Coriander

ಕೊತ್ತಂಬರಿ

ಅಂದಾಜು

ಅಂದಾಜು ಇಳುವರಿ

6000 ಕಟ್ಟುಗಳು / ಎಕರೆಗೆ 

ಅಂದಾಜು ಅವಧಿ

ಬಿತ್ತನೆ ಮಾಡಿದ 35-40 ದಿನಗಳ ನಂತರ

ಅಂದಾಜು ಖರ್ಚು (ರೂ)
12,384
ಅಂದಾಜು ಆದಾಯ (ರೂ)

30,000

ಉತ್ತಮ ವಾತಾವರಣ

ವಾತಾವರಣ
 • ತಂಪಾದ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.
 • ಇದು ಹಿಮವನ್ನು ಸಹಿಸುವುದಿಲ್ಲ.
ತಾಪಮಾನ
 • ಕೊತ್ತಂಬರ 20-30°C ತಾಪಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ.
 • ಹೆಚ್ಚಿನ ತಾಪಮಾನವು ಮೊಳಕೆಯೊಡೆಯುವಿಕೆಯನ್ನು ಮತ್ತು ಸಸ್ಯದ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ ಸರಾಸರಿ 75 – 100 ಮಿಲಿ.ಮೀ ಮಳೆಬೇಕು.
 • ಮೊಳಕೆಯೊಡೆದ ನಂತರ ಹೊಲದಲ್ಲಿ ನೀರು ನಿಂತಿರಬಾರದು.

ಮಣ್ಣು

ವಿಧ
 • ನೀರಾವರಿ ವ್ಯವಸ್ಥೆ ಇದ್ದಲ್ಲಿ ಇದನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಉತ್ತಮ ಪ್ರಮಾಣದ ಸಾವಯವ ಗೊಬ್ಬರಗಳೊಂದಿಗೆ ಬೆಳೆಸಬಹುದು.
 • ಜೇಡಿ ಮಣ್ಣು ನೀರು ಬಸಿದುಹೋಗುವಂತಹ ಜಮೀನಿನಲ್ಲಿ ಚೆನ್ನಾಗಿ ಬೆಳೆಯುತ್ತದೆ
 • ಕ್ಷಾರೀಯ, ಮರಳು ಮಿಶ್ರಿತ ಮತ್ತು ಹಗುರ ಮಣ್ಣು ಕೊತ್ತಂಬರಿ ಸೊಪ್ಪು ಬೆಳೆಯಲು ಸೂಕ್ತವಲ್ಲ
ರಸಸಾರ
 • ಉತ್ತಮ ಶ್ರೇಣಿ – 6–8
 • ರಸಸಾರ 6.0 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 8.0 ಕ್ಕಿಂತ ಹೆಚ್ಚಾಗಿದ್ದರೆ  ಜಿಪ್ಸಮ್ ಹಾಕಬೇಕು.

ಬಿತ್ತನೆಯ ಸಾಮಗ್ರಿಗಳು

ಕೋಕಣ ಕಸ್ತೂರಿ
ಅವಧಿ
35-40 ದಿನಗಳು
ವಿಶಿಷ್ಠ ಲಕ್ಷಣ
ಉತ್ತಮ ವಾಸನೆ, ಅಗಲವಾದ ಎಲೆಗಳು, 30-40 ಸೆಂ.ಮೀ. ಎತ್ತರ
ಅರ್ಕಾ ಇಶಾ
ಅವಧಿ
70 ದಿನಗಳು
ವಿಶಿಷ್ಠ ಲಕ್ಷಣ
ಹಲವು ಬಾರಿ ಕೊಯ್ಲು ಮಾಡಬಹುದಾದ, ದಟ್ಟವಾಗಿ ಬೆಳೆಯುವ, ಅಗಲವಾದ ಎಲೆ, ಉತ್ತಮ ಸುವಾಸನೆ, ಉತ್ತಮ ಬಾಳಿಕೆ (ಫ್ರಿಜನಲ್ಲಿ 21 ದಿನಗಳು), ವಿಟಮಿನ್ ಸಿ (167 ಮಿ.ಗ್ರಾಂ / 100 ಗ್ರಾಂ ಎಫ್‌ಡಬ್ಲ್ಯೂ)

ನರ್ಸರಿ ತಯಾರಿ

ಬೇಕಾಗುವ ಬೀಜದ ಪ್ರಮಾಣ
ನೀರಾವರಿ ಬೆಳೆ
4- 4.8 ಕಿ.ಗ್ರಾ/ಎಕರೆ
ಮಳೆ ಆಧಾರಿತ
8–10 ಕಿ.ಗ್ರಾ/ಎಕರೆ

ಬೀಜೋಪಚಾರ

 • ಸರಿಯಾಗಿ ಮೊಳಕೆಯೊಡೆಯಲು ಬಿತ್ತನೆ ಮಾಡುವ ಮೊದಲು ಬೀಜಗಳನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 
 • ಇಮಿಡಾಕ್ಲೋಪ್ರಿಡ್- 2 ಮಿ.ಲಿ.

 • ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಬೆರೆಸಿ. ಮೇಲಿನ ಎಲ್ಲ ವಸ್ತುಗಳನ್ನು ಬೀಜಗಳ ಜೊತೆಗೆ ಪಾತ್ರೆಯಲ್ಲಿ ಸೇರಿಸಿ ಮತ್ತು ಬೀಜಗಳಿಗೆ ಈ ಪುಡಿ ವಸ್ತುಗಳು ಮೆತ್ತಿಕೊಳ್ಳುವವರೆಗೂ  ಎಲ್ಲವನ್ನೂ ಮಿಶ್ರಣ ಮಾಡಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
 • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು.

ಮಡಿ ತಯಾರಿಕೆ
 • ಮಡಿ ತಯಾರಿಕೆ- ಟ್ರಾಕ್ಟರ್ ಸಹಾಯದಿಂದ ಅನುಕೂಲಕರ ಉದ್ದ ಮತ್ತು ಎತ್ತರದ ಮಡಿಗಳನ್ನು ತಯಾರಿಸಿ. ನಂತರ ಬೀಜಗಳು ನಿರಿಗೆ ಹರಿದು ಹೋಗದಂತೆ ಬದುಗಳನ್ನು ನಿರ್ಮಿಸಿ.

ಬಿತ್ತನೆ

 • ಬೀಜಗಳನ್ನು ಮಡಿಗಳ ಮೇಲೆ ಸಮವಾಗಿ ಹರಡಿ.
 • ಬೀಜಗಳು ಸುಮಾರು 8-15 ದಿನಗಳಲ್ಲಿ ಮೊಳಕೆಯೊಡೆಯುತ್ತವೆ.

ಬೇಕಾಗುವ ಪೋಷಕಾಂಶಗಳ ಪ್ರಮಾಣ

 • ಒಟ್ಟು ಅವಶ್ಯಕತೆ- ಎಕರೆಗೆ 8:16:8 ಎನ್‌ಪಿಕೆ ಕಿ.ಗ್ರಾ./ಎಕರೆ 
 • ಬಿತ್ತನೆಯ ಸಮಯದಲ್ಲಿ ಹಾಕಿ- ಯೂರಿಯಾ- 9 ಕಿ.ಗ್ರಾ. 

ನೀರಾವರಿ

 • ಸ್ಪ್ರಿಂಕ್ಲರ್- ಪ್ರತಿ ದಿನ
 • ಪ್ರವಾಹ – ವಾರಕ್ಕೊಮ್ಮೆ (ಮಣ್ಣಿನ ಪ್ರಕಾರವನ್ನು ಆಧರಿಸಿ)
  -1ನೇ ನೀರಾವರಿ ಬಿತ್ತನೆ ಆದ ತಕ್ಷಣವೇ
  -2ನೇ ನೀರಾವರಿ ಬಿತ್ತನೆ ಆದ ಮೂರನೇ ದಿನ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಬಿತ್ತನೆ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ ಮಾಡುವುದು
ಆಕ್ಸಿಫ್ಲೋರ್ಫೆನ್ ಅಥವಾ ಕ್ವಿಜಾಲೋಫಾಪ್ ಈಥೈಲ್
500 ಮೀ.ಲಿ./ಎಕರೆ ಮತ್ತು 250 ಮೀ.ಲಿ./ಎಕರೆ
30 Days after transplanting

ಸಸ್ಯ ಪ್ರಚೋದಕಗಳು

 • ಉತ್ತಮ ಬೆಳವಣಿಗೆ ಮತ್ತು ಎತ್ತರ ಹೆಚ್ಚಾಗಲು ಮೊಳಕೆಯೊಡೆದ ನಂತರ ಜಿಬ್ಬೆರ್ಲಿಕ್ ಆಸಿಡ್ (ಜಿ.ಏ) @ 0.5 ಮಿಲಿ / ಲೀಟರ್ ನೀರನ್ನು ಸಿಂಪಡಿಸಿ.

ಕೀಟ ಮತ್ತು ರೋಗಗಳ ನಿರ್ವಹಣೆ

ಎಲೆಚ್ಚುಕ್ಕೆ ರೋಗ
ಲಕ್ಷಣಗಳು
ಸೋಂಕಿತ ಎಲೆಗಳ ಮೇಲೆ ಸಣ್ಣ ಗಾಢ ಕಪ್ಪು ಬಣ್ಣದ ಚುಕ್ಕೆಗಳಾಗುತ್ತವೆ ನಂತರ ಅವು ದೊಡ್ಡದಾಗಿ ಗಿಡ ಹಂತಹಂತವಾಗಿ ಸಾಯುತ್ತದೆ.
ಬೇಕಾಗುವ ಔಷಧ ಪ್ರಮಾಣ
ಮಾಂಕೊಜೆಬ್
100 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಸೊರಗು ರೋಗ / ಬೇರುಕೊಳೆ ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ
ಬೇಕಾಗುವ ಔಷಧ ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
200 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ
ಸಸ್ಯ ಹೇನು
ಲಕ್ಷಣಗಳು
ಕಪ್ಪು ಕೀಟವು ಗಿಡದ ಮೇಲೆ ಒತ್ತೊತ್ತಾಗಿರುತ್ತವೆ ಮತ್ತು ಗಿಡದಿಂದ ರಸವನ್ನು ಹೀರಿ ದುರ್ಭಲಗೊಳಿಸುತ್ತವೆ
ಬೇಕಾಗುವ ಔಷಧ ಬೇಕಾಗುವ ಔಷಧ
ಸ್ಪೈನೋಸಾಡ್
100 ಮಿಲಿ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಬೂದಿರೋಗ
ಲಕ್ಷಣಗಳು
ಸೋಂಕಿತ ಗಿಡದಎಲೆಗಳ ಮೇಲೆ ಬಿಳಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ.
ಬೇಕಾಗುವ ಔಷಧ ಪ್ರಮಾಣ
ವೆಟ್ಟಬಲ್ ಸಲ್ಪರ್
100 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲಿನ ಅವಧಿ
ಕೊಯ್ಲಿನ ಅವಧಿ
35-40 ದಿನಗಳ ನಂತರ
ಒಟ್ಟು ಕೊಯ್ಲು
8 - 10 ಬಾರಿ
ಕೊಯ್ಲಿನ ಅಂತರ
10 ದಿನಗಳು

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಇಳುವರಿ
5 -8 ಕ್ವಿಂಟಾಲ್/ಎಕರೆ
ಒಟ್ಟು ಕೊಯ್ಲಿನ ಇಳುವರಿ
40 - 50 ಕ್ವಿಂಟಾಲ್/ಎಕರೆ

2 thoughts on “Coriander

 1. Pingback: Coriander – LeanAgri

 2. Pingback: Coriander - BharatAgri

Leave a Reply

Your email address will not be published. Required fields are marked *