Ginger

How to do ginger farming

ಶುಂಠಿ

ಅಂದಾಜು

ಅಂದಾಜು ಇಳುವರಿ

60 – 80 ಕ್ವಿಂಟಾಲ್ / ಎಕರೆಗೆ 

ಅಂದಾಜು ಅವಧಿ

ಬಿತ್ತನೆ ಮಾಡಿದ 250-260 ದಿನಗಳ ನಂತರ

ಅಂದಾಜು ಖರ್ಚು (ರೂ )

60,000 /-​

ಅಂದಾಜು ಆದಾಯ (ರೂ )

2,10,000 /-

ಉತ್ತಮ ವಾತಾವರಣ

ವಾತಾವರಣ
  • ಬೆಳವಣಿಗೆಯ ಹಂತದಲ್ಲಿ ಉಷ್ಣತೆ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಉತ್ತಮ .
  • ಶುಂಠಿ ಗಡ್ದೆ ಬೆಳೆಯುವ ಹಂತದಲ್ಲಿ  ತಂಪಾದ ಮತ್ತು ಒಣ ಹವಾಮಾನ ಇರಬೇಕು.
ತಾಪಮಾನ
  • ಶುಂಠಿ ಬೆಳವಣಿಗೆಗೆ  19-28°C  ತಾಪಮಾನ ಒಳ್ಳೆಯದು
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ

 

  • ಶುಂಠಿ  ಬೆಳೆಗೆ 1000 ರಿಂದ  1200 ಮಿಲಿ.ಮೀ ಮಳೆಬೀಳುವ ಪ್ರದೇಶ ಉತ್ತಮವಾದದ್ದು. 

ಉತ್ತಮ ಮಣ್ಣು

ವಿಧ
  • ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ ಗೋಡು ಮಣ್ಣು ,ನೀರು ಬಸಿದು ಹೋಗುವಂತಹ  ಮಣ್ಣಲ್ಲಿ ಬೆಳೆಯಬಹುದಾಗಿದೆ.
  • ಬೆಳೆಯು ನೀರುನಿಂತರೇ  ಸರಿಯಾಗಿ ಬೆಳೆಯುವುದಿಲ್ಲ.
 
ರಸಸಾರ
  • ಉತ್ತಮ ರಸಸಾರ  6.0- 6.5 ಸಾರ
  • ಲವಣದ ಅಂಶ ಹೆಚ್ಚಿರುವ ಮಣ್ಣಿನಲ್ಲಿ ಬೆಳೆ ಸರಿಯಾಗಿ ಬೆಳೆಯುವುದಿಲ್ಲ
  • ರಸಸಾರ  6.0 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
  • ರಸಸಾರ 7.5  ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆಯ ಬೀಜಗಳು

ಐ.ಐ.ಎಸ್.ಆರ್ - ವರಧ
ಅವಧಿ
200 ದಿನಗಳು
ವಿಶಿಷ್ಠ ಲಕ್ಷಣ
ಉತ್ತಮ ಗುಣಮಟ್ಟದ,ಹೆಚ್ಚಿಗೆ ಇಳುವರಿ ಕೊಡುವ ತಳಿ. ಒಣ ಕೊಂಬುಗಳನ್ನು ಸಂಗ್ರಹಿಸಿಟ್ಟರೆ ಕೀಟ ಬಾದೆಗೆ ತುತ್ತಾಗುವುದಿಲ್ಲ.
ಐ.ಐ.ಎಸ್.ಆರ್ - ಮಹಿಮಾ
ಅವಧಿ
200 ದಿನಗಳು
ವಿಶಿಷ್ಠ ಲಕ್ಷಣ
ದಪ್ಪ ನಾರು ಹೊಂದಿದ ಗಡ್ಡೆ.ಈ ತಳಿಗೆ ಬೇರು ಗಂಟು ಮಾಡುವ ನೇಮಟೋಡ್ (ದುಂಡಾಣುಜಂತು) ಬಾಧಿಸುವುದಿಲ್ಲ.
ಐ.ಐ.ಎಸ್.ಆರ್ - ರೆಜಥ
ಅವಧಿ
200 ದಿನಗಳು
ವಿಶಿಷ್ಠ ಲಕ್ಷಣ
ದುಂಡನೆಯ ದಪ್ಪ ಕೊಂಬುಗಳನ್ನು ಬಿಡುತ್ತದೆ 3 ಜೊತೆಗೆ ಪದರದ ದಪ್ಪ ಗುಂಪಿನಂತೆ ಕಾಣುತ್ತದೆ.
ನರ್ಸರಿ ಅವಧಿ
  • 30-35 ದಿನಗಳು
  • ಗಿಡ ಎತ್ತರವು 15 ಸೆಂ.ಮೀ ಮತ್ತು 2-3 ದೊಡ್ಡ ಎಲೆಗಳನ್ನು ಹೊಂದಿರುವ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.
ಬೀಜದ ಪ್ರಮಾಣ
ತಳಿಗಳು
600-700 ಕೆಜಿ ಪ್ರತಿ ಎಕರೆಗೆ

ಬೀಜೋಪಚಾರ

  • ಸರಿಯಾಗಿ ಮೊಳಕೆಯೊಡೆಯಲು – 2 ಮಿಲಿ ಮಂಕೋಝೇಬ್  + ಡೈಮಿಥೋಯೇಟ್2 ಮೀ.ಲಿ ಪ್ರತಿ ಲೀಟರ್ ನೀರಿಗೆ ಕಲೆಸಿ 
  • ಬೀಜದ ಗಡ್ಡೆಗಳನ್ನುಮಿಶ್ರಣದಲ್ಲಿ15 – 20ನಿಮಿಷ  ಅದ್ದಿ.
  • ಬೀಜೋಪಚಾರ ಮಾಡಿದ ನಂತರ  3-4 ಗಂಟೆ ನೆರಳಿನಲ್ಲಿ ಒಣಗಿಸಿ 
  • 800 ಕೆಜಿ ಬೀಜಕ್ಕೆ 200 ಲೀಟರ್ ಮಿಶ್ರಣ ಬೇಕು.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • 1ಮೀ. ಅಗಲ , 30 ಸೆಂ. ಮೀ. ಎತ್ತರ & 50 ಸೆಂ. ಮೀ. ಅಂತರದ ಎತ್ತರ ಮಡಿ ತಯಾರಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
2 ಅಡಿ
ಗಿಡಗಳ ನಡುವಿನ ಅಂತರ
2 ಅಡಿ
ಗಿಡಗಳ ಸಂಖ್ಯೆ
11,000
ಹೈಬ್ರಿಡ್
ಸಾಲುಗಳ ಅಂತರ
3 ಅಡಿ
ಗಿಡಗಳ ನಡುವಿನ ಅಂತರ
2 ಅಡಿ
ಗಿಡಗಳ ಸಂಖ್ಯೆ
7,333

ನಾಟಿ ಮಾಡುವುದು

  • ಬಿತ್ತನೆಗೆ ಬೀಜಕ್ಕೆ ಕೊಂಬುಗಳನ್ನು ಉಪಯೋಗಿಸುತ್ತಾರೆ
  • ಬಿತ್ತನೆಗೆ  ಬಳಸುವ ಕೊಂಬುಗಳನ್ನು 2.5-5.0 ಸೆಂ .ಮೀ ಉದ್ದ ಮತ್ತು 20-25 ಗ್ರಾಂ ತೂಕದ  ತುಂಡುಗಳಾಗಿ  ಕತ್ತರಿಸಿ ಶೇಖರಿಸಿ , ಗಡ್ಡೆಗಳಲ್ಲಿ ಎರಡಾದರೂ  ಮೊಳಕೆ ಇರಬೇಕು.

ಬಿತ್ತನೆ ಮಾಡುವುದು

  • ಬಿತ್ತನೆ ಸಮಯ –  ಮೇ  ಮೊದಲನೇ ವಾರದಿಂದ ( ಮಳೆಯಾಶ್ರಿತ ಪ್ರದೇಶಗಳಲ್ಲಿ )
  • ಫೆಬ್ರವರಿ ಎರಡನೇ ವಾರದಿಂದ ಮಾರ್ಚ್ ವರೆಗೆ (ನೀರಾವರಿ ಜಮೀನಿನಲ್ಲಿ )

ಬಿತ್ತನೆ ವಿಧಾನ

0.6  ಅಡಿ  ಅಂತರದಲ್ಲಿ ಸಣ್ಣ ಗುಣಿಗಳನ್ನು ಮಾಡಿ ಕೊಂಬುಗಳನ್ನು 4-5 ಸೆಂ.ಮೀ ಆಳದಲ್ಲಿ  ಉಳಬೇಕು .

ಪೋಷಕಾಂಶಗಳ ನಿರ್ವಹಣೆ

ಬೇಕಾಗುವ ಒಟ್ಟು ಪ್ರಮಾಣ : 80:30:30 ಕೆಜಿ ಎನ್ .ಪಿ.ಕೆ  ಪ್ರತಿ ಎಕರೆಗೆ  

  • ಬಿತ್ತನೆ ಸಮಯದಲ್ಲಿ –  185 ಕೆಜಿ ಯಸ್. ಯಸ್. ಪಿ. + 50 ಕೆಜಿ ಎಂ.. ಪಿ ( ಪ್ರತಿ ಎಕರೆಗೆ
  • ಬಿತ್ತನೆ ಮಾಡಿದ 45 ದಿನಗಳ ನಂತರ -35 ಕೆಜಿ ಯೂರಿಯಾ
  • ಬಿತ್ತನೆ ಮಾಡಿದ 75 ದಿನಗಳ ನಂತರ -35 ಕೆಜಿ ಯೂರಿಯಾ
  • ಬಿತ್ತನೆ ಮಾಡಿದ 105 ದಿನಗಳ ನಂತರ -35 ಕೆಜಿ ಯೂರಿಯಾ

ನೀರಾವರಿ

  • ಬೆಳೆಯ ಮುಖ್ಯ ಹಂತಗಳು
  1. ಮೊಳಕೆಯೊಡೆಯುವಾಗ
  2. ಕೊಂಬುಗಳು ಹುಟ್ಟುವಾಗ (ಬೆಳೆ  ಹಾಕಿದ 90 ದಿನಗಳ ನಂತರ )
  3. ಗಡ್ಡೆ ಬೆಳವಣಿಗೆಯ ಹಂತದಲ್ಲಿ (ಬೆಳೆ  ಹಾಕಿದ 135 ದಿನಗಳ ನಂತರ )
  • ಹನಿನೀರಾವರಿದಿನಬಿಟ್ಟು ದಿನ ನೀರುಣಿಸಬೇಕು(ಮಳೆಯನ್ನು ಆಧರಿಸಿ)
  • ಬೆಳೆಗೆ ಪಾತಳಿ ನೀರಾವರಿ ಪದ್ಧತಿಯಲ್ಲಿಸಾಲುಬೋದು ವಿನ್ಯಾಸದಲ್ಲಿ 7 -10 ದಿನಗಳಿಗೊಮ್ಮೆ  ನೀರು ಉಣಿಸುವುದುಮಳೆಯನ್ನು ಆಧರಿಸಿ ನೀರು ಹಾಯಿಸಬೇಕು

ಸಸ್ಯ ಸಂರಕ್ಷಣೆ

 ಬಿತ್ತನೆ ಮಾಡಿದ 20 ದಿನಗಳ ನಂತರ ಮೊಳಕೆಯೊಡೆಯದಂತಹ ಜಾಗದಲ್ಲಿ ಮತ್ತೆ ಬಿತ್ತನೆ ಮಾಡಬೇಕು

)ಹೊದಿಕೆಮಾಡುವುದುಗೆಡ್ಡೆಗಳನ್ನು ನಾಟಿ ಮಾಡಿದ ನಂತರ ಪ್ರತಿ ಎಕರೆಗೆ 4.5 ಟನ್ ಗಳಷ್ಟು ಹಸಿರೆಲೆಗಳಿಂದ ಹೊದಿಕೆ ಮಾಡುವುದು ಅಗತ್ಯ, ಮತ್ತೆ ಎರಡುಬಾರಿ 50 ಮತ್ತು  100ದಿನಗಳ ನಂತರ ಹಸಿರು ಎಲೆಗಳಿಂದ  ಮಾಡಿ. 

ಮಣ್ಣೇರಿಸುವುದು – ಮೊದಲು  45 ದಿನಗಳಿಗೆ ಮತ್ತು ಎರಡನೇ ಬಾರಿ  90 ದಿನಗಳ ನಂತರ ಮಣ್ಣೇರಿಸುವುದು

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್
ಪ್ರತಿ ಎಕರೆಗೆ 200 ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸ್ಕಿಪ್ಲೋರೋಫೆನ್
100 ಕೆಜಿ ಪ್ರತಿ ಎಕರೆಗೆ

ಕೊಯ್ಲು

  • ಕೊಯ್ಲಿಗೆ 20 ದಿನ ಮೊದಲು ನೀರು ಹಾಯಿಸುವುದನ್ನು ನಿಲ್ಲಿಸಬೇಕು 
  • ಕೊಯ್ಲಿನ ಅವಧಿ –250-260  ದಿನಗಳ ನಂತರ  (ತಳಿಗಳಮೇಲೆ ಅವಲಂಬಿತವಾಗಿರುತ್ತದೆ )
  • ಕೊಯ್ಲಿನ ಸಮಯ – ಜನವರಿ – ಮಾರ್ಚ್ 
  • ಎಲೆಗಳು ಹಳದಿಯಾಗಿ, ಒಣಗಿದಂತಹ ಹಂತ ಕೊಯ್ಲಿಗೆ ಸರಿಯಾದ ಸಮಯ 
  • ಶುಂಠಿಯನ್ನು ಅಗೆದು ತಗೆದ ನಂತರ  2- 3ಬಾರಿ ನೀರಿನಿಂದ ಚೆನ್ನಾಗಿ ತೊಳೆಯಬೇಕು 
  • ನಂತರ 2- 3 ದಿನಗಳು ನೆರಳಿನಲ್ಲಿ ಒಣಗಿಸಬೇಕು. 

ಕೀಟ ಮತ್ತು ರೋಗಗಳ ನಿರ್ವಹಣೆ

ಬೀಜದಿಂದ ಬರುವ ರೋಗಗಳು
ಲಕ್ಷಣಗಳು
ಬೇರು ಕೊಳೆಯುತ್ತದೆ ಗಿಡ ಸೊರಗುತ್ತದೆ ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ, ಇದರಿಂದ ಸುಲಭವಾಗಿ ಕಿತ್ತುಬರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ದಿಜಿಮ್ ಮತ್ತು ಇಮಿಡಾಕ್ಲೋಪ್ರಿಡ್
400 ಗ್ರಾಂ/ಎಕರೆಗೆ ಮತ್ತು 400 ಮಿಲಿ/ ಎಕರೆಗೆ
ಬಳಕೆ ವಿಧಾನ
ಬೀಜೋಪಚಾರ ಮಾಡಿ
Rhizome scale in ginger farming
ಕಾಂಡದ ಚಿಪ್ಪಿನ ಹುಳು
ಲಕ್ಷಣಗಳು
ಗಡ್ಡೆ ಮುದುಡಿ ಒಣಗುತ್ತದೆ
ಬೇಕಾಗುವ ಔಷಧ ಪ್ರಮಾಣ
ಡೈಮಿಥೋಯೇಟ್
250 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ /ನೀರಿಗೆ ಬೆರೆಸಿ ಡ್ರಿಪ್ ಮೂಲಕ ಗಿಡಗಳಿಗೆ ಹಾಕಿ
Ginger shoot borer
ಕಾಂಡ ಕೊರಕ
ಲಕ್ಷಣಗಳು
ಕಾಂಡದ ಮೇಲೆ ರಂಧ್ರಗಳನ್ನು ಕೊರೆಯುತ್ತದೆ ಅದರಲ್ಲಿ ಹಿಕ್ಕೆಗಳು ಕಂಡುಬರುತ್ತವೆ ಮತ್ತು ಗಿಡ ಮುದುಡುತ್ತದೆ.
ಬೇಕಾಗುವ ಔಷಧ ಪ್ರಮಾಣ
ಬೇವಿನ ಎಣ್ಣೆ ಅಥವಾ ಲಾಂಬ್ದ ಸೈಹಾಲೊಥ್ರಿನ್
600 ಮಿಲಿ/ಎಕರೆಗೆ ಅಥವಾ 100 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
leaf roller pest in turmeric
ಎಲೆ ಸುರುಳಿ ರೋಗ/ ಕೊರಕ
ಲಕ್ಷಣಗಳು
ಕಾಂಡ ಮತ್ತು ಹಣ್ಣಿನ ಮೇಲೆ ಕೊರೆತದಂತಹ ರಂಧ್ರಗಳನ್ನು, ಅದರಲ್ಲಿ ಹಿಕ್ಕೆಗಳು ಕಂಡುಬರುತ್ತವೆ. ಮರಿಹುಳುಗಳು ಕಾಂಡದ ಮೇಲ್ಭಾಗದಿಂದ ರಂದ್ರ ಮಾಡಿ ಕಾಂಡದೊಳಗೆ ಸೇರಿಕೊಂಡು ತಿರುಳನ್ನು ತಿನ್ನುತ್ತವೆ.
ಬೇಕಾಗುವ ಔಷಧ ಪ್ರಮಾಣ
ಲಾಂಬ್ದ ಸೈಹಾಲೊಥ್ರಿನ್
200 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
White grub pest
ಬಿಳಿ ಮರಿ ಹುಳು/ ಗೊಬ್ಬರದ ಹುಳು
ಲಕ್ಷಣಗಳು
ಎಲೆ ಹಳದಿ ಬಣ್ಣಕೆ ತಿರುಗುತ್ತದೆ, ರೆಂಬೆ ಮತ್ತು ಎಲೆಗಳು ಉದುರುತ್ತವೆ ಗಿಡಗಳು ಬಾಡಿ ಒಣಗಿಹೋಗುತ್ತವೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೊಫ್ಯೂರೋನ್
5 ಕೇಜಿ / ಎಕರೆಗೆ
ಬಳಕೆ ವಿಧಾನ
ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಜಮೀನಿಗೆ ಹಾಕಿ.
leaf spot disease in ginger farming
ಎಲೆ ಚ್ಚುಕ್ಕೆ/ ಎಲೆ ಮಚ್ಚೆ ರೋಗ
ಲಕ್ಷಣಗಳು
ಸಣ್ಣ ನೀರು ತುಂಬಿದ, ಆಕಾರವಿಲ್ಲದ ಚ್ಚುಕ್ಕೆಗಳು ಎಲೆಗಳ ಮೇಲೆ ಕಾಣಬಹುದು. ಇದರಿಂದ ಎಲೆ ಉದುರುತ್ತವೆ, ರೋಗ ಕಾಂಡ ಮತ್ತು ಆಕ್ರಮಿಸಿಕೊಳ್ಳುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
500 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಬ್ಯಾಕ್ಟೇರಿಯ ಸೊರಗು ರೋಗ
ಲಕ್ಷಣಗಳು
ಗಿಡದ ಕಾಂಡದಲ್ಲಿ ನೆಲದ ಹತ್ತಿರ ನೀರಿನಲ್ಲಿ ನೆನೆಸಿದಂತೆ ಕಲೆಗಳು ಕಂಡುಬರುತ್ತವೆ. ಎಲೆಗಳು ಹಳದಿಯಾಗಿ,ಸುರುಳಿಯಾಗಿ ಜೋತುಬೀಳುತ್ತವೆ.
ಬೇಕಾಗುವ ಔಷಧ ಪ್ರಮಾಣ
ಸ್ಟ್ರೆಪ್ತೊಸೈಕ್ಲಿನ್
0.5 ಕೇಜಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
rhizome rot disease
ಗಡ್ಡೆ ಕೊಳೆ ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಗಡ್ಡೆ ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ ಸುಲಭವಾಗಿ ಕಿತ್ತು ಬರುತ್ತವೆ
ಬೇಕಾಗುವ ಔಷಧ ಪ್ರಮಾಣ
ಟ್ರೈಕೋಡರ್ಮ ವಿರಿಡೆ ಮತ್ತು ಸುಡೋಮೋನಾಸ್ ಪ್ಲೋರಾಜೇಂಟ್
1 ಕೇಜಿ/ಎಕರೆಗೆ + 1 ಕೇಜಿ/ಎಕರೆಗೆ
ಬಳಕೆ ವಿಧಾನ
ನೀರಿಗೆ ಬೆರೆಸಿ ಡ್ರಿಪ್ ಮೂಲಕ ಗಿಡಗಳಿಗೆ ಹಾಕಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
250-260 ದಿನಗಳ ನಂತರ (ತಳಿಗಳಮೇಲೆ ಅವಲಂಬಿತವಾಗಿರುತ್ತದೆ )

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
60-80 ಕ್ವಿಂಟಾಲ್ /ಎಕರೆಗೆ

3 thoughts on “Ginger

  1. Pingback: Ginger - BharatAgri

  2. Pingback: अदरक की खेती: आधुनिक विधि से प्रति एकर ज़्यादा उपज लें - BharatAgri

Leave a Reply

Your email address will not be published. Required fields are marked *