Cotton

Complete information on Cotton farming

ಹತ್ತಿ

ಅಂದಾಜು

ಅಂದಾಜು ಇಳುವರಿ

10-12  ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

130-180  ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )

40,558 

ಅಂದಾಜು ಆದಾಯ (ರೂ )

86,330

ಉತ್ತಮ ವಾತಾವರಣ

ವಾತಾವರಣ
  • ಹತ್ತಿಯನ್ನು ವರ್ಷದ 180-200 ದಿನಗಳು  ಹಿಮವಿಲ್ಲದ ಯಾವ ಪ್ರದೇಶದಲ್ಲಿಯಾದರೂ ಬೆಳೆಯಬಹುದು 
  • ಹೆಚ್ಚಿನ ತಂಪಾದ ವಾತಾವರಣವಿದ್ದರೆ ಹತ್ತಿಯು ಕೊಳೆಯುತ್ತದೆ 
  • ಮತ್ತು ಬೆಳಕು ತೀವ್ರವಾಗಿದ್ದರೂ ಹತ್ತಿ ಬಣ್ಣ ಕಳೆದುಕೊಳ್ಳುತ್ತದೆ. 
ತಾಪಮಾನ
  • ಮೊಳಕೆಯೊಡೆಯಲು 20-30°C ತಾಪಮಾನ ಉತ್ತಮವಾದದ್ದು. 18°Cಗಿಂತ ಕಡಿಮೆ ತಾಪಮಾನವಿದ್ದರೆ  ಮೊಳಕೆಯೊಡೆಯುವುದು ತಡವಾಗುತ್ತದೆ 
  • ಉತ್ತಮವಾದ ನೀರಾವರಿಯಿದ್ದರೆ , ಹತ್ತಿಯು 43-45°C ವರೆಗಿನ ತಾಪಮಾನವನ್ನು ಕೆಲವುದಿನಗಳವರೆಗೂ ತಡೆದುಕೊಳ್ಳುತ್ತದೆ. 
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • 650-750 ಮಿಮಿ ಮಳೆ ಬೀಳುವ ಪ್ರದೇಶ 
  • ಸಾಮಾನ್ಯವಾಗಿ ಇದು ಮುಂಗಾರಿಗೆ ಬೆಳೆಯುವ ಬೆಳೆಯಾಗಿದೆ, ಆದರೆ ಬೆಳವಣಿಗೆಯ ಹಂತದಲ್ಲಿ ಮಧ್ಯಮ ಪ್ರಮಾಣದ ಮಳೆಯು ಉತ್ತಮವಾದದ್ದು .
  • ಮುಂದಿನ ಹಂತಗಳಲ್ಲಿ ಮಳೆಯಾದರೆ ಹತ್ತಿಯ ಗುಣಮಟ್ಟ ಕಡಿಮೆಯಾಗುತ್ತದೆ 

ಉತ್ತಮ ಮಣ್ಣು

ವಿಧ
  • ಕಪ್ಪು ಫಲವತ್ತಾದ ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಮಣ್ಣು ಉತ್ತಮ ಬೆಳೆಯು ನೀರು ತುಂಬಾ ಹೆಚ್ಚಾದರೆ ಮತ್ತು  ಜಮೀನಿನಲ್ಲಿ ನೀರು ನಿಂತಿದ್ದರೆ ಬೆಳೆಗೆ ಒಳ್ಳೆಯದಲ್ಲ
ರಸಸಾರ
  • . ಉತ್ತಮ ಶ್ರೇಣಿ – 7.0 – 8.5
  • ರಸಸಾರ 6.0  ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
  • ರಸಸಾರ 8.0  ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆಯ ಬೀಜಗಳು

ಬೀಜದ ಪ್ರಮಾಣ
ತಳಿಗಳು
4 ಕೆಜಿ ಒಂದು ಎಕರೆಗೆ
ಹೈಬ್ರಿಡ್
800 ಗ್ರಾಂ ಒಂದು ಎಕರೆಗೆ

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

    • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

    ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

    • ಕಾರ್ಬೆಂಡೆಜಿಮ್- 2 ಗ್ರಾಂ 

    ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಸಾಲು – ಬದು ತಯಾರಿ –  90 ಸೆಂ.ಮೀ ಅಂತರದ ಸಾಲು ಬದುಗಳನ್ನು ಟ್ರಾಕ್ಟಾರ್ ಸಹಾಯದಿಂದ ನಿರ್ಮಿಸಿ.  

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
0.9 ಮೀಟರ್
ಗಿಡಗಳ ನಡುವಿನ ಅಂತರ
0.6 ಮೀಟರ್
ಗಿಡಗಳ ಸಂಖ್ಯೆ
7400
ಹೈಬ್ರಿಡ್
ಸಾಲುಗಳ ಅಂತರ
0.9 ಮೀಟರ್
ಗಿಡಗಳ ನಡುವಿನ ಅಂತರ
0.9 ಮೀಟರ್
ಗಿಡಗಳ ಸಂಖ್ಯೆ
4,938

ಬಿತ್ತನೆ

  • ಬಿತ್ತನೆ ಸಮಯ : ಏಪ್ರಿಲ್ ಇಂದ ಮೇ ಎರಡನೇ ವಾರದವರೆಗೆ 
  • ಬೋದುಗಳ ಮೇಲೆ ಪ್ರತಿ ಗುಣಿಗೆ 2 ಬೀಜದಂತೆ, 2-3 ಇಂಚು ಆಳದಲ್ಲಿ ಬಿತ್ತನೆ ಮಾಡಿ ಮಣ್ಣಿನಿಂದ ಮುಚ್ಚಿ. 

ಪೋಷಕಾಂಶಗಳ ನಿರ್ವಹಣೆ

  • ತಳಿಗಳಿಗೆ20:10:10 ಕೆಜಿ ಯೆನ್.ಪಿ.ಕೆಪ್ರತಿ ಎಕರೆಗೆ 
  • ಹೈಬ್ರಿಡ್ಸ್ –  32:16:16 ಕೆಜಿ  ಯೆನ್.ಪಿ.ಕೆ  ಪ್ರತಿ ಎಕರೆಗೆ 

  (ಹತ್ತಿ ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಿರುತ್ತದೆ ಆದ್ದರಿಂದ ಹೆಚ್ಚಿಗೆ ಬೀಜಗಳನ್ನು ಹಾಕಬೇಕು )

  

       ತಳಿಗಳಿಗೆ ( ಪ್ರತಿ ಎಕರೆಗೆ )- 20:10:10 ಕೆಜಿ ಯೆನ್.ಪಿ.ಕೆಪ್ರತಿ ಎಕರೆಗೆ

  1. ಬಿತ್ತನೆ ಸಮಯದಲ್ಲಿ – 22 ಕೆಜಿ ಯೂರಿಯಾ + 62 ಕೆಜಿ ಯಸ್.ಯಸ್.ಪಿ + 17 ಕೆಜಿ ಎಂ..ಪಿ 
  2. ಬಿತ್ತನೆ ಮಾಡಿದ 30 ದಿನಗಳ ನಂತರ – 11 ಕೆಜಿ ಯೂರಿಯಾ 
  3. ಬಿತ್ತನೆ ಮಾಡಿದ 45 ದಿನಗಳ ನಂತರ – 11 ಕೆಜಿ ಯೂರಿಯಾ 

       ಹೈಬ್ರಿಡ್ಸ್ ( ಪ್ರತಿ ಎಕರೆಗೆ )

  1. ಬಿತ್ತನೆ ಸಮಯದಲ್ಲಿ – 35 ಕೆಜಿ ಯೂರಿಯಾ +99  ಕೆಜಿ ಯಸ್.ಯಸ್.ಪಿ + 27 ಕೆಜಿ ಎಂ..ಪಿ 
  2. ಬಿತ್ತನೆ ಮಾಡಿದ 30 ದಿನಗಳ ನಂತರ – 17 ಕೆಜಿ ಯೂರಿಯಾ 
  3. ಬಿತ್ತನೆ ಮಾಡಿದ 45 ದಿನಗಳ ನಂತರ – 17 ಕೆಜಿ ಯೂರಿಯಾ

ನೀರಾವರಿ

  • ಪಾತಳಿ / ಸಾಲಿನಲ್ಲಿ ನೀರುಹಾಯಿಸಿ – 10 ರಿಂದ 12 ದಿನಗಳಿಗೊಮ್ಮೆ ( ಮಳೆಯನ್ನೂ ಆಧರಿಸಿ )
  • ಹೂ ಬಿಡುವ ಹಂತ, ಕಾಯಿ ಬಿಡುವ ಹಂತ ಮತ್ತು ಕಾಯಿ ಬಲಿಯುವ ಹಂತದಲ್ಲಿ ನೀರು ಹಾಯಿಸುವುದು ಅತ್ಯಂತ ಅವಶ್ಯಕ  ( ಮಳೆಯನ್ನೂ ಆಧರಿಸಿ ).

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 400ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಅಕ್ಸಿಫ್ಲೋರೋಫಿನ್ ಅಥವಾ ಕ್ವಿನಾಲ್ಫೋಸ್ ಈಥೈಲ್
200 ಮಿಲಿ / ಎಕರೆಗೆ 400 ಮಿಲಿ /ಎಕರೆಗೆ
ಸಸ್ಯ ಸಂಖ್ಯೆಯನ್ನು ಕಾಪಾಡಿಕೊಳ್ಳಲು
ವಿಧಾನ
ಬೀಜಗಳು ಮೊಳಕೆಯೊಡೆಯದ ಜಾಗದಲ್ಲಿಬೀಜವನ್ನು ಅಥವಾ ಸಸಿಗಳನ್ನು ಹಾಕುವುದು ಸಸಿಗಳನ್ನು15 x 10 ಸೆಂ.ಮೀ ಗಾತ್ರದ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿ 10 ದಿವಸಗಳಾದ ಮೇಲೆ ಹೊಲದ ಗುಣಿಗಳಲ್ಲಿ ಖಾಲಿ ಜಾಗ ಭರ್ತಿ ಮಾಡಿಕೊಳ್ಳಬಹುದು. ಪಾಲಿಥಿನ್ ಚೀಲಕ್ಕೆ ಗೊಬ್ಬರ ಮತ್ತು ಮಣ್ಣನ್ನು - 1:3 ರ ಪ್ರಮಾಣದಲ್ಲಿ ತುಂಬಬೇಕು ಒಂದು ಚೀಲಕ್ಕೆ ಒಂದು ಬೀಜ ಮಾತ್ರ ಹಾಕಬೇಕು . ಪಾಲಿಥಿನ್ ಚೀಲಗಳ ತಳವನ್ನು ಹರಿದು ಮಣ್ಣಿನ ಸಮೇತ ನಾಟಿ ಮಾಡಬೇಕು. ಬಿತ್ತನೆ ಮಾಡಿದ 30 ದಿನಗಳ ನಂತರ, ಗುಣಿಯಲ್ಲಿ ಒಂದಕ್ಕಿಂತ ಹೆಚ್ಚು ಸಸಿಗಳಿದ್ದರೆ ಅವುಗಳಲ್ಲಿ ಆರೋಗ್ಯವಾಗಿರುವ ಗಿಡವನ್ನು ಒಂದು ಗಿಡವನ್ನು ಬಿಟ್ಟು ಬೇರೆಯದ್ದನ್ನು ಕಿತ್ತುಹಾಕಬೇಕು
ಕುಡಿ ಚಿವುಟುವುದು
ಬಿತ್ತನೆ ಮಾಡಿದ 90 ದಿನಗಳ ನಂತರ, ಮುಖ್ಯ ಕಾಂಡದ ಕುಡಿಯನ್ನು ಚಿವುಟುವುದರಿಂದ ಸಸ್ಯದ ಬೆಳವಣಿಗೆ ನಿಂತು ಕಾಯಿ ಬಿಡಲು ಪ್ರಾರಂಭಿಸುತ್ತದೆ.

ಸಸ್ಯ ಪ್ರಚೋದಕಗಳು

  • ಹೂ ಮತ್ತು ಕಾಯಿ ಉದುರುವುದನ್ನು ನಿಯಂತ್ರಿಸಲು 40 ಮಿಲಿಎನ್... (ಪ್ಲಾನೋಫಿಕ್ಸ್) 200 ಲೀಟರ್ ನೀರಿಗೆ ಹಾಕಿ ಹೂ ಬಿಡುವ ಹಂತದಲ್ಲಿ ಸಿಂಪಡಣೆ ಮಾಡಿ.
  • ಮತ್ತು ಮೊದಲನೇ ಸಿಂಪಡಣೆ ಮಾಡಿದ 15-20 ದಿನಗಳ ನಂತರ ಎರಡನೇ ಬಾರಿ ಸಿಂಪಡಣೆಯನ್ನು ಮಾಡಿ. 

ಕೀಟ ಮತ್ತು ರೋಗಗಳ ನಿರ್ವಹಣೆ

verticillium wilt in cotton
ರಸ ಹೀರುವ ಕೀಟಗಳು (ಥ್ರಿಪ್ಸ್)
ಲಕ್ಷಣಗಳು
ಎಲೆಯ ನರಗಳ ಮಧ್ಯ ಹಳದಿಯಾಗಿ ಸುಟ್ಟಂತಾಗುತ್ತವೆ, ಮೊದಲು ಎಲೆಯ ಅಂಚಿನಲ್ಲಿ ಒಣಗುತ್ತದೆ ನಂತರ ಬಳ್ಳಿ / ಗಿಡ ಪೂರ್ತಿ ಬಾಡಿಹೋಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೇಜಿಮ್ ಅಥವಾ ಕಾಪರ್ ಆಕ್ಸಿ ಕ್ಲೋರೈಡ್
250 ಗ್ರಾಂ/ ಎಕರೆಗೆ ಅಥವಾ 250 ಗ್ರಾಂ/ ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ ( ಬೇರಿಗೆ ತಲುಪುವಂತೆ ಸುರಿಯಿರಿ )
ಜಿಗಿಹುಳು, ಥ್ರಿಪ್ಸ್ ನುಸಿ, ಸಸ್ಯ ಹೇನು ಮತ್ತು ಬಿಳಿ ನೊಣ
ಲಕ್ಷಣಗಳು
ಎಲೆಗಳ ಮೇಲೆ ಬಿಳಿ ರಂಗೋಲಿಯಂತೆ ಎಳೆಗಳು ಕಂಡುಬರುತ್ತವೆ. ಎಲೆಗಳು ಹಿಮ್ಮುಖವಾಗಿ ಅಂಚಿನಿಂದ ಹಳದಿಯಾಗುತ್ತವೆ ಮತ್ತು ಸುರುಳಿಯಾಗಿ ಸುಕ್ಕಾಗುತ್ತವೆ. ಕಪ್ಪು ಮಸಿಯಂತೆ ಶಿಲಿಂದ್ರ ಬೆಳೆಯುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್ ಅಥವಾ ಥೈಯೋಮೆಥೋಕ್ಸಾಂ

200 ಮಿಲಿ / ಎಕರೆಗೆ  ಅಥವಾ 100 ಗ್ರಾಂ /ಎಕರೆಗೆ

ಉಪಯೋಗಿಸುವ ವಿಧಾನ
ಗಿಡದ ಬುಡಕ್ಕೆ ಹಾಕಬೇಕು( ಡ್ರೇನ್ಚಿಂಗ್ ಮಾಡಿ)
cotton crop diseases - Spodoptera
ಗಿಡ ಕತ್ತರಿಸುವ ಹುಳು
ಲಕ್ಷಣಗಳು
ಮರಿಹುಳುಗಳು ಸಣ್ಣ ರಂಧ್ರಗಳನ್ನು ಮಾಡಿ ಎಲೆಗಳನ್ನು ತಿನ್ನುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಕ್ಲೋರಂತ್ರನಿಲಿಪ್ರೋಲ್
200 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Pink bollworm
ನಸುಗೆಂಪು ಕಾಯಿ ಕೊರಕ
ಲಕ್ಷಣಗಳು
ಮರಿ ಹುಳುಗಳು ಹೂವಿನ ಭಾಗಗಳನ್ನು ತಿನ್ನುತ್ತವೆ. ಹತ್ತಿ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ ಸರಿಯಾಗಿ ಅರಳುವುದಿಲ್ಲ.
ಬೇಕಾಗುವ ಔಷಧಗಳು ಪ್ರಮಾಣ
ಲಿಂಗಾಕರ್ಷಕ ಬಲೆ.
5 /ಎಕರೆಗೆ
ಉಪಯೋಗಿಸುವ ವಿಧಾನ
ಜಮೀನಿಗೆ ಅಳವಡಿಸಿ
Spotted Bollworm
ಚ್ಚುಕ್ಕೆ ಹೊಂದಿರುವ ಕಾಯಿ ಕೊರಕ ( ಏರಿಯಾಸ ವಿಟ್ಟೆಲ್ಲ )
ಲಕ್ಷಣಗಳು
ಬೆಳೆಯ ಮೊದಲ ಹಂತದಲ್ಲಿ, ಸೋಂಕಿತ ಕೊಂಬೆಗಳು ಸೊರಗಿ ಒಣಗಿ ಬಿದ್ದುಹೋಗುತ್ತವೆ. ಸೋಂಕಿತ ಹತ್ತಿ ಕಾಯಿಗಳು ಬಲಿಯುವ ಮುನ್ನವೇ ಅರಳುತ್ತವೆ ಇದರಿಂದ ಹತ್ತಿಯ ಗುಣಮಟ್ಟ ಕಡಿಮೆಯಾಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಟ್ರೈಕೋಕಾರ್ಡ್ ( ಟ್ರೈಕೋಗ್ರಾಮ ಪರತಂತ್ರ ಜೀವಿಯ ಕಾರ್ಡ್ )
5 /ಎಕರೆಗೆ
ಉಪಯೋಗಿಸುವ ವಿಧಾನ
ಜಮೀನಿಗೆ ಅಳವಡಿಸಿ
Pink bollworm
ಸಂಕೀರ್ಣ ಕಾಯಿ ಕೊರಕ
ಲಕ್ಷಣಗಳು
ಬೆಳೆಯ ಮೊದಲ ಹಂತದಲ್ಲಿ, ಸೋಂಕಿತ ಕೊಂಬೆಗಳು ಸೊರಗಿ ಒಣಗಿ ಬಿದ್ದುಹೋಗುತ್ತವೆ. ಸೋಂಕಿತ ಹತ್ತಿ ಕಾಯಿಗಳು ಬಲಿಯುವ ಮುನ್ನವೇ ಅರಳುತ್ತವೆ ಇದರಿಂದ ಹತ್ತಿಯ ಗುಣಮಟ್ಟ ಕಡಿಮೆಯಾಗುತ್ತದೆ. ಎಲೆಯನ್ನು ಕೆರೆಯುತ್ತದೆ ಇದರಿಂದ ಎಲೆ ಅಸ್ತಿಪಂಜರದಂತೆ ಕಾಣುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಬ್ಯಾಸ್ಸಿಲ್ಲಸ್ ಥುರೆಂಜೆನ್ಸಿಸ್ (ಸೂಕ್ಶ್ಮಾಣು ಜೀವಿ ) ಅಥವಾ ಪ್ಲೇಥೋರ ( ಅಗಾಧ )- ಇಂಡಕ್ಸೋಕಾರ್ಬ್ + ನೋವಾಲ್ಯೂರೋನ್

450 ಗ್ರಾಂ/ ಎಕರೆಗೆ ಅಥವಾ 100 ಮಿಲಿ / ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Red cotton bug in cotton crop
ಹತ್ತಿಯ ಕೆಂಪು ತಿಗಣೆ
ಲಕ್ಷಣಗಳು
ಮರಿ ಹುಳು ಮತ್ತು ಪ್ರೌಢ ಹುಳುಗಳು ರಸವನ್ನು ಕಾಯಿ ಮತ್ತು ಎಲೆಗಳಿಂದ ಹೀರುತ್ತವೆ. ಹತ್ತಿ ಕಾಯಿಗಳು ಸರಿಯಾಗಿ ಅರಳುವುದಿಲ್ಲ, ಹಿಕ್ಕೆ ಮತ್ತು ಮಲದಿಂದ ಕಾಯಿ ಕೊಳೆಯುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಅಸಿಫೇಟ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Boll rot of cotton
ಹತ್ತಿ ಕಾಯಿ ಕೊಳೆಯುವಿಕೆ
ಲಕ್ಷಣಗಳು
ಕಪ್ಪು /ಕಂದು ಚ್ಚುಕ್ಕೆಗಳು ಹತ್ತಿ ಕಾಯಿಯ ತುಂಬಾ ಕಂಡುಬರುತ್ತವೆ. ಹತ್ತಿ ಕಾಯಿ ಅರಳುವುದಿಲ್ಲ ಅಥವಾ ಬಲಿಯುವುದಕ್ಕೆ ಮೊದಲೇ ಬಿದ್ದು ಹೋಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೇಜಿಮ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
American bollworm in cotton farming
ಅಮೇರಿಕನ್ ಕಾಯಿಕೊರಕ (ಹೆಲಿಕೋವೇರ್ಪ ಅರ್ಮಿಜೆರಾ )
ಲಕ್ಷಣಗಳು
ಹತ್ತಿ ಕಾಯಿಗಳು ದುಂಡಗೆ ಕೊರೆಯುತ್ತದೆ ಮತ್ತು ಹುಳು ಹತ್ತಿ ಕಾಯಿಯ ಒಳಗೆ ತಲೆಯನ್ನು ಒಳಗೆ ತೂರಿಸಿ ತಿರುಳನ್ನು ತಿನ್ನುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ಎಚ್.ಎನ್.ಪಿ.ವಿ
600 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 130 ರಿಂದ 180 ದಿನಗಳ ನಂತರ.
ಕಟಾವಿನ ಬಾರಿ
4 ಬಾರಿ
ಕೊಯ್ಲಿನ ಮಧ್ಯಂತರ
15 ದಿನಗಳು

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಪ್ರಮಾಣ
3 ಕ್ವಿನ್ಟಾಲ್/ ಎಕರೆಗೆ
ಕೊಯ್ಲು ಮಾಡಿದ ಒಟ್ಟು ಇಳುವರಿ
10 - 12 ಕ್ವಿನ್ಟಾಲ್ /ಎಕರೆಗೆ

Leave a Reply

Your email address will not be published. Required fields are marked *