಬ್ಬುವ ಪ್ರಕಾರ
ಕೊಂಕಣ ಗೌರವ
ಅವಧಿ
105-120 ದಿನಗಳು
ವಿಶಿಷ್ಠ ಲಕ್ಷಣ
ಅರೆ ಹಬ್ಬುವ ಪ್ರಕಾರ
ಕೊಂಕಣ ತಪೋರ
ಅವಧಿ
105-120 ದಿನಗಳು
ವಿಶಿಷ್ಠ ಲಕ್ಷಣ
ದಪ್ಪ ಬೀಜಗಳು
ಫುಲೆ ಉನ್ನತಿ
ಅವಧಿ
115 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿ ನೀಡುವ ತಳಿ.
ಬೀಜದ ಪ್ರಮಾಣ
ತಳಿಗಳು
50 ಕಿ. ಗ್ರಾಂ./ಎಕರೆ
ಹೈಬ್ರಿಡ್
40 ಕಿ. ಗ್ರಾಂ./ಎಕರೆ

ಬೀಜೋಪಚಾರ

 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

  • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

  ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

  • ಕಾರ್ಬೆಂಡೆಜಿಮ್- 2 ಗ್ರಾಂ 

  ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
  1. ಕೊಟ್ಟಿಗೆ ಗೊಬ್ಬರ – 2 ಟನ್
  2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
 • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
 • ಮಡಿ ತಯಾರಿಕೆ- ಟ್ರಾಕ್ಟರ್ ಸಹಾಯದಿಂದ 1 ಅಡಿ ಅಥವಾ 1.5 ಅಡಿ ಅಗಲ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.0 ಅಡಿ
ಗಿಡಗಳ ನಡುವಿನ ಅಂತರ
0.3 ಅಡಿ
ಗಿಡಗಳ ಸಂಖ್ಯೆ
112,820
ಹೈಬ್ರಿಡ್
ಸಾಲುಗಳ ಅಂತರ
1.4 ಅಡಿ
ಗಿಡಗಳ ನಡುವಿನ ಅಂತರ
0.3 ಅಡಿ
ಗಿಡಗಳ ಸಂಖ್ಯೆ
104,761

ಬಿತ್ತನೆ

 • ಬಿತ್ತನೆ ಮಾಡುವ ಒಂದು ವಾರ ಮೊದಲು ಶೇಂಗಾ ಸಿಪ್ಪೆ ತೆಗೆಯಬೇಕು. ಬಿತ್ತನೆಗಾಗಿ ಮಧ್ಯಮ ಗಾತ್ರದ ಬೀಜಗಳನ್ನು ಬಳಸಬೇಕು.
 • ಬದುಗಳ ಬದಿಯಲ್ಲಿ 4-5 ಸೆಂ.ಮಿ. ಆಳಕ್ಕೆ ಎತ್ತುಗಳಿಂದ ಎಳೆಯಲ್ಪಡುವ ಕೂರಿಗೆ ಅಥವಾ ಕೈಯಿಂದ ಬಿತ್ತನೆ ಮಾಡಬೇಕು.
 • ಕೈಯಿಂದ ಬಿತ್ತನೆ ಮಾಡಿದರೆ ಕಡಿಮೆ ಬೀಜಗಳು ಬೇಕಾಗುತ್ತವೆ ಮತ್ತು ಚೆನ್ನಾಗಿ ಮೊಳಕೆಯೊಡೆಯುತ್ತವೆ.

ಪೋಷಕಾಂಶಗಳ ನಿರ್ವಹಣೆ

 • 10:20:00 ಎನ್:‌ಪಿ:ಕೆ  ಕಿ.ಗ್ರಾಂ./ಎಕರೆಗೆ 
 • ಬಿತ್ತನೆಯ ಸಮಯದಲ್ಲಿ ಹಾಕಿ- 

                72 ಕೆಜಿ ಯೂರಿಯಾ 

               123 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್

               80 ಕಿ.ಗ್ರಾಂ ಜಿಪ್ಸಮ 

 • ಬಿತ್ತನೆ ಮಾಡಿದ 45 ದಿನಗಳ ನಂತರ 

              80 ಕಿ.ಗ್ರಾಂ ಜಿಪ್ಸಮ್ 

     (ಇಳುವರಿ ಸುಧಾರಣೆಗೆ ಜಿಪ್ಸಮ್ ಅನ್ನು ಹಾಕಲಾಗುತ್ತದೆ).

ನೀರಾವರಿ

 • ಸಾಲಿನಲ್ಲಿ ನೀರು ಹಾಯಿಸುವುದು – 8-10 ದಿನಗಳ ಮಧ್ಯಂತರದಲ್ಲಿ
 • ಬೇಸಿಗೆ ಹಂಗಾಮು- 5-6 ದಿನಗಳ ಮಧ್ಯಂತರದಲ್ಲಿ
 • ಬಿತ್ತನೆ ಮಾಡಿದ 4-5 ದಿನಗಳ ನಂತರ ಮೊದಲ ಸಲ ನೀರು ಹಾಯಿಸಬೇಕು.

ನೀರಾವರಿಗಾಗಿ ಮಹತ್ವದ ಹಂತಗಳು- 

 1. ಹೂ ಬಿಡುವ ಹಂತ (20-30 ದಿನಗಳು)
 2. ಬಾರಂಗಿ ಬಿಡುವ/ ಕಾಯಿ ಮೂಡುವ  ಹಂತ (40-45 ದಿನಗಳು)
 3. ಕಾಯಿ ಬಳಲಿಯುವ ಹಂತ(65-70 ದಿನಗಳು)

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 300 ಗ್ರಾಂ
ಬಿತ್ತನೆ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ
ಇಮಾಜೆಥೆಪಿರ್ ಅಥವಾ ಕ್ವಿಜಾಲೋಫಾಪ್ ಈಥೈಲ್
100 ಗ್ರಾಂ/ಎಕರೆ 100 ಗ್ರಾಂ/ಎಕರೆ

ಸಸ್ಯ ಪ್ರಚೋದಕಗಳು

 • ಹೂಬಿಡುವುದನ್ನು ಮತ್ತು ಇಳುವರಿಯನ್ನು ಹೆಚ್ಚಿಸಲು 30 ದಿನಗಳ ನಂತರ ಮತ್ತು ಬಿತ್ತನೆ ಮಾಡಿದ 60 ದಿನಗಳ ನಂತರ ಟ್ರೈಕಾಂಟನಾಲ್ @ 1.25 ಮಿಲಿ ನೀರಿಗೆ ಬೆರೆಸಿ ಸಿಂಪಡನೆ ಮಾಡಿ.

ಕೀಟ ಮತ್ತು ರೋಗಗಳ ನಿರ್ವಹಣೆ

ಸಸಿಬೇರು ಕೊಳೆ ರೋಗ / ಸೊರಗು ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ, ಇದರಿಂದ ಸುಲಭವಾಗಿ ಕಿತ್ತುಬರುತ್ತವೆ. ಮೊದಲ ಹಂತದಲ್ಲಿ ಕೆಂಪು-ಕಂದು ಬಣ್ಣದ ಕಲೆಗಳು ಕಾಂಡದ ಬುಡದಲ್ಲಿ ಕಾಣಿಸಿಕೊಳ್ಳುತ್ತವೆ.
ಬೇಕಾಗುವ ಔಷಧ ಪ್ರಮಾಣ
ಮೆಟಲಾಕ್ಸಿಲ್
500 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ
ಬೀಜದಿಂದ ಮತ್ತು ಮಣ್ಣಿನಿಂದ ಹರಡುವ ರೋಗಗಳು
ಲಕ್ಷಣಗಳು
ಮೊಳಕೆಯೊಡೆಯುವುದು ಕಡಿಮೆಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ಡೈಜಿಂ ಮತ್ತು ಇಮಿಡಾಕ್ಲೋಪ್ರಿಡ್
40 ಗ್ರಾಂ/ಎಕರೆಗೆ + 40 ಮಿಲಿ/ಎಕರೆಗೆ
ಬಳಕೆ ವಿಧಾನ
ಬೀಜೋಪಚಾರ ಮಾಡಿ
White grub pest
ಬಿಳಿ ಮರಿಹುಳು
ಲಕ್ಷಣಗಳು
ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಬೇರುಗಳು ಹಾನಿಗೊಳಗಾಗಿ ಗಿಡ ಸೊರಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೊಫ್ಯೂರೋನ್
5 ಕೇಜಿ / ಎಕರೆಗೆ
ಬಳಕೆ ವಿಧಾನ
ಬಿತ್ತನೆಗೆ ಮುನ್ನ ಜಮೀನಿಗೆ ಹಾಕಿ ಉಳುಮೆ ಮಾಡಿ.
ಮೊದಲಿನ ಎಲೆ ಚುಕ್ಕೆ ರೋಗ
ಲಕ್ಷಣಗಳು
ಎಲೆಗಳ ಮೇಲೆ ದುಂಡಾದ ಚುಕ್ಕೆಗಳು, ಅವುಗಳ ಸುತ್ತ ಹಳದಿ ಉಂಗುರಾಕೃತಿಯನ್ನು ಕಾಣಬಹುದು.
ಬೇಕಾಗುವ ಔಷಧ ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
200 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಕಾಯಿ ಕೊರಕ
ಲಕ್ಷಣಗಳು
ಮರಿ ಹುಳುಗಳು ಎಲೆ,ಹೂ ಮತ್ತು ಮೊಗ್ಗುಗಳನ್ನು ತಿನ್ನುತ್ತವೆ.
ಬೇಕಾಗುವ ಔಷಧ ಪ್ರಮಾಣ
ಪ್ಲೇಥೋರ (ಅಗಾಧ ) - ಇಂಡಕ್ಸೋಕಾರ್ಬ್ + ನೊವಾಲ್ಯುರೋನ್
200 ಮಿಲಿ/ ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ತುಕ್ಕುರೋಗ
ಲಕ್ಷಣಗಳು
ಕಿತ್ತಳೆ ಬಣ್ಣದ ಬೊಬ್ಬೆಗಳು ಎಲೆಯ ಕೆಳಭಾಗದಲ್ಲಿ ಕಂಡುಬರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಮ್ಯಾಂಕೊಜೆಬ್
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ರಂಗೋಲಿ ಹುಳು
ಲಕ್ಷಣಗಳು
ಮರಿಹುಳುಗಳು ಎಲೆಯನ್ನು ಕೊರೆದು, ರಸವನ್ನು ಹೀರುತ್ತವೆ, ಇದರಿಂದ ಸಣ್ಣಸಣ್ಣ ಬೊಬ್ಬೆಗಳು ಕಂಡುಬರುತ್ತವೆ
ಬೇಕಾಗುವ ಔಷಧ ಪ್ರಮಾಣ
ಲ್ಯಾ೦ಬ್ಧ - ಸೈಹಾಲೊಥ್ರಿನ್
200 ಮಿಲಿ/ ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ ನಂತರ 110-120 ದಿನಗಳ ನಂತರ.

ಇಳುವರಿ

ಇಳುವರಿ
ಮುಂಗಾರು ಬೆಳೆ
7- 8 ಕ್ವಿಂಟಾಲ್ /ಎಕರೆ
ಬೇಸಿಗೆ ಬೆಳೆ
10-12 ಕ್ವಿಂಟಾಲ್ /ಎಕರೆ

1 thought on “Groundnut

 1. Pingback: Groundnut – LeanAgri

Leave a Reply

Your email address will not be published. Required fields are marked *