Sweet Corn

ಮೆಕ್ಕೆಜೋಳ (ಸ್ವೀಟ್ ಕಾರ್ನ್)

ಅಂದಾಜು

ಅಂದಾಜು ಇಳುವರಿ
 • 20 – 30 ಕ್ವಿನ್ಟಾಲ್ / ಎಕರೆಗೆ
ಅಂದಾಜು ಅವಧಿ

ಬಿತ್ತನೆ ಮಾಡಿದ 70-105 ದಿನಗಳ ನಂತರ 

ಅಂದಾಜು ಖರ್ಚು (ರೂ )

25,000

ಅಂದಾಜು ಆದಾಯ (ರೂ

48,000

ಸೂಕ್ತವಾದ ಅಂಶಗಳು

ವಾತಾವರಣ
 • ಹಿಮಪ್ರದೇಶವನ್ನು ಹೊರತುಪಡಿಸಿ ಯಾವುದೇ ಪ್ರದೇಶದಲ್ಲಿ ಬೆಳೆಯಬಹುದು ( ಉಷ್ಣವಲಯದಿಂದ ಶೀತವಲಯದ ತನಕ)
 • ಹೂ ಬಿಡುವಾಗ ಮತ್ತು ತೆನೆ ಬಿಡುವಾಗ ಹೆಚ್ಚು ಮಳೆಬೀಳಬಾರದು
ತಾಪಮಾನ
 • 20-32°C  ತಾಪಮಾನ ಬೆಳೆಗೆ ಉತ್ತಮವಾದದ್ದು 
 • ಮೊಳಕೆಯೊಡೆಯಲು 20-25 ತಾಪಮಾನ ಬೇಕು 
 • ಬೆಳವಣಿಗೆಯ ಹಂತಗಳಲ್ಲಿ ಅತಿಯಾದ ಶೀತವನ್ನು ಇದು ತಡೆದುಕೊಳ್ಳುವುದಿಲ್ಲ ಇದರಿಂದ ಮೊಳಕೆಯೊಡೆಯುವುದು ತಡವಾಗುತ್ತದೆ,ಬೆಳವಣಿಗೆ ಕುಂಟಿತವಾಗುತ್ತದೆ, ಸಣ್ಣ ಮತ್ತು ವಿಕಾರವಾದ ತೆನೆಗಳನ್ನು ಬಿಡುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • 500 – 800 ಮಿಮೀ  ಮಳೆಬೀಳುವ ಪ್ರದೇಶ 
 • ಮೊಳಕೆಯೊಡೆಯುವ ಮತ್ತು ತೆನೆಬಿಡುವ ಹಂತಗಳಲ್ಲಿ ನೀರು ಹಾಯಿಸುವುದು ಅತ್ಯಂತ ಅವಶ್ಯಕ.

ಮಣ್ಣು

ವಿಧ
 • ಆಳವಾದ ಫಲವತ್ತಾದ ನೀರುಬಸಿದುಹೋಗುವಂತಹ ಮರಳುಮಿಶ್ರಿತ ಗೋಡುಮಣ್ಣು ಬೆಳೆಗೆ ತುಂಬಾ ಒಳ್ಳೆಯದು
ಪಿ.ಎಚ್ ( ರಸಸಾರ )
 • ಉತ್ತಮ ರಸಸಾರ 6.0 to 7.5
 • ರಸಸಾರ  6.0  ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.5  ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆ ಸಾಮಗ್ರಿಗಳು

ಮಾಧುರಿ
ಅವಧಿ
70-75 ದಿನಗಳು
ವಿಶಿಷ್ಟ ಗುಣಲಕ್ಷಣಗಳು
ಅಲ್ಪಾವಧಿ ತಳಿ
ಕಾಲಗಳು
ಮುಂಗಾರು
ಇಳುವರಿ (ಕ್ವಿ/ಎಕರೆಗೆ )
7 ಕ್ವಿ ,ಪ್ರತಿ ಎಕರೆಗೆ
ಪ್ರಿಯ
ಅವಧಿ
80-85 ದಿನಗಳು
ವಿಶಿಷ್ಟ ಗುಣಲಕ್ಷಣಗಳು
ಅಲ್ಪಾವಧಿ ತಳಿ
ಕಾಲಗಳು
ಹಿಂಗಾರು
ಇಳುವರಿ (ಕ್ವಿ/ಎಕರೆಗೆ )
10 ಕ್ವಿ ,ಪ್ರತಿ ಎಕರೆಗೆ
ಮಂಜರಿ
ಅವಧಿ
100-105 ದಿನಗಳು
ವಿಶಿಷ್ಟ ಗುಣಲಕ್ಷಣಗಳು
ಮಧ್ಯಮ ಕಾಲಾವಧಿಯ ತಳಿ
ಕಾಲಗಳು
ಮುಂಗಾರು
ಇಳುವರಿ (ಕ್ವಿ/ಎಕರೆಗೆ )
20 ಕ್ವಿ ,ಪ್ರತಿ ಎಕರೆಗೆ
ಶುಗರ್ 75
ಅವಧಿ
75-80 ದಿನಗಳು
ವಿಶಿಷ್ಟ ಗುಣಲಕ್ಷಣಗಳು
ಎಲ್ಲಾ ಕಾಲಗಳಲ್ಲಿ
ಕಾಲಗಳು
ಮುಂಗಾರು
ಇಳುವರಿ (ಕ್ವಿ/ಎಕರೆಗೆ )
30 ಕ್ವಿ ,ಪ್ರತಿ ಎಕರೆಗೆ
ಬೇಕಾಗುವ ಬೀಜದ ಪ್ರಮಾಣ
ತಳಿ ಮತ್ತು ಹೈಬ್ರಿಡ್
4-5 ಕೆ.ಜಿ ಪ್ರತಿ ಎಕರೆಗೆ
ಶುಗರ್ 75 ತಳಿ
2- 2.5 ಕೆ.ಜಿ ಪ್ರತಿ ಎಕರೆಗೆ

ಬೀಜೋಪಚಾರ

ಬೀಜಗಳನ್ನು ಈ ಕೆಳಗಿನ ಔಷಧಗಳೊಂದಿಗೆ ಉಪಚಾರ ಮಾಡಿ

 • ಇಮಿಡಾಕ್ಲೋಪ್ರಿಡ್ – 4 ಮಿಲಿ 

  ಸೂಚನೆ – ಎರಡು ಲೀಟರ್ ನೀರಿಗೆ ಹಾಕಿ ಒಂದು ಕೇ.ಜಿ ಬೀಜವನ್ನು ಹಾಕಿ 10 ನಿಮಿಷ ಬಿಡಬೇಕು ನಂತರ 15 ನಿಮಿಷ ನೆರಳಲ್ಲಿ ಒಣಗಿಸಿ.

  1. ಕಾರ್ಬ್ಯಾಂಡೈಜಿಂ – 2 ಗ್ರಾಂ –

  ಸೂಚನೆ- ಮೇಲೆತಿಳಿಸಿದಂತೆ  ಇಮಿಡಾಕ್ಲೋಪ್ರಿಡ್ ನಿಂದ ಬೀಜೋಪಚಾರ ಮಾಡಿದ 250 ಗ್ರಾಂ ಬೀಜಗಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ, ಕಾರ್ಬ್ಯಾಂಡೈಜಿಂ – 2 ಗ್ರಾಂ  ಹಾಕಿ ಚೆನ್ನಾಗಿ ಬೀಜಕ್ಕೆ ಪುಡಿ ಅಂಟಿಕೊಳ್ಳಿವಂತೆ ಕಲೆಸಬೇಕು. 

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನಬಿತ್ತನೆ ಮಾಡುವ ಮೊದಲು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಆಳಕ್ಕೆ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.
 • ಕೊನೆಯ ಉಳುಮೆಯೊಂದಿಗೆ 2 ಟನ್ ಕೊಟ್ಟಿಗೆ ಗೊಬ್ಬರವನ್ನು ಮತ್ತು ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ 3 ಕೆಜಿ  ಹರಡಿ ಮಣ್ಣಿನಲ್ಲಿ ಬೆರೆಸಬೇಕು.ಹತ್ತು ದಿನ ಚೆನ್ನಾಗಿ ಕೊಳೆಯಲು ಬಿಡಬೇಕು 
ಮಡಿ ತಯಾರಿ
 • ಟ್ರಾಕ್ಟಾರ್ ಸಹಾಯದಿಂದ 60 ಸೆಂ.ಮೀ ಅಗಲಕ್ಕೆ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ

ಸಾಲಿನಲ್ಲಿ ಗಿಡಗಳ ಅಂತರ ಮತ್ತು ಒಂದು ಎಕರೆಗೆ ಹಾಕಬಹುದಾದ ಗಿಡಗಳು

ವಿಧ
ಸಾಲುಗಳ ಅಂತರ
1.9 ಅಡಿ
ಗಿಡಗಳ ನಡುವಿನ ಅಂತರ
0.9 ಅಡಿ
ಗಿಡಗಳ ಸಂಖ್ಯೆ ( ಪ್ರತಿ ಎಕರೆಗೆ
25,730

ಬಿತ್ತನೆ

 • ಬೀಜಗಳನ್ನು4 ಸೆಂ.ಮೀ ಆಳದಲ್ಲಿ ಸಾಲುಗಳಲ್ಲಿ ಬಿತ್ತಿ .( ಬಿತ್ತುವಾಗ ಮೇಲೆ ಸೂಚಿಸಿದಷ್ಟು ಗೊಬ್ಬರದ ಜೊತೆ ಸೇರಿಸಿ ಬಿತ್ತಿರಿ ಮತ್ತು 25  ದಿನಗಳ ನಂತರ ಮತ್ತೆ ಮಣ್ಣಿನಿಂದ ಮುಚ್ಚಿರಿ/ ಕುಂಟೆ ಹೊಡೆಯಿರಿ )
 • ಪ್ರತಿ ಗುಂಡಿಗೆ 2 ಬೀಜ ಹಾಕಿ

ಪೋಷಕಾಂಶಗಳ ಬಳಕೆ

 • ಬೇಕಾಗುವ ಒಟ್ಟು ಪ್ರಮಾಣ : 80:25:25 ಕೆಜಿ /ಎಕರೆಗೆ  [ಎನ್(ಸಾರಜನಕ ): ಪಿ( ರಂಜಕ ): ಕೆ (ಪೊಟ್ಯಾಷ್ )].

   –  ಬಿತ್ತನೆ ಸಮಯದಲ್ಲಿ – 85 ಕೆಜಿ ಯೂರಿಯಾ + 150 ಕೆಜಿ ಎಸ್.ಎಸ್.ಪಿ + 22  ಕೆಜಿ ಎಂ..ಪಿ

   – 30 ದಿನಗಳ ನಂತರ –  45 ಕೆಜಿ ಯೂರಿಯಾ  + 10 ಕೆಜಿ ಎಂ.ಓ.ಪಿ

   – 60 ದಿನಗಳ ನಂತರ –  45 ಕೆಜಿ ಯೂರಿಯಾ  + 10 ಕೆಜಿ ಎಂ.ಓ.ಪಿ

ನೀರಾವರಿ

 • ಬೆಳೆಗೆ ಪಾತಳಿ ನೀರಾವರಿ ಪದ್ಧತಿಯಲ್ಲಿಸಾಲುಬೋದು ವಿನ್ಯಾಸದಲ್ಲಿ ವಾರಕೊಮ್ಮೆ ಅಥವಾ 10 ದಿನಗಳಿಗೊಮ್ಮೆ  ನೀರು ಉಣಿಸುವುದು ಸೂಕ್ತ.

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆ ಮಾಡಿದ 3-5 ದಿನಗಳ ನಂತರ
ವಿಧಾನ
ಸಿಂಪಡಣೆ ಮಾಡುವುದು
ಕಳೆನಾಶಕದ ಹೆಸರು
ಅಟ್ರಾಜಿನ್ ಅಥವಾ ಫ್ಲ್ಯೂಕ್ಲೋರಾಲಿನ್ ಅಥವಾ ಪೆಂಡೆಮೆಥಲೀನ್
ಕಳೆನಾಶಕದ ಪ್ರಮಾಣ
100 ಗ್ರಾಂ / ಎಕರೆಗೆ 400 ಗ್ರಾಂ / ಎಕರೆಗೆ 300 ಗ್ರಾಂ / ಎಕರೆಗೆ
ಬಿತ್ತನೆ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ ಮಾಡುವುದು
ಕಳೆನಾಶಕದ ಹೆಸರು
2,4- ಡಿ
ಕಳೆನಾಶಕದ ಪ್ರಮಾಣ
400 ಗ್ರಾಂ / ಎಕರೆಗೆ

ಕೀಟ ಮತ್ತು ರೋಗಗಳ ನಿರ್ವಹಣೆ

ಸೊರಗು ರೋಗ
ಲಕ್ಷಣಗಳು
ಗಿಡಗಳು ಮುದುಡಿ ಒಣಗಿಹೋಗುತ್ತವೆ. ಸೋಂಕು ಹೆಚ್ಚಾದಂತೆ ಎಳೆಯ ಗರಿಗಳು ಬಾದೆಗೊಳಗಾಗಿ ಗಿಡ ಹಂತಹಂತವಾಗಿ ಸಾಯುತ್ತಾಬರುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕಾರ್ಬೆನ್ಡೈಜಿಂ
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ತೆನೆ ಕೊರಕ /ಕಾಳು ಕೊರಕ
ಲಕ್ಷಣಗಳು
ತೆನೆಯ ಮೇಲೆ ರಂಧ್ರಗಳನ್ನು ಹುಳು ಕೊರೆಯುತ್ತದೆ
ಬೇಕಾಗುವ ಔಷಧ ಪ್ರಮಾಣ
ಮೆಲಾಥಿಯೋನ್
200 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಸೈನಿಕ ಹುಳು
ಲಕ್ಷಣಗಳು
ತೆನೆಗಳ ಸಿಪ್ಪೆಯ ಒಳಗೆ ರಂದ್ರಗಳನ್ನು ಕೊರೆಯುತ್ತದೆ
ಬೇಕಾಗುವ ಔಷಧ ಪ್ರಮಾಣ
ಲಂಬ್ಡ್ಯಾ ಸೈಹಾಲೊಥ್ರಿನ್ ಥೈಯಾಮೆಥೋಕ್ಸಾಂ
100 ಗ್ರಾಂ / ಎಕರೆಗೆ 100 ಮಿಲಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ತುಕ್ಕು ರೋಗ
ಲಕ್ಷಣಗಳು
ಎಲೆಗಳ ಎರಡೂ ಬದಿಗಳಲ್ಲಿ ಕಂದು ಬಣ್ಣದ ಚುಕ್ಕೆಗಳಾಗಿ ಅವು ತುಕ್ಕು ಹಿಡಿದಂತೆ, ಕಜ್ಜಿಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಕ್ಲೋರೋಥಲಾನಿಲ್
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
Leaf spot disease symptoms and control
ಎಲೆಚ್ಚುಕ್ಕೆ ರೋಗ ಮತ್ತು ಎಲೆ ಅಂಗಮಾರಿ
ಲಕ್ಷಣಗಳು
ಎಲೆಗಳ ಅಂಚಿಗೆ ಕಂದುಬಣ್ಣದ ಕಲೆಗಳು ಕಂಡುಬರುತ್ತವೆ ಗಾಢ / ತಿಳಿಯಾದ ಸುರುಳಿಯಂತಹ ಕಲೆಗಳು ಎಲೆ ಮತ್ತು ಕಾಂಡದ ಮೇಲೆ ಹಬ್ಬುತ್ತವೆ.
ಬೇಕಾಗುವ ಔಷಧ ಪ್ರಮಾಣ
ಮ್ಯಾಂಕೊಜೆಬ್ ಮತ್ತು ಕಾರ್ಬೆನ್ಡೈಜಿಂ
200 ಗ್ರಾಂ/ಎಕರೆಗೆ & 200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
Maize plant with leaves showing chlorotic striping caused by Philippine downy mildew
ಬೂಜು ತುಪ್ಪಟ ರೋಗ
ಲಕ್ಷಣಗಳು
ಗಿಡ್ಡವಾದ ಹಳದಿಬಣ್ಣದ ಗಿಡಗಳು ಅವಧಿಗೆ ಮುನ್ನವೇ ಸಾಯುತ್ತವೆ. ಗರಿಗಳ ಮೇಲೆ ಹಳದಿ-ಹಸಿರು ಬಣ್ಣದ ಚಿತ್ರದ ಗಾಯಗಳು ಮತ್ತು ಬಿಳಿ ಗೆರೆಗಳಾಗುತ್ತವೆ.
ಬೇಕಾಗುವ ಔಷಧ ಪ್ರಮಾಣ
ಫಾಸಟೈಲ್ ಆಲ್
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಕಾಂಡ ಕೊರಕ
ಲಕ್ಷಣಗಳು
ಹುಳುಗಳು ಕಾಂಡದಲ್ಲಿ ರಂಧ್ರಗಳನ್ನು ಕೊರೆಯುತ್ತವೆ ಕಾಂಡದ ನಡುಗೆಣ್ಣೆಗಳ ಮೇಲೆ ರಂದ್ರಗಾಗುತ್ತವೆ,ಅದರೊಳಗೆ ಹುಳುಗಳು ಅಡಗಿಕೊಂಡು ಒಳಗಿನ ತಿರುಳನ್ನು ತಿನ್ನುತ್ತವೆ.
ಬೇಕಾಗುವ ಔಷಧ ಪ್ರಮಾಣ
ಪ್ಲೇಥೋರ (ಅಗಾಧ ) - { ಇಂಡಕ್ಸೋಕಾರ್ಬ್ + ನೋವಾಲ್ಯೂರಾನ್ }
200 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಎಲೆ ತಿನ್ನುವ ಹುಳು
ಲಕ್ಷಣಗಳು
ಕಾಂಡ, ಎಲೆಗಳ ಮೇಲೆ ರಂಧ್ರಗಳನ್ನು ಕೊರೆದು ತಿನ್ನುತ್ತದೆ ಮತ್ತು ಕಾಂಡದ ಒಳಗೆ ಅಡಗಿರುತ್ತದೆ
ಬೇಕಾಗುವ ಔಷಧ ಪ್ರಮಾಣ
ಪ್ಲೇಥೋರ (ಅಗಾಧ ) - { ಇಂಡಕ್ಸೋಕಾರ್ಬ್ + ನೋವಾಲ್ಯೂರಾನ್ }
100 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 70-105 ದಿನಗಳ ನಂತರ

ಇಳುವರಿ

ಇಳುವರಿ
ಒಟ್ಟು ಮೊತ್ತ
20 – 30 ಕ್ವಿನ್ಟಾಲ್ / ಎಕರೆಗೆ

1 thought on “Sweet Corn

 1. Pingback: Sweet Corn - BharatAgri

Leave a Reply

Your email address will not be published. Required fields are marked *