Potato

ಆಲೂಗಡ್ಡೆ

ಅಂದಾಜು

ಅಂದಾಜು ಇಳುವರಿ
 • 100-180  ಕ್ವಿಂಟಾಲ್/ಎಕರೆಗೆ
ಅಂದಾಜು ಅವಧಿ
 • 110-100 ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)
ಅಂದಾಜು ಖರ್ಚು (ರೂ )

45,000

ಅಂದಾಜು ಆದಾಯ (ರೂ )

1,68,000

ಉತ್ತಮ ವಾತಾವರಣ

ವಾತಾವರಣ
 • ಬೆಳವಣಿಗೆಯ ಹಂತದಲ್ಲಿ ತಂಪಾದ ವಾತಾವರಣ ಉತ್ತಮ. 
ತಾಪಮಾನ
 • ಬೆಳವಣಿಗೆಯ ಹಂತದಲ್ಲಿ 24 °C ತಾಪಮಾನ ಬೇಕು, ಗಡ್ಡೆ ಬರುವ ಹಂತದಲ್ಲಿ 20 °C ತಾಪಮಾನ ಬೇಕು.
 • ತಾಪಮಾನ 20-25 °C ಬೆಳೆಗೆ ಉತ್ತಮ
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಮೊಳಕೆಯೊಡೆಯುವ ಮತ್ತು ಭೂಮಿಯೊಳಗೆ ಗಡ್ಡೆಬೆಳೆಯುವ ಹಂತಗಳಲ್ಲಿ ನೀರು ಅತ್ಯಂತ ಅವಶ್ಯಕ.
 • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ 500 – 700 ಮಿಲಿ.ಮೀ ಸರಾಸರಿ ಮಳೆಬೇಕು

ಉತ್ತಮ ಮಣ್ಣು

ವಿಧ
 • ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ ನೀರು ಬಸಿದು ಹೋಗುವಂತಹ ಕೆಂಪು     ಮಣ್ಣಲ್ಲಿ ಕೂಡಬೆಳೆಯಬಹುದಾಗಿದೆ.
 • ಸವಳು ಮತ್ತು ಜಾಗು ಪ್ರದೇಶಗಳಲ್ಲಿ  ಬೆಳೆಯನ್ನು ಬೆಳೆಯುವುದು ಯೋಗ್ಯವಲ್ಲ.ಅಲ್ಪ ಆಸಿಡ್ ಪ್ರಮಾಣದ ಮಣ್ಣು ಇದ್ದರೆ  ಬೆಳೆಗೆಅನುಕೂಲ.
ರಸಸಾರ
 1. ಉತ್ತಮ ಶ್ರೇಣಿ – 5.0 – 6.5
 2. ರಸಸಾರ  5.5  ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 3. ರಸಸಾರ 7.5  ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು
 4. ಈರುಳ್ಳಿ ಬೆಳೆಗೆ ಲವಣಯುಕ್ತ ಮಣ್ಣು ಸೂಕ್ತವಲ್ಲ ಬೆಳೆಯು ರೋಗಗಳಿಗೆ ತುತ್ತಾಗುತ್ತದೆ

ಬಿತ್ತನೆ ಸಾಮಗ್ರಿ

ಬೀಜದ ಪ್ರಮಾಣ
ತಳಿಗಳು
600-800 ಕೆಜಿ ಪ್ರತಿ ಎಕರೆಗೆ ಮೊಳಕೆಯೊಡೆದ ಆಲೂಗಡ್ಡೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಪ್ರತಿ ತುಂಡಿನಲ್ಲೂ ಒಂದಾರರೂ ಮೊಳಕೆಯಿರಬೇಕು).
ಗಡ್ಡೆಯ ತೂಕ
40-50 ಗ್ರಾಂ- ಬೀಜ
ಕುಫ್ರಿ ಜ್ಯೋತಿ
ಕೊಯ್ಲಿಗೆ ಬರುವ ಅವಧಿ
100 ದಿನಗಳು
ವಿಶಿಷ್ಟ ಲಕ್ಷಣಗಳು
ಗಡ್ಡೆಗಳು ಬಿಳಿಬಣ್ಣ, ದುಂಡಗೆ , ದಪ್ಪದಾಗಿರುತ್ತವೆ. ಮೊದಲನೇ ಅಂಗಮಾರಿ ಮತ್ತು ಕೊನೆ ಅಂಗಮಾರಿ ರೋಗವನ್ನು ಮಧ್ಯಮ ಪ್ರಮಾಣದಲ್ಲಿ ತಡೆದುಕೊಳ್ಳುವ ಸಾಮರ್ಥ್ಯವಿರುತ್ತದೆ.
ಕುಫ್ರಿ ಬಾದ್ ಷಾ
ಕೊಯ್ಲಿಗೆ ಬರುವ ಅವಧಿ
110 ದಿನಗಳು
ವಿಶಿಷ್ಟ ಲಕ್ಷಣಗಳು
ಮೊದಲನೇ ಅಂಗಮಾರಿ ಮತ್ತು ಕೊನೆ ಅಂಗಮಾರಿ ರೋಗವನ್ನು ಮಧ್ಯಮ ಪ್ರಮಾಣದಲ್ಲಿ ತಡೆದುಕೊಳ್ಳುವ ಸಾಮರ್ಥ್ಯವಿರುತ್ತದೆ.

ಬೀಜೋಪಚಾರ

 • ಗಡ್ಡೆಗಳನ್ನು  ಅಝಟೋಬ್ಯಾಕ್ಟರ್ -4 ಕೇಜಿ ಪುಡಿಯನ್ನು 200 ಲೀಟರ್ ನೀರಿಗೆ ಕಲೆಸಿ ( 800 ಕೇಜಿ ಬೀಜಕ್ಕೆ ) ಬೀಜಗಳನ್ನು ನಿಮಿಷ ಅದರಲ್ಲಿ ಅದ್ದಿ /ನೆನೆಸಿ ನಂತರ ಬಿತ್ತನೆ ಮಾಡಿ .

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನಬಿತ್ತನೆ ಮಾಡುವ ಮೊದಲು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಆಳಕ್ಕೆ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.
 • ಕಡೇ ಉಳುಮೆಯೊಂದಿಗೆ 2 ಟನ್ ಕೊಟ್ಟಿಗೆ ಗೊಬ್ಬರವನ್ನು ಮತ್ತು ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ 3 ಕೆಜಿ  ಹರಡಿ ಮಣ್ಣಿನಲ್ಲಿ ಬೆರೆಸಬೇಕು.ಹತ್ತು ದಿನ ಚೆನ್ನಾಗಿ ಕೊಳೆಯಲು ಬಿಡಬೇಕು 
ಸಾಲು-ಬದು ತಯಾರಿ
 • ಟ್ರಾಕ್ಟಾರ್ ಸಹಾಯದಿಂದ 60 ಸೆಂ.ಮೀ ಅಗಲಕ್ಕೆ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ. 

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು/ ಹೈಬ್ರಿಡ್
ಸಾಲುಗಳ ಅಂತರ
0.60 ಮೀಟರ್
ಗಿಡಗಳ ನಡುವಿನ ಅಂತರ
0.20 ಮೀಟರ್
ಗಿಡಗಳ ಸಂಖ್ಯೆ
33,300

ಗಿಡಗಳನ್ನು ಸ್ಥಳಾಂತರಿಸುವ ಪದ್ಧತಿ / ನೇರವಾಗಿ ಬಿತ್ತುವ ಪದ್ಧತಿ

 • ಗಡ್ಡೆಗಳನ್ನು 20 ಸೆಂ. ಮೀ ಅಂತರದಲ್ಲಿ ಬದುಗಳ ಮೇಲೆ ಹಾಕಬೇಕು 
 • ಮೊಳಕೆಯೊಡೆದ ಗಡ್ಡೆಗಳನ್ನು ಸಾಲಿನಲ್ಲಿ ಮೊಳಕೆಯನ್ನು ಮೇಲ್ಮುಖವಾಗಿ ಮಾಡಿ ಊಳಬೇಕು, ಮೊಳಕೆ ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.

ಪೋಷಕಾಂಶಗಳ ನಿರ್ವಹಣೆ

ಬೇಕಾಗುವ ಒಟ್ಟು ಪ್ರಮಾಣ : 40:55:40 ಎನ್.ಪಿ.ಕೆ ಕೆಜಿ /ಎಕರೆಗೆ

 • ಬಿತ್ತನೆ ಸಮಯದಲ್ಲಿ – 75 ಕೆಜಿ ಯೂರಿಯಾ + 800 ಕೆಜಿ ಯಸ್. ಯಸ್. ಪಿ. +160 ಕೆಜಿ ಎಂ..ಪಿ  + 25 ಕೆಜಿ ಮೆಗ್ನೇಸಿಯಂ ಸಲ್ಪೇಟ್   ( ಪ್ರತಿ ಎಕರೆಗೆ
 • 30 ದಿನಗಳ ನಂತರ -72 ಕೆಜಿ ಯೂರಿಯಾ
 • 45 ದಿನಗಳ ನಂತರ -72 ಕೆಜಿ ಯೂರಿಯಾ

ನೀರಾವರಿ

 • ಹನಿನೀರಾವರಿ – 3 ದಿನಕ್ಕೊಮ್ಮೆ 
 • ಬೆಳೆಗೆ ಪಾತಳಿ ನೀರಾವರಿ ಪದ್ಧತಿಯಲ್ಲಿಸಾಲುಬೋದು ವಿನ್ಯಾಸದಲ್ಲಿ 5-7 ದಿನಗಳಿಗೊಮ್ಮೆ  ನೀರು ಉಣಿಸುವುದುಮಳೆಯನ್ನು ಮತ್ತು ಮಣ್ಣಿನ ಸ್ಥಿತಿಯನ್ನು ನೋಡಿಕೊಂಡು7-15  ದಿನಗಳಿಗೊಮ್ಮೊ ನೀರು ಹಾಯಿಸಬೇಕು.

ಸಸ್ಯ ಸಂರಕ್ಷಣೆ

 • ಮಣ್ಣು ಏರಿಸುವುದು –  30 ದಿನಗಳ ನಂತರ ಮತ್ತು60 ದಿನಗಳ ನಂತರ( ಕೈಯಿಂದ ಕಳೆಕೀಳುವುದರ ಜೊತೆಗೆ )

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಮೆಟ್ರಿಬ್ಯುಜಿನ್ ಅಥವಾ ಪೆಂಡಿಮೆಥಲೀನ್
ಪ್ರತಿ ಎಕರೆಗೆ 300 ಗ್ರಾಂ ಪ್ರತಿ ಎಕರೆಗೆ 200ಗ್ರಾಂ
ನಾಟಿ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್
ಪ್ರತಿ ಎಕರೆಗೆ 1 ಲೀ

ಸಸ್ಯ ಪ್ರಚೋದಕಗಳು

 • ಎಥೇಫೋನ್ 100 ಗ್ರಾಂ ಅಥವಾ ಜಿಬ್ಬೆರ್ಲಿಕ್ ಆಸಿಡ್ 200 ಮಿಲಿ 200ಲೀಟರ್ ನೀರಿಗೆ ಪ್ರತಿ ಎಕರೆಗೆ , ಗಡ್ಡೆಗಳ ಇಳುವರಿ ಹೆಚ್ಚಿಸಲು ಎಲೆಗಳ ಮೇಲೆ ಸಿಂಪಡಣೆ ಮಾಡಿ – 30 ಮತ್ತು70  ದಿನಗಳ ನಂತರ. 

ಕೀಟ ಮತ್ತು ರೋಗಗಳ ನಿರ್ವಹಣೆ

ರಸ ಹೀರುವ ಕೀಟಗಳು (ಥ್ರಿಪ್ಸ್)
ಲಕ್ಷಣಗಳು
ಎಲೆಗಳಿಂದ ರಸ ಹೀರುತ್ತವೆ.ಎಲೆಗಳು ಹಳದಿಯಾಗಿ, ಗಾತ್ರ ಸಣ್ಣದಾಗುತ್ತದೆ. ಒಳಗಿನಿಂದ ಸುರುಳಿಯಾಗಿ ಎಲೆಯ ಅಂಚು ಒಣಗುತ್ತದೆ ಕೊನೆಗೆ ತೊಟ್ಟಿನ ಸಹಿತ ಬಿದ್ದುಹೋಗುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್
200 ಮಿಲಿ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
ಆಲೂಗಡ್ಡೆಯ ದುಂಡಾಣು ಕೊಳೆರೋಗ
ಲಕ್ಷಣಗಳು
ಸೋಂಕಿತ ಭಾಗವು ಗಡ್ಡೆಯ ಒಳಗಿಂದ ಕೊಳೆಯುತ್ತಾಬರುತ್ತದೆ. ಹೊರಗಡೆ ಕಡುಕಪ್ಪು ಬಣ್ಣದಲ್ಲಿರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಸ್ಟ್ರೆಪ್ಟೊಸೈಕ್ಲಿನ್

200 ಮಿಲಿ /ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ ( ಬೇರಿಗೆ ತಲುಪುವಂತೆ ಸುರಿಯಿರಿ).
ಕೊನೆ ಅಂಗಮಾರಿ
ಲಕ್ಷಣಗಳು
ಸೋಂಕಿನಿಂದ ಎಲೆಗಳು ಕೊಳೆತು, ಒಣಗಿ ಹೋಗುತ್ತವೆ. ಕಾಂಡವು ಒಣಗಿ ಗಿಡಗಳು ಸಾಯುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕ್ಲೋರೋಥಲಾನಿಲ್
300 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಆಲೂಗಡ್ಡೆಯ ಜೀರುಂಡೆ
ಲಕ್ಷಣಗಳು
ಆಲೂಗಡ್ಡೆಯ ಜೀರುಂಡೆ ಎಲೆಗಳ ಮೇಲೆ ಸಣ್ಣ ಸಣ್ಣ ರಂಧ್ರಗಳಾಗುತ್ತವೆ, ಪ್ರೌಢ ಹುಳುವಿನ ಮೇಲೆ ಕಪ್ಪು ಚುಕ್ಕೆಗಳಿರುತ್ತವೆ ಮತ್ತು ಮರಿಹುಳುಗಳು ಕೆಂಪುಬಣ್ಣದ್ದಾಗಿದ್ದು ಆಲೂಗಡ್ಡೆಯ ಎಲೆಗಳನ್ನು ತಿನ್ನುತ್ತದೆ. ಅದರ ಹಾನಿಯಿಂದ ಇಳುವರಿ ಕುಂಠಿತವಾಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಇಮಿಡಾಕ್ಲೋಪ್ರಿಡ್
200 ಮಿಲಿ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಮೊದಲನೇ ಅಂಗಮಾರಿ
ಲಕ್ಷಣಗಳು
ಎಲೆಗಳ ಮೇಲೆ ಸಣ್ಣ, ಗಾಢ ಕಂದು ಬಣ್ಣದ ಚ್ಚುಕ್ಕೆಗಳಾಗುತ್ತವೆ ನಂತರ ಅವು ದೊಡ್ಡದಾಗಿ ಗಿಡ ಹಂತಹಂತವಾಗಿ ಸಾಯುತ್ತಾ ಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕ್ಲೋರೋಥಲಾನಿಲ್ ಅಥವಾ ಮ್ಯಾಂಕೊಜೆಬ್
200 ಗ್ರಾಂ/ಎಕರೆಗೆ & 200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಆಲೂಗಡ್ಡೆಯ ದುಂಡಾಣು ಸೊರಗು ರೋಗ
ಲಕ್ಷಣಗಳು
ಸೋಂಕಿನಿಂದ ಎಲೆಯ ತುದಿಯು ಒಣಗುತ್ತದೆ ಮತ್ತು ಹಿಮ್ಮುಖವಾಗಿ ಒಣಗುತ್ತಾ ಬರುತ್ತದೆ. ಇದರಿಂದ ಗಿಡಗಳು ಸೊರಗುತ್ತವೆ, ತೊಟ್ಟು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳು ಉದುರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್

500 ಗ್ರಾಂ/ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ ( ಬೇರಿಗೆ ತಲುಪುವಂತೆ ಸುರಿಯಿರಿ).

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 100-110 ದಿನಗಳ ನಂತರ

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
100-180 ಕ್ವಿನ್ಟಾಲ್ /ಎಕರೆಗೆ

2 thoughts on “Potato

 1. Pingback: Potato - BharatAgri

 2. Pingback: Potato - BharatAgri

Leave a Reply

Your email address will not be published. Required fields are marked *