Fenugreek

ಮೆಂತ್ಯ

ಅಂದಾಜು

ಅಂದಾಜು ಇಳುವರಿ

5000 ಕಟ್ಟುಗಳು / ಎಕರೆಗೆ

ಅಂದಾಜು ಅವಧಿ

30 – 40 ದಿನಗಳು

ಅಂದಾಜು ಖರ್ಚು (ರೂ )
12,064
ಅಂದಾಜು ಆದಾಯ (ರೂ )

30,000

ಉತ್ತಮ ವಾತಾವರಣ

ವಾತಾವರಣ
 • ಶೀತ ಮತ್ತು ಅಲ್ಪ ಒಣ ಹವಾಮಾನವು ಹೆಚ್ಚು ಅನುಕೂಲಕರವಾಗಿರುತ್ತದೆ
 • ಹೂಬಿಡುವ ಮತ್ತು ಧಾನ್ಯ ತುಂಬುವ ಹಂತದಲ್ಲಿ ಶೀತ ವಾತಾವರಣ ಬೆಳೆಯ ಮೇಲೆ ಪರಿಣಾಮ ಬೀರುತ್ತದೆ.
 • ಬಯಲು ಪ್ರದೇಶದಲ್ಲಿ ವರ್ಷಪೂರ್ತಿ ಬೆಳೆಯಬಹುದು.
 • ಹೆಚ್ಚಾಗಿ ಹಿಂಗಾರು ಹಂಗಾಮು ನಾಟಿ ಮಾಡಲು ಸೂಕ್ತವಾಗಿರುತ್ತದೆ.
 • ಹೆಚ್ಚಿನ ಮತ್ತು ನಿರಂತರ ಮಳೆಯಿರುವ ಪ್ರದೇಶಗಳಲ್ಲಿ ಬಿತ್ತನೆ ಮಾಡಬಾರದು.
ತಾಪಮಾನ
 • 10-27.5°C ವರೆಗಿನ ತಾಪಮಾನ ಬೆಳೆಗೆ ಉತ್ತಮವಾದದ್ದು .
 • ಹೆಚ್ಚಿನ ತಾಪಮಾನವು ಮೊಳಕೆಯೊಡೆಯುವಿಕೆಯನ್ನು ಮತ್ತು ಸಸ್ಯದ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಮಧ್ಯಮ ಪ್ರಮಾಣದ ಮಳೆ ಬೀಳುವ ಪ್ರದೇಶ ಉತ್ತಮ
 • ಬೆಳೆಗೆ ಬೇಕಾಗುವ ನೀರಿನ ಸರಾಸರಿ ಪ್ರಮಾಣ 350-380 ಮಿಲಿ.ಮೀ ಮಳೆಬೇಕು

ಉತ್ತಮ ಮಣ್ಣು

ವಿಧ
 • ಮರಳು ಮಿಶ್ರಿತ ಜೇಡಿ ಮಣ್ಣು ಮತ್ತು ಸಾವಯವ ಪದಾರ್ಥವನ್ನು ಸಮೃದ್ಧವಾಗಿ ಹೊಂದಿರುವ ಮಧ್ಯಮ ಕಪ್ಪು ಮಣ್ಣು ಕೃಷಿಗೆ ಸೂಕ್ತವಾಗಿದೆ.
 • ನೀರು ನಿಲ್ಲುವ ಭೂಮಿಯು ಕೃಷಿಗೆ ಸೂಕ್ತವಲ್ಲ.
ರಸಸಾರ
 • ಉತ್ತಮ ಶ್ರೇಣಿ – 5–5 ರಿಂದ 7.0
 • ಅತಿಯಾದ ಆಸಿಡ್ ಮತ್ತು ಕ್ಷಾರೀಯ ಭೂಮಿ ಸೂಕ್ತವಲ್ಲ.
 • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.0 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ಪೂಸಾ ಅರ್ಲಿ ಬಂಚಿಂಗ್
ಅವಧಿ
30-35 ದಿನಗಳು
ವಿಶಿಷ್ಠ ಲಕ್ಷಣ
ಶಿಲಿಂದ್ರ ತುಪ್ಪಟ ರೋಗ , ತುಕ್ಕು ರೋಗದ ಪ್ರತಿ ನಿರೋಧಕ ಶಕ್ತಿ ಹೊಂದಿದೆ.
ರಾಜೇಂದ್ರ ಕ್ರಾಂತಿ
ಅವಧಿ
120 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿ ನೀಡುತ್ತದೆ, ಬೀಜದ ಸಲುವಾಗಿ ಇರುವ ತಳಿ, ಮಧ್ಯಮ ಎತ್ತರ, ಪೊದೆಸಸ್ಯ, ಒಂದೇ ಬೆಳೆ ಮತ್ತು ಅಂತರ ಬೆಳೆ ಎರಡಕ್ಕೂ ಸೂಕ್ತವಾಗಿದೆ. ಧಾನ್ಯ ಉತ್ಪಾದನೆಗೆ ಒಳ್ಳೆಯದು.
ಬೇಕಾಗುವ ಬೀಜದ ಪ್ರಮಾಣ
ತಳಿ
10-12 ಕಿ.ಗ್ರಾ./ಎಕರೆ
Special Characteristic
High Yeilding, Execellent

ಬೀಜೋಪಚಾರ

 • ಸರಿಯಾಗಿ ಮೊಳಕೆಯೊಡೆಯಲು ಬಿತ್ತನೆ ಮಾಡುವ ಮೊದಲು ಬೀಜಗಳನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

ಕಾಪರ್ ಆಕ್ಸಿಕ್ಲೋರೈಡ್- 2 ಗ್ರಾಂ

ಇಮಿಡಾಕ್ಲೋಪ್ರಿಡ್- 2 ಮಿ.ಲಿ.

ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಬೆರೆಸಿ. ಮೇಲಿನ ಎಲ್ಲ ವಸ್ತುಗಳನ್ನು ಬೀಜಗಳ ಜೊತೆಗೆ ಪಾತ್ರೆಯಲ್ಲಿ ಸೇರಿಸಿ ಮತ್ತು ಬೀಜಗಳಿಗೆ ಕಾಪರ್ ಆಕ್ಸಿಕ್ಲೋರೈಡ್ ಪುಡಿ ವಸ್ತುಗಳು ಮೆತ್ತಿಕೊಳ್ಳುವವರೆಗೂ  ಎಲ್ಲವನ್ನೂ ಮಿಶ್ರಣ ಮಾಡಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  1. ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  2. ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 

  ಕೊಟ್ಟಿಗೆ ಗೊಬ್ಬರ – 22 ಟನ್

  ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ

  1. ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.
ಸಾಲು-ಬದು ತಯಾರಿ
  1. ಟ್ರಾಕ್ಟರ್ ಸಹಾಯದಿಂದ ಅನುಕೂಲಕರ ಉದ್ದ ಮತ್ತು ಎತ್ತರದ ಸಾಲು ಬದುಗಳನ್ನು ತಯಾರಿಸಿ. ನಂತರ ಬೀಜಗಳು ನಿರಿಗೆ ಹರಿದು ಹೋಗದಂತೆ ಬದುಗಳನ್ನು ನಿರ್ಮಿಸಿ.

ಬಿತ್ತನೆ

 • ಬೀಜಗಳನ್ನು ಮಡಿಗಳ ಮೇಲೆ ಸಮವಾಗಿ ಹರಡಿ.
 • ಬೀಜಗಳು ಸುಮಾರು 8-15 ದಿನಗಳಲ್ಲಿ ಮೊಳಕೆಯೊಡೆಯುತ್ತವೆ.

ಪೋಷಕಾಂಶಗಳ ನಿರ್ವಹಣೆ

 • ಬೇಕಾಗುವ ಒಟ್ಟು ಪ್ರಮಾಣ: 24:12:12 kg ಎನ್:ಪಿಕೆ ಪ್ರತಿ ಎಕರೆ
 • ಬಿತ್ತನೆಯ ಸಮಯದಲ್ಲಿ ಹಾಕಿ-  

ಯೂರಿಯಾ – 26 kg 

ಸಿಂಗಲ್ ಸೂಪರ್ ಫಾಸ್ಫೇಟ್-74 ಕಿ.ಗ್ರಾ.

ಮ್ಯೂರೇಟ್ ಆಫ್ ಪೊಟ್ಯಾಶ್- 20 ಕಿ.ಗ್ರಾ.

 • ಬಿತ್ತನೆ ಮಾಡಿದ 30 ದಿನಗಳ ನಂತರ

ಯೂರಿಯಾ – 26 kg 

ನೀರಾವರಿ

 • ಕಾಲುವೆ ನೀರಾವರಿ- ಬಿತ್ತನೆ ಮಾಡಿದ ಕೂಡಲೇ ಮೊದಲ ನೀರಾವರಿ ಮಾಡಲಾಗುತ್ತದೆ
 • ಬಿತ್ತನೆ ಮಾಡಿದ ಮೂರನೇ ದಿನ ಎರಡನೇ ನೀರಾವರಿ ಮಾಡಲಾಗುತ್ತದೆ
 • ತದ ನಂತರ ಮಣ್ಣಿನ ಪ್ರಕಾರವನ್ನು ಅವಲಂಬಿಸಿ 5-6 ದಿನಗಳ ಮಧ್ಯಂತರದಲ್ಲಿ.

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್ ಅಥವಾ ಕ್ವಿಜಾಲೋಫಾಪ್ ಈಥೈಲ್
500 ಮೀ.ಲಿ.ಮತ್ತು 250 ಮೀ.ಲಿ./ಎಕರೆ

ಕೀಟ ಮತ್ತು ರೋಗಗಳ ನಿರ್ವಹಣೆ

ಸೊರಗು ರೋಗ ಅಥವಾ ಬೇರು ಕೊಳೆ ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ
ಬೇಕಾಗುವ ಔಷಧ ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ
ಬೀಜಗಳಿಂದ ಹರಡುವ ರೋಗಗಳು
ಲಕ್ಷಣಗಳು
ಬೀಜ ಮೊಳಕೆಯೊಡೆಯುವುದು ಕಡಿಮೆಯಾಗುತ್ತದೆ, ಗಿಡಗಳು ಸತ್ತುಹೋಗುತ್ತವೆ
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ಡೈಜಿಂ ಮತ್ತು ಇಮಿಡಾಕ್ಲೋಪ್ರಿಡ್
120 ಗ್ರಾಂ/ಎಕರೆಗೆ 120ಮಿಲಿ/ಎಕರೆಗೆ
ಬಳಕೆ ವಿಧಾನ
ಬೀಜೋಪಚಾರ ಮಾಡಿ
ಬೂದಿರೋಗ
ಲಕ್ಷಣಗಳು
ಸೋಂಕಿತ ಗಿಡದಎಲೆಗಳ ಮೇಲೆ ಬಿಳಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ.
ಬೇಕಾಗುವ ಔಷಧ ಪ್ರಮಾಣ
ವೆಟ್ಟಬಲ್ ಸಲ್ಪರ್
100 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಸಸಿಕೊಳೆ ರೋಗ
ಲಕ್ಷಣಗಳು
ಎಲೆಗಳ ಮೇಲೆ ಹುಳುಗಳು ಬಿಳಿ ಬಣ್ಣದ ರಂಗೋಲಿಯಂತಹ ಎಳೆಗಳನ್ನು ಮಾಡುತ್ತವೆ
ಬೇಕಾಗುವ ಔಷಧ ಪ್ರಮಾಣ
ಲ್ಯಾ೦ಬ್ಧ ಸ್ಕೈಲೋತ್ರಿನ್
100 ಮಿಲಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 30-40 ದಿನಗಳ ನಂತರ
ಒಟ್ಟು ಕೊಯ್ಲು
2 ಬಾರಿ
ಕೊಯ್ಲಿನ ಅಂತರ
ಕೊಯ್ಲು 15 ದಿನಗಳ ಮಧ್ಯಂತರದಲ್ಲಿ

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಇಳುವರಿ
2500 ಕಟ್ಟುಗಳು
ಒಟ್ಟು ಕೊಯ್ಲಿನ ಇಳುವರಿ
25-28 ಕ್ವಿಂಟಾಲ್/ಎಕರೆ ( 5000 ಕಟ್ಟುಗಳು )

2 thoughts on “Fenugreek

 1. Pingback: Fenugreek – LeanAgri

 2. Pingback: Fenugreek – BharatAgri

Leave a Reply

Your email address will not be published. Required fields are marked *