Cauliflower

ಹೂ ಕೋಸು

ಅಂದಾಜು

ಅಂದಾಜು ಇಳುವರಿ

80 – 100 ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

70 – 80   ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )
45,000
ಅಂದಾಜು ಆದಾಯ (ರೂ )

81,000

ಉತ್ತಮ ವಾತಾವರಣ

ವಾತಾವರಣ
  • ಕೋಸು ಗಡ್ಡೆ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಮಳೆ,ಮತ್ತು ಮೋಡ ಕವಿದ ವಾತಾವರಣವಿದ್ದರೆ ಕೋಸಿನ  ಗುಣಮಟ್ಟ ಕ್ಷೀಣಿಸುತ್ತದೆ .
ತಾಪಮಾನ
  • ಅತಿಯಾದ ತಾಪಮಾನದಿಂದ ಕೋಸು ಹಳದಿಬಣ್ಣಕ್ಕೆ ತಿರುಗುತ್ತದೆ.
  • 15-21 C ತಾಪಮಾನವು ಹೂ ಕೋಸಿನ ಮೊಳಕೆಯೊಡೆಯಲು ಮತ್ತು ಗಡ್ಡೆಯ ಬೆಳವಣಿಗೆಗೆ ಸೂಕ್ತವಾಗಿರುತ್ತದೆ.
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • ಸಾಮಾನ್ಯವಾಗಿ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
  • ಬೆಳವಣಿಗೆಗೆ 350-500 ಮೀ.ಮೀ ಮಳೆ ಪ್ರದೇಶವು ಸೂಕ್ತವಾಗಿರುತ್ತದೆ.

ಉತ್ತಮ ಮಣ್ಣು

ವಿಧ
  • ನೀರು ಬಸಿದು ಹೋಗುವಂತಹ ಫಲವತ್ತಾದ ಮರಳು ಮಿಶ್ರಿತ ಗೋಡು ಮಣ್ಣು ಅಥವಾ ಕೆಂಪು/ ಎರೆ ಮಣ್ಣು ಉತ್ತಮ.
    ಜೌಗು ಪ್ರದೇಶ ಈ ಬೆಳೆಗೆ ಸೂಕ್ತವಲ್ಲ.

ರಸಸಾರ
  • ಉತ್ತಮ ಶ್ರೇಣಿ – 5.5 to 6.5
  • ರಸಸಾರ 8ಕ್ಕಿಂತ ಹೆಚ್ಚಿದ್ದರೆ ( ಲವಣಯುಕ್ತ ಮಣ್ಣು ) ರೋಗಗಳಿಗೆ ಹೆಚ್ಚು ತುತ್ತಾಗುತ್ತದೆ.
  • ರಸಸಾರ 5.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್ ).
  • ರಸಸಾರ 7.5 ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು

ಬಿತ್ತನೆಯ ಬೀಜಗಳು

ಬಸಂತ – 956
ಅವಧಿ
55-60 ದಿನಗಳು
ವಿಶಿಷ್ಠ ಲಕ್ಷಣ
ಅಲ್ಪಾವಧಿ ತಳಿಗಳು. ಹೆಚ್ಚಿನ ತಾಪಮಾನವಿದ್ದರೂ ಒಳ್ಳೆಯ ಇಳುವರಿ ನೀಡುತ್ತವೆ.
ರಿಂಜಿಮ್
ಅವಧಿ
55-60 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚಿನ ತಾಪಮಾನ ಮತ್ತು ತೇವಾಂಶವಿದ್ದರೂ ಒಳ್ಳೆಯ ಇಳುವರಿ ನೀಡುತ್ತದೆ.
ಸಿ.ಫ್.ಎಲ್. -1522
ಅವಧಿ
75 ದಿನಗಳು
ವಿಶಿಷ್ಠ ಲಕ್ಷಣ
ಒಳ್ಳೆಯ ಗುಣಮಟ್ಟದ ಬಿಳಿ ಕೋಸುಗಡ್ಡೆಯನ್ನು ನೀಡುತ್ತದೆ
ಟೆಟ್ರಿಸ್
ಅವಧಿ
70 ದಿನಗಳು
ವಿಶಿಷ್ಠ ಲಕ್ಷಣ
ಹೆಚ್ಚು ದೂರ ಸಾಗಿಸಲು ಒಳ್ಳೆಯ ತಳಿ.

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ
  • ಸಸಿ ಮಡಿ ಜಾಗದ ಮಣ್ಣನ್ನು ಅಗೆದು ಕಳೆಕಸಗಳನ್ನು ತೆಗೆದು, ಹೆಂಟೆಗಳನ್ನು ಒಡೆದು, ಸಮಮಾಡಿ ಬಿಸಿಲಿಗೆ ಬಿಡಬೇಕು.

  • ಒಂದನೇ ವಿಧಾನ –

  •  100 ಚ.ಮೀ ಜಾಗದಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ಸಸಿಗಳನ್ನು ಬೆಳೆಯಬಹುದು.

  •  3 ಮೀ ಉದ್ದ , 0.6 ಮೀ ಅಗಲ ಮತ್ತು 10-15 ಸೆಂ.ಮೀ ಎತ್ತರದ ಮಡಿ ತಯಾರಿಸಿ. 

  • ಎರಡು ಮಡಿಗಳ ನಡುವೆ 60ಸೆಂ.ಮೀ ಅಂತರವಿರಬೇಕು.

  • ಬೀಜಗಳನ್ನು ಮಡಿಗಳ ಮೇಲೆ ಸಾಲುಕೊರೆದು ಸಾಲಿನ ಮಧ್ಯದಲ್ಲಿ 1-2 ಸೆಂಟಿ ಮೀ ಆಳದಲ್ಲಿ ಮತ್ತು 10 ಸೆಂಟಿ ಮೀ
    ಸಾಲಿನಿಂದ ಸಾಲಿಗೆ ಅಂತರದಲ್ಲಿ ಹಾಕಿ ಮಣ್ಣು ಮುಚ್ಚಿ

  • ಮಡಿಗಳನ್ನು ತೇವಾಂಶ ಕಾಪಾಡಿಕೊಳ್ಳಲು ಒಣಹುಲ್ಲು ಅಥವಾ ಎಲೆಗಳಿಂದ ಮುಚ್ಚಿ.

  • ಮೊಳಕೆಯೊಡೆಯುವವರೆಗೂ ನೀರನ್ನು ಸಿಂಪಡಿಸುತ್ತಿರಿ

  • ಜಮೀನಿಗೆ ಸ್ಥಳಾಂತರಿಸುವ ಹತ್ತು ದಿನ ಮೊದಲು ನೀರು ಹಾಕುವುದನ್ನು ಕಡಿಮೆಮಾಡಿ ಸಸಿಗಳನ್ನು ಗಟ್ಟಿಗೊಳಿಸಿ

  • ಸೊರಗು ರೋಗವನ್ನು ತಡೆಗಟ್ಟಲು ಬೀಜಗಳು ಮೊಳಕೆಯೊಡೆದ 3 ದಿನ ನಂತರ ಮಡಿಗಳನ್ನು ರಿಡೋಮಿಲ್ – 20 ಗ್ರಾಂ
    10 ಲೀಟರ್ ನೀರಿನಲ್ಲಿ ಕದಡಿ ಸಿಂಪಡಣೆ ಮಾಡಿ
         ಸಸಿ ಮಡಿ ತಯಾರಿಕೆ –

  • ವಿಧಾನ -2
    1. ಪ್ರೊ-ಟ್ರೈಗಳಲ್ಲಿ 1.2 ಕೆ.ಜಿ ಕೋಕೋ ಪೀಟ್ ( ತೆಂಗಿನ ನಾರು ) ತುಂಬಿರಿ
    2. ಒಂದು ಪ್ರೊ-ಟ್ರೇ ಗುಂಡಿಗೆ ಒಂದು ಬೀಜದಂತೆ ಬೀಜೋಪಚಾರ ಮಾಡಿದ ಬೀಜಗಳನ್ನು ಬಿತ್ತನೆ
    ಮಾಡಿ,ಕೋಕೋಪೀಟ್ ನಿಂದ ಮುಚ್ಚಿರಿ ನಂತರ ಪಾಲಿಥಿನ್ ಕವರ್ ಮೊಳಕೆಯೊಡೆಯುವವರೆಗೂ ಮುಚ್ಚಿರಿ ( ಐದು
    ದಿನಗಳವರೆಗೆ )
    3. ಆರು ದಿನಗಳ ನಂತರ ಮೊಳಕೆಯೊಡೆದ ಬೀಜಗಳನ್ನು ನೆರಳುಮನೆಯಲ್ಲಿ ತಯಾರುಮಾಡಿದ ಎತ್ತರ ಮಡಿಗಳ ಮೇಲೆ
    ಇಡಬೇಕು

ನರ್ಸರಿ ಅವಧಿ
  • ಅವಧಿ-35 ದಿನಗಳು 
  • ಎಲೆಗಳು ಕಡು ಹಸಿರು ಮತ್ತು ಕಾಂಡ ದಪ್ಪಗಾದಾಗ ಸಸ್ಯಗಳು ನಾಟಿ ಮಾಡಲು ಸಿದ್ಧವಾಗುತ್ತವೆ
ಬೀಜದ ಪ್ರಮಾಣ
ತಳಿಗಳು
180 ರಿಂದ 200 ಗ್ರಾಂ /ಎಕರೆ
ಹೈಬ್ರಿಡ್ಸ್
100 ಗ್ರಾಂ /ಎಕರೆ

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

    • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

    ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

    • ಕಾರ್ಬೆಂಡೆಜಿಮ್- 2 ಗ್ರಾಂ 

    ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಸಾಲು – ಬದು ತಯಾರಿ – 60 ಸೆಂ.ಮೀ ಅಗಲ,10 ಸೆಂ.ಮೀ ಎತ್ತರ ಮತ್ತು 30 ಸೆಂ.ಮೀ ಅಂತರದ ಸಾಲು
    ಬದುಗಳನ್ನು ಟ್ರಾಕ್ಟಾರ್ ಸಹಾಯದಿಂದ ನಿರ್ಮಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
0.60 ಮೀಟರ್
ಗಿಡಗಳ ನಡುವಿನ ಅಂತರ
0.45 ಮೀಟರ್
ಗಿಡಗಳ ಸಂಖ್ಯೆ
14,800 / ಎಕರೆಗೆ
ಹೈಬ್ರಿಡ್
ಸಾಲುಗಳ ಅಂತರ
0.45 ಮೀಟರ್
ಗಿಡಗಳ ನಡುವಿನ ಅಂತರ
0.45 ಮೀಟರ್
ಗಿಡಗಳ ಸಂಖ್ಯೆ
19,750 / ಎಕರೆಗೆ

ಬೇರು ಉಪಚಾರ

  • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
  • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
  • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
  • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

  • ಸಸಿಗಳನ್ನು 45 ಸೆಂ.ಮೀ ಅಂತರದಲ್ಲಿ ಬೋದುಗಳ ಮೇಲೆ ನೆಡಬೇಕು

ಪೋಷಕಾಂಶಗಳ ನಿರ್ವಹಣೆ

  • 60:30:30 ಕೆಜಿ ಎನ್.ಪಿ.ಕೆ / ಎಕರೆಗೆ. 
  • ಬಿತ್ತನೆ ಸಮಯದಲ್ಲಿ ( ಪ್ರತಿ ಎಕರೆಗೆ )-

                 ಯೂರಿಯಾ – 64 ಕೆಜಿ + ಯಸ್.ಯಸ್.ಪಿ – 184 ಕೆಜಿ + ಎಂ.ಓ.ಪಿ – 50 ಕೆಜಿ

  • 30 ದಿನಗಳ ನಂತರ – 64 ಕೆಜಿ ಯೂರಿಯಾ

ನೀರಾವರಿ

  • ಹನಿ ನೀರಾವರಿ ಪದ್ಧತಿ- ದಿನಬಿಟ್ಟು ದಿನ
  • ಕಾಲುವೆ  ನೀರಾವರಿ ಪದ್ಧತಿಯಲ್ಲಿ- 8-10 ದಿನಗಳಿಗೊಮ್ಮೆ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ಜಮೀನಿಗೆ ಗಿಡ ಹಾಕುವ ಮೊದಲು
ವಿಧಾನ
ಸಿಂಪಡಣೆ
ಫ್ಲ್ಯೂಕ್ಲೋರಾಲಿನ್
400 ಮಿಲಿ /ಎಕರೆಗೆ
ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲ್ಯೂರೋಪೇನ್ ಅಥವಾ ಪೆಂಡಿಮೆಥಲೀನ್ ಅಥವಾ ಐಸೊಪ್ರೊತುರೊನ್
100 ಮಿಲಿ / ಎಕರೆಗೆ 400 ಮಿಲಿ /ಎಕರೆಗೆ 200 ಮಿಲಿ /ಎಕರೆಗೆ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಅಲಾಕ್ಲೋರ್ ಅಥವಾ ಐಸೊಪ್ರೊತುರೊನ್
500 ಗ್ರಾಂ /ಎಕರೆಗೆ 1 ಕೆಜಿ /ಎಕರೆಗೆ

ಕೀಟ ಮತ್ತು ರೋಗಗಳ ನಿರ್ವಹಣೆ

ಸಸಿಕೊಳೆ ರೋಗ
ಲಕ್ಷಣಗಳು
ಗಿಡದ ಕಾಂಡದ ಮೇಲೆ ಕಪ್ಪು ಕಲೆಗಳಾಗುತ್ತವೆ ಮತ್ತು ಸಸಿಗಳು ಮುರಿದು ಬೀಳುತ್ತವೆ
ಬೇಕಾಗುವ ಔಷಧಗಳು ಪ್ರಮಾಣ
ಮೆಟಲಾಕ್ಸಿಲ್
250 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಡ್ರೇನ್ಚಿಂಗ್ ಮಾಡಿ (ಬೇರಿಗೆ ತಲುಪುವಂತೆ ಸುರಿಯಿರಿ).
ವಜ್ರ ಗುರುತಿನ ಬೆನ್ನಿನ ಪತಂಗ
ಲಕ್ಷಣಗಳು
ಮರಿಹುಳುಗಳು ಎಲೆಗಳನ್ನು ತಿನ್ನುತ್ತವೆ ಮತ್ತು ರಂಧ್ರಗಳನ್ನು ಮಾಡುವುದರಿಂದ ಎಲೆ ಹೆಚ್ಚು ಉದುರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಲ್ಯಾಂಬ್ಡಾ ಸೈಹಲೋಥ್ರಿನ್
200 ಮಿಲಿ/ ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಕಂದು ರೋಗ
ಲಕ್ಷಣಗಳು
ಕಾಂಡವು ಟೊಳ್ಳಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ, ಸೋಂಕಿತ ಗಡ್ಡೆಯು ಕಹಿಯಾಗುತ್ತದೆ. ಇದಕ್ಕೆ ಕಾರಣ ಬೋರಾನ್ ಅಂಶದ ಕೊರತೆ.
ಬೇಕಾಗುವ ಔಷಧಗಳು ಪ್ರಮಾಣ
ಬೋರಾಕ್ಸ್
500 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಬೇರು ಬಾಲದಂತಾಗುವ ರೋಗ
ಲಕ್ಷಣಗಳು
ಎಳೆಯ ಅಂಚು ಸರಿಯಾಗಿ ಬೆಳೆಯುವುದಿಲ್ಲ, ಬೆಳೆಯುವ ಕುಡಿಯು ವಿಕಾರವಾಗುತ್ತದೆ ಮತ್ತು ಗಡ್ಡೆಗಳು ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ. ಮಾಲಿಬ್ಡಿನಂ ಅಂಶದ ಕೊರತೆಯಿಂದ ಈ ರೋಗ ಬರುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಸೋಡಿಯಂ ಮಾಲಿಬ್ಡೇಟ್
1 ಕೇಜಿ/ ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಎಲೆ ಚ್ಚುಕ್ಕೆ ರೋಗ
ಲಕ್ಷಣಗಳು
ಕೆಲವು ಮಚ್ಚೆಗಳು ಸಣ್ಣದಾಗಿ, ನಂತರ ಗಾತ್ರ ಹೆಚ್ಚಾಗುತ್ತವೆ ಮತ್ತು ದುಂಡಾಗಿರುತ್ತವೆ. ಗಾಢ ಕಂಡುಬಣ್ಣದಲ್ಲಿರುತ್ತವೆ ನಂತರ ಅಂಗಮಾರಿಯಾಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಮ್ಯಾಂಕೊಜೆಬ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಕ್ಲಬ್ ರೂಟ್ / ಬೇರು ಗಂಟು
ಲಕ್ಷಣಗಳು
ಬೇರಿನ ಮೇಲೆ ಬೊಬ್ಬೆ, ಗುಳ್ಳೆ ಮತ್ತು ಗಾಯದಂತಹ ಲಕ್ಷಣಗಳು ಕಂಡುಬರುತ್ತವೆ. ಗಿಡಗಳು ದುರ್ಬಲವಾಗುತ್ತವೆ, ಬೇರುಗಳು ಹಾನಿಗೊಳಗಾಗುತ್ತವೆ ಮತ್ತು ಸುಲಭವಾಗಿ ಕಿತ್ತು ಬರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾರ್ಬೆನ್ಡೈಜಿಂ

250 ಗ್ರಾಂ/ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ರಸಹೀರುವ ಕೀಟಗಳು
ಲಕ್ಷಣಗಳು
ಎಲೆಗಳು ಹಳದಿಯಾಗಿ, ಸುರುಳಿಯಾಗುತ್ತವೆ ಮಸಿಯಂತಹ/ ಬೂದಿಯಂತಹ ಬೂಸ್ಟು ಬೆಳೆಯುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಥೈಯೋಮೆಥೋಕ್ಸಾಮ್
100 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
70 - 80 ದಿನಗಳ ನಂತರ ( ತಳಿಗಳ ಮೇಲೆ ಅವಲಂಭಿಸಿರುತ್ತದೆ)

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
80-100 ಟನ್ /ಎಕರೆಗೆ

Leave a Reply

Your email address will not be published. Required fields are marked *