Green Chilli

ಹಸಿರು ಮೆಣಸಿನಕಾಯಿ

ಅಂದಾಜು

ಅಂದಾಜು ಇಳುವರಿ

30 ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

70-150  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )

61,805

ಅಂದಾಜು ಆದಾಯ (ರೂ )

1,42,500

ಉತ್ತಮ ವಾತಾವರಣ

ವಾತಾವರಣ
  • ಹೂ ಮತ್ತು ಕಾಯಿ ಬಿಡುವ ಸಮಯದಲ್ಲಿ ಹೆಚ್ಚಿನ ಮಳೆ ಮತ್ತು ಮೋಡಕವಿದ ವಾತಾವರಣ ಸೂಕ್ತವಲ್ಲ.
  • ಕಾಯಿ ಬಿಡುವ ಸಮಯದಲ್ಲಿ ಹೆಚ್ಚಿನ ತೇವಾಂಶವಿದ್ದರೆ ಕಾಯಿಕೊಳೆಯುತ್ತವೆ.
  • ಬಿಸಿಲು ತೀವ್ರವಾಗಿದ್ದರೆ ಕಾಯಿ ಬಣ್ಣಬರುವುದು ತಡವಾಗುತ್ತದೆ.
ತಾಪಮಾನ
  • ತಾಪಮಾನ 10°C ಗಿಂತ ಕಡಿಮೆಯಿದ್ದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
  • ಬೆಳವಣಿಗೆಯ ಮೊದಲ ಹಂತದಲ್ಲಿ ತಾಪಮಾನ 30°C ಗಿಂತ ಜಾಸ್ತಿಯಿದ್ದರೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ.
  • ತಾಪಮಾನ 37°C, ಗಿಂತ ಜಾಸ್ತಿಯಿದ್ದರೆ ಕಾಯಿಯಬೆಳವಣಿಗೆ ಕುಂಠಿತವಾಗುತ್ತದೆ.
  • ತಾಪಮಾನ 20-25°C ಇದ್ದರೆ ಈ ಬೆಳೆಗೆ ಸೂಕ್ತ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • 800-1200 ಮಿಮಿ ಮಳೆ ಬೀಳುವ ಪ್ರದೇಶ.

  • ಹೆಚ್ಚಾಗಿ ನೀರಾವರಿ ಜಮೀನಿನಲ್ಲಿ ಬೆಳೆಯುತ್ತಾರೆ.

  • ಹೂ ಬಿಡುವ ಸಮಯ ಮತ್ತು ಕಾಯಿ ಕಟ್ಟುವ ಸಮಯ ನೀರು ಬಿಡುವುದು ಅತ್ಯಂತ ಅವಶ್ಯಕ

ಉತ್ತಮ ಮಣ್ಣು

ವಿಧ
  • ನೀರು ಬಸಿದು ಹೋಗುವಂತಹ ಫಲವತ್ತಾದ ಗೋಡು ಮಣ್ಣು ಈ ಬೆಳೆಗೆ ಉತ್ತಮ.

  • ಮರಳು ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು.

ರಸಸಾರ
  • ಉತ್ತಮ ಶ್ರೇಣಿ – 6.0 – 7.0.
  • ರಸಸಾರ ಅತಿಯಾದ ಆಸಿಡ್ ಮತ್ತು ಲವಣಯುಕ್ತ ಮಣ್ಣಿನಲ್ಲಿ ಬೆಳೆ ರೋಗಗಳಿಗೆ ಹೆಚ್ಚು ತುತ್ತಾಗುತ್ತದೆ.
  • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್).
  • ರಸಸಾರ 7.5 ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆಯ ಬೀಜಗಳು

ಸೂಪರ್ ಮಹಾ ಜ್ವಾಲಾ ( ಹೈಬ್ರಿಡ್ )
ಅವಧಿ
70-75 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚು ಇಳುವರಿ,ಹೆಚ್ಚು ದಿನ ಇಡಬಹುದು ದೂರಸಾಗಿಸಲು ಸೂಕ್ತವಾದ ತಳಿ, ರಸಹೀರುವ ಕೀಟಗಳ ಭಾದೆಯಯನ್ನು ತಡೆದುಕೊಳ್ಳುತ್ತದೆ.
ನವಲ್ (ಹೈಬ್ರಿಡ್ )
ಅವಧಿ
75 ದಿನಗಳು
ವಿಶಿಷ್ಠ ಲಕ್ಷಣ
ಹಸಿರುಮನೆಯಲ್ಲಿ ಬೆಳೆಯಲು ಸೂಕ್ತವಾದ ತಳಿ. ಒಳ್ಳೆಯ ಗುಣಮಟ್ಟದ ಕಾಯಿಯನ್ನು ನೀಡುತ್ತದೆ.

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ

ವಿಧಾನ-1

  • 1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 0.08 ಎಕರೆ (3 ಗುಂಟೆ) ಸಸಿ ಮಡಿ ಅಗತ್ಯವಿದೆ
  • 7.5 ಮೀ ಉದ್ದ X 1.2 ಮೀ ಅಗಲ X 10 ಸೆಮಿ. ಎತ್ತರದ ಆರು ಮಡಿಗಳನ್ನು ತಯಾರಿಸಿ.
  • ಸಾಲಿನಲ್ಲಿ 7.5 ಸೆಂ.ಮೀ ಅಂತರದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಮಣ್ಣಿನಿಂದ ಮುಚ್ಚಿ.
  • ಮಡಿಯಲ್ಲಿನ ಸಸಿಗಳಿಗೆ ಮೊಳಕೆಯೊಡೆಯುವವರೆಗೆ ದಿನದಲ್ಲಿ ಎರಡು ಬಾರಿ ಮತ್ತು ಮೊಳಕೆಯೊಡೆದ ನಂತರ ಒಮ್ಮೆ ನೀರು ಹಾಕಿ.
  • ನಾಟಿ ಮಾಡುವ ಹತ್ತು ದಿನಗಳ ಮೊದಲು ಮೊಳಕೆ ಬಿರುಸಾಗಲು ಸಸಿ ಮಡಿಗಳಿಗೆ ನೀರು ಹಾಕುವ  ಪ್ರಮಾಣವನ್ನು ಕಡಿಮೆ ಮಾಡಿ.
  • ಕೊಳೆ ರೋಗದಿಂದ (ಡ್ಯಾಂಪಿಂಗ್ ರೋಗ) ಸಸಿಮಡಿಯನ್ನು ಸಂರಕ್ಷಿಸಲು ಬೀಜ ಮೊಳಕೆಯೊಡೆಯುವ 3 ದಿನಗಳ ನಂತರ ರಿಡೋಮಿಲ್ @ 20 ಗ್ರಾಂ.10 ಲೀ ನೀರಿನ್ನು ಸಿಂಪಡನೆ ಮಾಡಿ.
  • ಬಿತ್ತನೆ ಮಾಡಿದ 25 ದಿನಗಳ ನಂತರ 19:19:19 @ 5 ಗ್ರಾಂ + ಥಿಯೊಮೆಥೋಕ್ಷೊಮ್@ 0.25 ಗ್ರಾಂ/ಲೀಟರ್ ನೀರನ್ನು ಸಿಂಪಡನೆ ಮಾಡಿ.

ವಿಧಾನ-2

  • ಪ್ರೊ ಟ್ರೇಗಳಲ್ಲಿ  ಪ್ರತಿ ಟ್ರೇ @ 1.2 ಕೆಜಿ ಪ್ರಮಾಣದಲ್ಲಿ ಕೊಕೊಪೀಟ್  ಹಾಕಿ. 
  • ಪ್ರೋಟ್ರೇಗಳಲ್ಲಿ ಬೀಜೋಪಚಾರ ಮಾಡಿದ ಬೀಜಗಳನ್ನು ಪ್ರತಿ ಕುಣಿಯಲ್ಲಿ @ 1 ಬೀಜದ ಪ್ರಮಾಣದಲ್ಲಿ ಬಿತ್ತನೆ ಮಾಡಿ.
  • ಬೀಜವನ್ನು ಕೊಕೊಪೀಟ್‌ನಿಂದ ಮುಚ್ಚಿ ಮತ್ತು ಟ್ರೇಗಳನ್ನು ಒಂದರ ಮೇಲೊಂದರಂತೆ ಇರಿಸಿ ಮತ್ತು ಮೊಳಕೆಯೊಡೆಯುವಿಕೆ ಪ್ರಾರಂಭವಾಗುವವರೆಗೆ ಪಾಲಿಥೀನ್ ಹಾಳೆಯಿಂದ ಮುಚ್ಚಿ (ಬಿತ್ತನೆ ಮಾಡಿದ 5 ದಿನಗಳ ನಂತರ).
  • 6 ದಿನಗಳ ನಂತರ, ಮೊಳಕೆಯೊಡೆದ ಬೀಜಗಳೊಂದಿಗೆ ಪ್ರೊ ಟ್ರೇಗಳನ್ನು ಪ್ರತ್ಯೇಕವಾಗಿ ಶೆಡ್ ನೆಟನಲ್ಲಿ ಇರಿಸಿ.
ನರ್ಸರಿ ಅವಧಿ
  • ಅವಧಿ-35 ದಿನಗಳು 
  • ಎಲೆಗಳು ಕಡು ಹಸಿರು ಮತ್ತು ಕಾಂಡ ದಪ್ಪಗಾದಾಗ ಸಸ್ಯಗಳು ನಾಟಿ ಮಾಡಲು ಸಿದ್ಧವಾಗುತ್ತವೆ
ಬೀಜದ ಪ್ರಮಾಣ
ತಳಿಗಳು
380.0 - 400.0 ಗ್ರಾಂ/ಎಕರೆಗೆ
ಹೈಬ್ರಿಡ್ಸ್
100 -120 ಗ್ರಾಂ ಬೀಜಗಳು ಒಂದು ಎಕರೆ ಜಮೀನಿಗೆ.

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

    • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

    ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

    • ಕಾರ್ಬೆಂಡೆಜಿಮ್- 2 ಗ್ರಾಂ 

    ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಮಡಿ ತಯಾರಿ- ಟ್ರಾಕ್ಟಾರ್ ಸಹಾಯದಿಂದ 75 ಸೆಂ.ಮೀ ಅಥವಾ 60 ಸೆಂ.ಮೀ ಅಂತರದಲ್ಲಿ ಬದು ಮತ್ತು ನೇಗಿಲ ಸಾಲುಗಳನ್ನು ನಿರ್ಮಿಸಿ. 

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
0.75 ಮೀಟರ್
ಗಿಡಗಳ ನಡುವಿನ ಅಂತರ
0.6 ಮೀಟರ್
ಗಿಡಗಳ ಸಂಖ್ಯೆ
9000 /ಎಕರೆಗೆ
ಹೈಬ್ರಿಡ್
ಸಾಲುಗಳ ಅಂತರ
0.6 ಮೀಟರ್
ಗಿಡಗಳ ನಡುವಿನ ಅಂತರ
0.6 ಮೀಟರ್
ಗಿಡಗಳ ಸಂಖ್ಯೆ
11,000 /ಎಕರೆಗೆ

ಬೇರು ಉಪಚಾರ

  • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
  • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
  • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
  • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

  • ಸಸಿಗಳನ್ನು ಬದುಗಳ ಮೇಲೆ 60 ಸೆಂ.ಮೀ ಅಂತರದಲ್ಲಿ  ಕಸಿ ಮಾಡಿ.

ಪೋಷಕಾಂಶಗಳ ನಿರ್ವಹಣೆ

  • 40:20:20 ಕೆಜಿ ಎನ್.ಪಿ.ಕೆ ಪ್ರತಿ ಎಕರೆಗೆ (40:20:20 ಕೆಜಿ ಸಾರಜನಕ ರಂಜಕ ಮತ್ತು ಪೊಟ್ಯಾಶ್ ಪ್ರತಿ ಎಕರೆಗೆ)
  • ಬಿತ್ತನೆ ಸಮಯದಲ್ಲಿ ( ಪ್ರತಿ ಎಕರೆಗೆ )
     ಯೂರಿಯಾ – 29 ಕೆಜಿ
     ಯಸ್.ಯಸ್.ಪಿ – 122 ಕೆಜಿ
     ಎಂ.ಓ.ಪಿ – 34 ಕೆಜಿ
  • 30 ದಿನಗಳ ನಂತರ – 22 ಕೆಜಿ ಯೂರಿಯಾ
  • 45 ದಿನಗಳ ನಂತರ – 22 ಕೆಜಿ ಯೂರಿಯಾ

ನೀರಾವರಿ

  • ಹನಿ ನೀರಾವರಿ- ಪರ್ಯಾಯ ದಿನಗಳಲ್ಲಿ
  • ಕಾಲುವೆ ನೀರಾವರಿ- ವಾರಕ್ಕೊಮ್ಮೆ (ಮಳೆಯಧಾರಿತ ಪ್ರಕಾರ)
  • ಬೇಸಿಗೆ ಹಂಗಾಮು- 5-6 ದಿನಗಳ ಮಧ್ಯಂತರದಲ್ಲಿ
  • ಪ್ರತಿ ಬಾರಿ ಮೆಣಸಿನಕಾಯಿ ಕಟಾವಿನ ನಂತರ ಒಂದು ಸಲ ನೀರು ಹಾಯಿಸಬೇಕು. 

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 400ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್
ಪ್ರತಿ ಎಕರೆಗೆ 100 ಗ್ರಾಂ

ಸಸ್ಯ ಪ್ರಚೋದಕಗಳು

  • ಹೂ ಬಿಡುವುದನ್ನು ಹೆಚ್ಚಿಸಲು ಟ್ರೈಕೊಂತನೊಲ್ – 1.25 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸ್ಥಳಾಂತರಿಸಿದ 20, 40, 60 ದಿನಗಳ ನಂತರ ಸಿಂಪಡಣೆ ಮಾಡಿ.  
  • ಹೂ ಉದುರುವುದನ್ನು ನಿಯಂತ್ರಿಸಲು ಮತ್ತು ಕಾಯಿ ಕಟ್ಟಲು 2 ಮಿಲಿ – ಎನ್.ಎ.ಎ. (ಪ್ಲಾನೋಫಿಕ್ಸ್) ಪ್ರತಿ ಲೀಟರ್  ನೀರಿಗೆ ಹಾಕಿ ಸ್ಥಳಾಂತರಿಸಿದ 60 &  90 ದಿನಗಳ ನಂತರ ಸಿಂಪಡಣೆ ಮಾಡಿ.

ಕೀಟ ಮತ್ತು ರೋಗಗಳ ನಿರ್ವಹಣೆ

thrips and aphids in chilli
ರಸ ಹೀರುವ ಕೀಟಗಳು ( ಥ್ರಿಪ್ಸ್ )
ಲಕ್ಷಣಗಳು
ಎಲೆಗಳಿಂದ ರಸ ಹೀರುತ್ತವೆ. ಎಲೆಗಳು ಮೇಲ್ಭಾಗಕ್ಕೆ ಮುದುಡಿ ಕೊಂಡಿರುತ್ತವೆ, ಎಲೆಗಳ ಗಾತ್ರ ಚಿಕ್ಕದಾಗಿರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
1) 10 ನೀಲಿ ಮತ್ತು ಹಳದಿ ಅಂಟುಬಲೆಗಳನ್ನು ಸ್ಥಳಾಂತರಿಸಿದ 5 ದಿನಗಳ ನಂತರ ಅಲ್ಲಲ್ಲಿ ನೇತುಹಾಕಬೇಕು 2) ಥೈಮೆಥಾಕ್ಸಾಂ 0.5 ಗ್ರಾಂಪ್ರತಿ ಲೀ. ನೀರಿಗೆ ಸೇರಿಸಿ ಸಿಂಪಡಿಸುವುದು.ಸ್ಥಳಾಂತರಿಸಿದ 15 ದಿನಗಳ ನಂತರ. 3)ಸ್ಥಳಾಂತರಿಸಿದ 45 ದಿನಗಳ ನಂತರ ಅಸೆಟಮಾಪ್ರಿಡ್ 1ಮಿಲಿ ಒಂದು ಲೀಟರ್ ನೀರಿನಲ್ಲಿ ಕಲೆಸಿ ಸಿಂಪಡಿಸಿ 4)ಸ್ಥಳಾಂತರಿಸಿದ 60 ದಿನಗಳ ನಂತರ ಮತ್ತೆ ತೈಯಮೆಥೋಕ್ಸಾಂ 0.5 ಗ್ರಾಂ ಒಂದು ಲೀಟರ್ ನೀರಿಗೆ ಕಲೆಸಿ ಸಿಂಪಡಿಸಿ. ಹದಿನೈದು ದಿನಗಳ ನಂತರ ಮತ್ತೆ ಸಿಂಪಡಿಸಿ
100 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
Damping off disease in chilli plant
ಸಸಿಕೊಳೆ ರೋಗ
ಲಕ್ಷಣಗಳು
ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದ್ದು, ತೆಳ್ಳಗಾಗುತ್ತವೆ . ಸಸಿಮಡಿಗಳಲ್ಲಿ ಕ್ರಮೇಣ ಗಿಡಗಳು ಬಾಡಿ, ಕುಸಿದು ನೆಲಕ್ಕೆ ಬೀಳುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಗಿಡದ ಬುಡಕ್ಕೆ ಮೆಟಲಾಕ್ಸಿಲ್ +ಮಂಕೋಝೇಬ್ ಸ್ಥಳಾಂತರಿಸಿದ 15 ದಿನಗಳ ನಂತರ ಹಾಕಬೇಕು

250 ಗ್ರಾಂ /ಎಕರೆಗೆ

ಉಪಯೋಗಿಸುವ ವಿಧಾನ
ಗಿಡದ ಬುಡಕ್ಕೆ ಲೀಟರ್ ನೀರಿಗೆ ಬೆರೆಸಿ ಹಾಕಬೇಕು( ಡ್ರೇನ್ಚಿಂಗ್ ಮಾಡಿ)
ಬೂದಿ ರೋಗ
ಲಕ್ಷಣಗಳು
ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆಗಳನ್ನು ಕಾಣಬಹುದು.ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಬ್ಯಾಕ್ಟೇರಿಯ ಎಲೆ ಚ್ಚುಕ್ಕೆ ರೋಗ
ಲಕ್ಷಣಗಳು
ಎಲೆಗಳಲ್ಲಿ ವೃತ್ತಾಕಾರದ ಅಥವಾ ಆಕಾರವಿಲ್ಲದ ಗಾಢ ಕಂದು ಅಥವಾ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.ನಂತರ ಒಂದಕ್ಕೊಂದು ಸೇರಿಕೊಂಡು ಅವು ಒಣಗುತ್ತವೆ.ಕಾಯಿಯ ಮೇಲೆ ನೀರು ತುಂಬಿದಂತಹ ಸುತ್ತ ಹಳದಿ ಬಣ್ಣವಿರುವ ಚ್ಚುಕ್ಕೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
fusarium wilt disease in chilli farming
ಫುಸ್ಸರಿಯಂ ಸೊರಗುರೋಗ ( ಥ್ರಿಪ್ಸ್ )
ಲಕ್ಷಣಗಳು
ಮೊದಲು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ನಂತರ ಮೇಲಿನಿಂದ ಕೇಳೆಕ್ಕೆ ಒಣಗುತ್ತಾ ಬರುತ್ತವೆ. ಎಲೆಗಳು ಮೇಲ್ಮುಖವಾಗಿ ಒಳಕ್ಕೆ ಸುರುಳಿಯಾಗುತ್ತವೆ. ಎಲೆಗಳು ಹಳದಿಬಣ್ಣಕ್ಕೆ ತಿರುಗಿ ಗಿಡ ಸಾಯುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ಮೆಟಲಾಕ್ಸಿಲ್ +ಮಂಕೋಝೇಬ್ 64% WP
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು( ಡ್ರೇನ್ಚಿಂಗ್ ಮಾಡಿ)
ಕಾಯಿಕೊರಕ ಹುಳು
ಲಕ್ಷಣಗಳು
1) ಮರಿ ಹುಳುಗಳು ತೊಟ್ಟಿನ ಕೆಳಭಾಗದಲ್ಲಿ ಕೊರೆಯುವುದರಿಂದ ಕಾಯಿಗಳು. ಬಿಚ್ಚಿಕೊಳ್ಳುವುದು ಹಾಗೂ ಕಾಯಿಯ ಮೇಲೆ ರಂಧ್ರಗಳು ಕಂಡು ಬರುತ್ತವೆ. 2)ಕಾಯಿಯನ್ನು ಕೊರೆಯುವಾಗ ಹುಳುವು ತಲೆಯನ್ನು ಮಾತ್ರ ಒಳಗೆ ತೂರಿಸಿ ಒಳಗಿನ ತಿರುಳನ್ನು ತಿನ್ನುತ್ತದೆ 3)ಕಾಯಿಯ ಮೇಲೆ ದುಂಡಾಕಾರದ ರಂಧ್ರಗಳು ಕಂಡುಬರುತ್ತವೆ 4)ಹುಳುವು ಎಲೆ, ಕಾಂಡ ಮತ್ತು ಮೊಗ್ಗನ್ನು ತಿನ್ನುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
1) ಎಕರೆಗೆ 2 ರಂತೆ ಲಿಂಗಾಕರ್ಷಕ ಬಲೆಗಳನ್ನು ಅಳವಡಿಸಿ 2) ಡೈಮಿಥೋಯೇಟ್ 1ಮಿಲಿ /ಒಂದು ಲೀಟರ್ ನೀರಿನಲ್ಲಿ ಕಲೆಸಿ ಸ್ಥಳಾಂತರಿಸಿದ 35 ದಿನಗಳ ನಂತರ ಸಿಂಪಡಿಸಿ 3) ಇಮಾಮೆಕ್ಟಿನ್ ಬೆಂಜೋಯೇಟ್ 1ಮಿಲಿ/ಒಂದು ಲೀಟರ್ ನೀರಿಗೆ ಕಲೆಸಿ ಸ್ಥಳಾಂತರಿಸಿದ 55 ದಿನಗಳ ನಂತರ ಸಿಂಪಡಿಸಿ

100 ಮಿಲಿ.ಲಿ / ಪ್ರತಿ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಅಂತ್ರಾಕ್ನೋಸ್ (ಕಾಯಿ ಕೊಳೆಯುವ ರೋಗ )
ಲಕ್ಷಣಗಳು
ಕಾಯಿಯ ಮೇಲೆ ಕಂದು -ಕಪ್ಪು ಬಣ್ಣದ ಕಲೆಗಳಾಗುತ್ತವೆ. ಕಾಯಿ ಒಣಗುವುದು ಮತ್ತು ಕೊಳೆತುಹೋಗುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
70 - 150 ದಿನಗಳು
ಕಟಾವಿನ ಬಾರಿ
8 ರಿಂದ 10
ಕೊಯ್ಲಿನ ಮಧ್ಯಂತರ
10 ದಿನಗಳು

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಪ್ರಮಾಣ
5 - 10 ಕ್ವಿಂಟಾಲ್/ಎಕರೆಗೆ
ಕೊಯ್ಲು ಮಾಡಿದ ಒಟ್ಟು ಇಳುವರಿ
30 - 40 ಕ್ವಿಂಟಾಲ್ /ಎಕರೆಗೆ

Leave a Reply

Your email address will not be published. Required fields are marked *