Cabbage

ಎಲೆಕೋಸು

ಅಂದಾಜು

ಅಂದಾಜು ಇಳುವರಿ

100-120 ಕ್ವಿಂಟಾಲ್ / ಎಕರೆಗೆ 

ಅಂದಾಜು ಅವಧಿ

90-180   ದಿನಗಳು 

ಅಂದಾಜು ಖರ್ಚು (ರೂ )

55,450 /-​

ಅಂದಾಜು ಆದಾಯ (ರೂ )

1,10,000 /-

ಉತ್ತಮ ವಾತಾವರಣ

ವಾತಾವರಣ
 • ತಂಪಾದ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.
 • ಗಡ್ಡೆ ತಯಾರಾಗುವ ಸಮಯದಲ್ಲಿ ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣವು ಗಡ್ಡೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ
ತಾಪಮಾನ
 • ಹೆಚ್ಚಿನ ತಾಪಮಾನದಿಂದ ಗಡ್ಡೆಗಳು ಹಳದಿ ಬಣ್ಣವಾಗುತ್ತವೆ.
 • ಬೆಳೆಯ ಬೆಳವಣಿಗೆಗೆ ಮತ್ತು ಗಡ್ಡೆ ತಯಾರಾಗಲು 15-21°C ತಾಪಮಾನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ ಸರಾಸರಿ 350-500 ಮಿಲಿ.ಮೀ ಮಳೆಬೇಕು.

ಉತ್ತಮ ಮಣ್ಣು

ವಿಧ
 • ಮರಳು ಮಿಶ್ರಿತ ಹಾಗೂ ಜೆಡಿ ಮಣ್ಣು
ರಸಸಾರ
 • ಉತ್ತಮ ಶ್ರೇಣಿ – 5–5 ರಿಂದ 6.5
 • 8 ಕ್ಕಿಂತ ಹೆಚ್ಚು ರಸಸಾರ ಹೊಂದಿರುವ ಮಣ್ಣು ಹೆಚ್ಚು ರೋಗಕ್ಕೆ ಕಾರಣವಾಗುತ್ತದೆ.
 • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 6.5 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ಗೋಲ್ಡನ್ ಎಕರೆ
ಅವಧಿ
60-65 ದಿನಗಳು
ವಿಶಿಷ್ಠ ಲಕ್ಷಣ
ಸುಧಾರಿತ ವೈವಿಧ್ಯ, ಬೇಗನೆಕೊಯ್ಲಿಗೆ ಬರುವ ತಳಿ. ಬೇಗನೆ ಪರಿಪಕ್ವಗೊಳ್ಳುವ ಸಣ್ಣ ಗಡ್ಡೆಗಳು, ಎಲೆಗಳ ಬಣ್ಣವು ಹೊರಗಿನಿಂದ ತಿಳಿ ಹಸಿರು ಮತ್ತು ಒಳಗಿನಿಂದ ಕಡು ಹಸಿರು.
ಪ್ರೈಡ್ ಆಫ್ ಇಂಡಿಯಾ
ಅವಧಿ
70 - 80 ದಿನಗಳು
ವಿಶಿಷ್ಠ ಲಕ್ಷಣ
ಅಲ್ಪಾವಧಿಯ 1-1.5 ಕಿ.ಗ್ರಾ. ತೂಕದ ಮದ್ಯಮ ಗಾತ್ರದ ಗಡ್ಡೆಗಳು.
ಪುಸಾ ಡ್ರಮಹೆಡ್
ಅವಧಿ
100 - 110 ದಿನಗಳು
ವಿಶಿಷ್ಠ ಲಕ್ಷಣ
ಧೀರ್ಘಾವಧಿಯ ತಳಿ. ದೊಡ್ಡ, ಚಪ್ಪಟೆ, ಸ್ವಲ್ಪ ಸಡಿಲ ಮತ್ತು ಡ್ರಮ್ ಆಕಾರದ ಗಡ್ಡೆಗಳಿರುತ್ತವೆ. ಒಂದು ಗಡ್ದೆಯು 3-5 ಕಿ.ಗ್ರಾ. ತೂಕಾದ್ದಾಗಿರುತ್ತದೆ ಹೊರಗಿನ ಎಲೆಗಳು ಮಧ್ಯ ಶಿರದೊಂದಿಗೆ ತಿಳಿ ಹಸಿರು ಬಣ್ಣದಲ್ಲಿರುತ್ತವೆ. ಉತ್ತಮ ಬೆಳೆಗಾಗಿ ದೀರ್ಘ ಚಳಿಗಾಲದ ಅಗತ್ಯವಿದೆ, ಬ್ಲ್ಯಾಕ್ ಲೆಗ್ ರೋಗತಡೆದುಕೊಳ್ಳುವ ಸಾಮರ್ಥ್ಯವಿದೆ.
ಧೀರ್ಘಾವಧಿಯ ಡ್ರಮ್ ಹೆಡ್ ತಳಿ
ಅವಧಿ
105 - 110 ದಿನಗಳು
ವಿಶಿಷ್ಠ ಲಕ್ಷಣ
ಧೀರ್ಘಾವಧಿ ಹಂಗಾಮಿನ ತಳಿ, ಗಡ್ಡೆ ಗಟ್ಟಿಯಾಗಿರುತ್ತದೆ, ಚಪ್ಪಟೆ-ಮತ್ತು ಸಮನಾದ ಎಲೆಗಳನ್ನು ಹೊಂದಿರುವ ಗಡ್ಡೆಗಳು.
ಸೆಪ್ಟೆಂಬರ್ ಅರ್ಲಿ
ಅವಧಿ
105 - 110 ದಿನಗಳು
ವಿಶಿಷ್ಠ ಲಕ್ಷಣ
ನೀಲಗಿರಿಯಲ್ಲಿ ಪ್ರಸಿದ್ಧ ಮಧ್ಯ ಹಂಗಾಮಿನ ತಳಿ, ಗಡ್ಡೆ ಗಟ್ಟಿಯಾಗಿರುತ್ತದೆ, ಚಪ್ಪಟೆ-ಉದ್ದವಾಗಿರುವ ನೀಲಿ ಹಸಿರು ಎಲೆಗಳನ್ನು ಹೊಂದಿರುವ , 4-6 ಕೆ.ಜಿ ತೂಕವಿರುತ್ತದೆ.

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ
 • ಒಂದು ಎಕರೆ ಹೊಲದಲ್ಲಿ  ಬಿತ್ತಲು100 ಚದರ ಮೀ ನರ್ಸರಿ ಪ್ರದೇಶ ಸಾಕು. 
 • 3 ಮೀ ಉದ್ದ ಮತ್ತು 0.6 ಮೀ ಅಗಲ ಮತ್ತು 10-15 ಸೆಂ.ಮೀ ಎತ್ತರದ ಮಡಿಗಳನ್ನು ತಯಾರಿಸಿ.
 • ಎರಡು ಮಡಿಗಳ ನಡುವೆ 60 ಸೆಂ.ಮೀ ದೂರವನ್ನು ಇರಿಸಿ.
 • ಎರಡು ಸಾಲುಗಳ ನಡುವೆ 10 ಸೆಂ.ಮೀ ಅಂತರವಿರುವ ಮಡಿಗಳ ಮೇಲೆ 1-2 ಸೆಂ.ಮೀ ಆಳದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಒಂದು ಪದರು  ಮಣ್ಣಿನಿಂದ ಮುಚ್ಚಿ, ನಂತರ ನೀರಿನ ಕ್ಯಾನ್ ಮೂಲಕ ನೀರು ಹಾಕಿ.
 • ಅಗತ್ಯವಾದ ತಾಪಮಾನ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಮಡಿಗಳನ್ನು ಒಣ ಒಣಹುಲ್ಲು ಅಥವಾ ಹುಲ್ಲು ಅಥವಾ ಕಬ್ಬಿನ ಗರಿಗಳಿಂದ ಮುಚ್ಚಬೇಕು.
 • ಮೊಳಕೆಯೊಡೆಯುವಿಕೆಯು ಪೂರ್ಣಗೊಳ್ಳುವವರೆಗೆ ಅಗತ್ಯಕ್ಕೆ ಅನುಗುಣವಾಗಿ ನೀರಿನ ಕ್ಯಾನ್ ಮೂಲಕ ನೀರುಹಾಕಬೇಕು.
 • ನಾಟಿ ಮಾಡುವ ಹತ್ತು ದಿನಗಳ ಮೊದಲು ಮೊಳಕೆ ಸಸಿ ಮಡಿಗಳಿಗೆ ನೀರು ಹಾಕುವ  ಪ್ರಮಾಣವನ್ನು ಕಡಿಮೆ ಮಾಡಿ.
 • ಕೊಳೆ ರೋಗದಿಂದ (ಡ್ಯಾಂಪಿಂಗ್ ರೋಗ) ಸಸಿಮಡಿಯನ್ನು ಸಂರಕ್ಷಿಸಲು ಬೀಜ ಮೊಳಕೆಯೊಡೆಯುವ 3 ದಿನಗಳ ನಂತರ ರಿಡೋಮಿಲ್ @ 15-20 ಗ್ರಾಂ.10 ಲೀ ನೀರಿನ್ನು ಸಿಂಪಡನೆ ಮಾಡಿ.
 • ಬಿತ್ತನೆ ಮಾಡಿದ 25 ದಿನಗಳ ನಂತರ 19:19:19 @ 5 ಗ್ರಾಂ + ಥೈಮೆತ್ಹೋಕ್ಷೊಮ್@ 0.25 ಗ್ರಾಂ/ಲೀಟರ್ ನೀರನ್ನು ಸಿಂಪಡನೆ ಮಾಡಿ.

ವಿಧಾನ

 • ಪ್ರೊ ಟ್ರೇಗಳಲ್ಲಿ  ಪ್ರತಿ ಟ್ರೇ @ 1.2 ಕೆಜಿ ಪ್ರಮಾಣದಲ್ಲಿ ಕೊಕೊಪೀಟ್  ಹಾಕಿ. 
 • ಪ್ರೋಟ್ರೇಗಳಲ್ಲಿ ಬೀಜೋಪಚಾರ ಮಾಡಿದ ಬೀಜಗಳನ್ನು ಪ್ರತಿ ಕುಣಿಯಲ್ಲಿ @ 1 ಬೀಜದ ಪ್ರಮಾಣದಲ್ಲಿ ಬಿತ್ತನೆ ಮಾಡಿ.
 • ಬೀಜವನ್ನು ಕೊಕೊಪೀಟ್‌ನಿಂದ ಮುಚ್ಚಿ ಮತ್ತು ಟ್ರೇಗಳನ್ನು ಒಂದರ ಮೇಲೊಂದರಂತೆ ಇರಿಸಿ ಮತ್ತು ಮೊಳಕೆಯೊಡೆಯುವಿಕೆ ಪ್ರಾರಂಭವಾಗುವವರೆಗೆ ಪಾಲಿಥೀನ್ ಹಾಳೆಯಿಂದ ಮುಚ್ಚಿ (ಬಿತ್ತನೆ ಮಾಡಿದ 5 ದಿನಗಳ ನಂತರ).
 • 6 ದಿನಗಳ ನಂತರ, ಮೊಳಕೆಯೊಡೆದ ಬೀಜಗಳೊಂದಿಗೆ ಪ್ರೊ ಟ್ರೇಗಳನ್ನು ಪ್ರತ್ಯೇಕವಾಗಿ ನೆರಳುಮನೆಯಲ್ಲಿ  ಇರಿಸಿ.
ನರ್ಸರಿ ಅವಧಿ
 • ಅವಧಿ-45 ದಿನಗಳು 
 • 3-4 ಎಲೆಗಳು ಕಾಣಿಸಿಕೊಂಡಾಗ ಮತ್ತು ಕಾಂಡ ದಪ್ಪಗಾದಾಗ ಸಸ್ಯಗಳು ನಾಟಿ ಮಾಡಲು ಸಿದ್ಧವಾಗುತ್ತವೆ. 
ಬೀಜದ ಪ್ರಮಾಣ
ತಳಿಗಳು
240 - 300 ಗ್ರಾಂ/ಎಕರೆ
ಹೈಬ್ರಿಡ್
100 - 120 ಗ್ರಾಂ/ಎಕರೆ

ಬೀಜೋಪಚಾರ

 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 
 • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

 • ಕಾರ್ಬೆಂಡೆಜಿಮ್- 2 ಗ್ರಾಂ 

ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
  1. ಕೊಟ್ಟಿಗೆ ಗೊಬ್ಬರ – 2 ಟನ್
  2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
 • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
 • ಟ್ರಾಕ್ಟಾರ್ ಸಹಾಯದಿಂದ 45 ಸೆಂ.ಮೀ ಅಗಲಕ್ಕೆ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ. 

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.4 ಅಡಿ
ಗಿಡಗಳ ನಡುವಿನ ಅಂತರ
1 ಅಡಿ
ಗಿಡಗಳ ಸಂಖ್ಯೆ
31,428

ಬೇರು ಉಪಚಾರ

 • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
 • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
 • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
 • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

 • ಸಸಿೆಗಳನ್ನು ಬದುಗಳ ಮೇಲೆ 30 ಸೆಂ.ಮೀ ಅಂತರದಲ್ಲಿ  ನೆಡಬೇಕು.
 • ಗಾಳಿಯಾಡದಂತೆ ಬೇರುಗಳ ಸುತ್ತಲೂ ಮಣ್ಣಿನಿಂದ ಮುಚ್ಚಬೇಕು.
 • ತೀವ್ರವಾದ ಸೂರ್ಯನ ಶಾಖದಿಂದ ಸಂರಕ್ಷಣೆಗಾಗಿ ಸಸಿಗಳನ್ನು ಸಂಜೆ ಸಮಯದಲ್ಲಿ ನಾಟಿ ಮಾಡಬೇಕು.

ಪೋಷಕಾಂಶಗಳ ನಿರ್ವಹಣೆ

 • ಒಟ್ಟು ಗೊಬ್ಬರದ ಪ್ರಮಾಣ :
  60:30:30 ಎನ್‌ಪಿಕೆ ಕಿ.ಗ್ರಾಂ. ಪ್ರತಿ ಎಕರೆಗೆ
 • ಬಿತ್ತನೆಯ ಸಮಯದಲ್ಲಿ ಹಾಕಿ-
  64 ಕೆಜಿ ಯೂರಿಯಾ
  184 ಕಿ.ಗ್ರಾ. ಎಸ್.ಎಸ್ .ಪಿ
  50 ಕಿ.ಗ್ರಾ. ಎಮ್ಓಪಿ
 • ಕಸಿ ಮಾಡಿದ 30 ದಿನಗಳ ನಂತರ-
  64 ಕೆಜಿ ಯೂರಿಯಾ

ನೀರಾವರಿ

 • ಹನಿ ನೀರಾವರಿ- ದಿನ ಬಿಟ್ಟು ದಿನ ದಿನಗಳಲ್ಲಿ.
 • ಸಾಲಿನಲ್ಲಿ ನೀರು ಹಾಯಿಸುವುದು – 8-10 ದಿನಗಳ ಮಧ್ಯಂತರದಲ್ಲಿ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಜಮೀನಿಗೆ ಹಾಕಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಪ್ಲೋರೋಫೆನ್ ಅಥವಾ ಪೆಂಡಿಮೆಥಾಲಿನ್ ಅಥವಾ ಐಸೊಪ್ರೊಟುರಾನ್
100 ಮೀ.ಲಿ./ಎಕರೆ 400 ಮೀ.ಲಿ./ಎಕರೆ 200 ಮೀ.ಲಿ./ಎಕರೆ
ನಾಟಿ ಮಾಡಿದ 25 ದಿನಗಳ ನಂತರ
ವಿಧಾನ
ಸಿಂಪಡಣೆ
ಅಲಾಕ್ಲೋರ್ ಅಥವಾ ಐಸೊಪ್ರೊಟುರಾನ್
500 ಗ್ರಾಂ/ಎಕರೆ 1 ಕಿ.ಗ್ರಾ./ಎಕರೆ

ಕೀಟ ಮತ್ತು ರೋಗಗಳ ನಿರ್ವಹಣೆ

ಸಸಿಕೊಳೆ ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ, ಇದರಿಂದ ಸುಲಭವಾಗಿ ಕಿತ್ತುಬರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಮೆಟಲಕ್ಸಿಲ್
250.0 ಮಿಲಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ / ನೀರಿನಲ್ಲಿ ಬೆರೆಸಿ ಡ್ರಿಪ್ ಮೂಲಕ ಗಿಡಗಳಿಗೆ ಹಾಯಿಸಿ
ಮಣ್ಣಿನಿಂದ ಹರಡುವ ರೋಗಗಳು
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ಡಿಜಿಮ್ ಅಥವಾ ಇಮಿಡಾಕ್ಲೋಪ್ರಿಡ್
40 ಗ್ರಾಂ/ಎಕರೆಗೆ + 40 ಗ್ರಾಂ/ಎಕರೆಗೆ
ಬಳಕೆ ವಿಧಾನ
ಎರಡನ್ನು ನೀರಿನಲ್ಲಿ ಬೆರೆಸಿ ಜಮೀನಿಗೆ ನಾಟಿ ಮಾಡುವ ಮೊದಲು ಬೇರನ್ನು ದ್ರಾವಣದಲ್ಲಿ ನೆನೆಸಿ ನಾಟಿಮಾಡಬೇಕು
ವಜ್ರ ಗುರುತಿನ ಬೆನ್ನಿನ ಪತಂಗ ( ಡಿ.ಬಿ.ಎಂ )
ಲಕ್ಷಣಗಳು
ಮರಿಹುಳು ಎಲೆಗಳನ್ನು ತಿನ್ನುತ್ತದೆ ಮತ್ತು ರಂಧ್ರಗಳನ್ನು ಕೊರೆಯುತ್ತದೆ, ಇದರಿಂದ ಎಲೆಗಳು ಹೆಚ್ಚು ಉದುರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಪ್ಲೇಥೋರ(ಅಗಾಧ )- (ಇಂಡಾಕ್ಸೋಕಾರ್ಬ್ + ನ್ಯೋವಲೂರನ್ )
200 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಎಲೆಚ್ಚುಕ್ಕೆ ರೋಗ
ಲಕ್ಷಣಗಳು
ಎಲೆಗಳ ಮೇಲೆ ದುಂಡಾದ ಅಥವಾ ಆಕಾರವಿಲ್ಲದ ಕಪ್ಪನೆಯ ಸಣ್ಣ ಮಚ್ಚೆಗಳಾಗುತ್ತವೆ, ಅವು ಒಂದಕ್ಕೊಂದು ಸೇರಿ ದೊಡ್ಡದಾಗಿ ಎಲೆಗಳ ಮೇಲೆ ಅಂಗಾಮಾರಿಯಂತಾಗುತ್ತವೆ ಸೋಂಕಿತ ಎಲೆಗಳು ಅವಧಿಗೆ ಮುನ್ನವೇ ಬಿದ್ದುಹೋಗುತ್ತವೆ ಇದರಿಂದ ಇಳುವರಿ ಕಡಿಮೆಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಮ್ಯಾಂಕೊಜೆಬ್
200 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
(ಫ್ಲೇ ಬೀಟಲ್ ) ಹಾರುವ ಜೀರುಂಡೆ
ಲಕ್ಷಣಗಳು
ಕಪ್ಪು ಹುಳು ಎಳೆಯ ಚಿಗುರು ಮತ್ತು ರೆಂಬೆಗಳನ್ನು ತಿನ್ನುತ್ತದೆ.
ಬೇಕಾಗುವ ಔಷಧ ಪ್ರಮಾಣ
ಬೆವೆರಿಯ ಬೆಸ್ಸಿಯಾನ
1 ಕೇಜಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಕ್ಲಬ್ ರೂಟ್ / ಬೇರುಗಂಟು
ಲಕ್ಷಣಗಳು
ಬೇರಿನ ಮೇಲೆ ಬೊಬ್ಬೆ, ಗುಳ್ಳೆ ಮತ್ತು ಗಾಯದಂತಹ ಲಕ್ಷಣಗಳು ಕಂಡುಬರುತ್ತವೆ. ಗಿಡಗಳು ದುರ್ಭಲಗೊಳ್ಳುತ್ತವೆ, ಬೇರು ಹಾನಿಗೊಳಗಾಗುತ್ತವೆ, ಸುಲಭವಾಗಿ ಕಿತ್ತುಬರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಟ್ರೈಕೋಡರ್ಮ ವಿರಿಡೆ
1 ಕೇಜಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ / ನೀರಿನಲ್ಲಿ ಬೆರೆಸಿ ಡ್ರಿಪ್ ಮೂಲಕ ಗಿಡಗಳಿಗೆ ಹಾಯಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ನಾಟಿ ಮಾಡಿದ 70-75 ದಿನಗಳ ನಂತರ

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
100-120 ಕ್ವಿಂಟಾಲ್ /ಎಕರೆಗೆ

2 thoughts on “Cabbage

 1. Pingback: Cabbage – LeanAgri

 2. Pingback: Cabbage – BharatAgri

Leave a Reply

Your email address will not be published. Required fields are marked *