Brinjal

ಬದನೆಕಾಯಿ

ಅಂದಾಜು

ಅಂದಾಜು ಇಳುವರಿ

60 ಕ್ವಿಂಟಾಲ್ / ಎಕರೆಗೆ 

ಅಂದಾಜು ಅವಧಿ

140-150  ದಿನಗಳು 

ಅಂದಾಜು ಖರ್ಚು (ರೂ )

39,166 /-​

ಅಂದಾಜು ಆದಾಯ (ರೂ )

1,14,000 /-

ಉತ್ತಮ ವಾತಾವರಣ

ವಾತಾವರಣ
  • ಬದನೆ ಉಷ್ಣವಲಯದ ಬೆಳೆ. ಹೆಚ್ಚು ಉಷ್ಣತೆಯಿರುವ ದೀರ್ಘಾವಧಿಯ ಅವಶ್ಯಕತೆಯಿದೆ.
  • ಇದು ಶೀತವನ್ನು ಸಹಿಸುವುದಿಲ್ಲ.
ತಾಪಮಾನ
  • ಹಗಲು 35°C ಗಿಂತ ಕಡಿಮೆ ತಾಪಮಾನ ಮತ್ತು ರಾತ್ರಿ 16°C ಗಿಂತ ಹೆಚ್ಚಿನ ತಾಪಮಾನವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
  • 15°C ಗಿಂತ ಕಡಿಮೆ ತಾಪಮಾನವಿದ್ದರೆ,ಬೆಳೆ ಬೆಳವಣಿಗೆ ಮತ್ತು ಕಾಯಿಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • 13-21°C ವರೆಗಿನ ತಾಪಮಾನವು ಬದನೆಕಾಯಿ ಬೆಳೆಗೆ ಸೂಕ್ತವಾಗಿದೆ.
  • ಕಡಿಮೆ ಆರ್ದ್ರತೆ ಮತ್ತು ಹೆಚ್ಚಿನ ಉಷ್ಣತೆಯು ಸಾಕಷ್ಟು ಹೂಉದುರುವಿಕೆ ಮತ್ತು ಕಾಯಿಯ ಕಡಿಮೆ ಉತ್ಪಾದನೆಗೆ ಕಾರಣವಾಗಬಹುದು. 
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ ಸರಾಸರಿ  600-1000 ಮಿಲಿ.ಮೀ ಮಳೆಬೇಕು
  • ವಿಶೇಷವಾಗಿ ಹೂಬಿಡುವ ಮತ್ತು ಕಾಯಿಯಾಗುವ ಸಮಯದಲ್ಲಿ ಅತಿಯಾದ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ.
  • ಅತಿಯಾದ ಮಳೆಯು ಎಲೆ ಉದರುವ, ಬಾಡುವ ಮತ್ತು ಸಸ್ಯ ಕೊಳೆಯುವುದಕ್ಕೆ ಕಾರಣವಾಗುತ್ತದೆ.

ಉತ್ತಮ ಮಣ್ಣು

ವಿಧ
  • ನೀರಿನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮರಳು ಮಿಶ್ರಿತ ಮಣ್ಣು ಮತ್ತು ಜೇಡಿ ಮಣ್ಣುಉತ್ತಮ .

  • ಉತ್ತಮ ನೀರು ಹಿಂಗುವ ವ್ಯವಸ್ಥೆ, ಕಾಲುವೆ ಮತ್ತು ಫಲವತ್ತಾದ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ

ರಸಸಾರ
  • ಉತ್ತಮ ಶ್ರೇಣಿ – 6–5 ರಿಂದ 7.5
  • ರಸಸಾರ 6.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
  • ರಸಸಾರ 7.5 ಕ್ಕಿಂತ ಹೆಚ್ಚಾಗಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ಮಂಜರಿ (ಬದನೆಕಾಯಿ)
ಅವಧಿ
60-65 ದಿನಗಳು
ವಿಶಿಷ್ಠ ಲಕ್ಷಣ
ನೇರಳೆ ಬಣ್ಣದ ಅಂಡಾಕಾರ ಕಾಯಿಗಳು ಧೀರ್ಘಾವಧಿಯ ತಳಿ.
ಪೂಸಾ ಹೈಬ್ರಿಡ್-5
ಅವಧಿ
80-85 ದಿನಗಳು
ವಿಶಿಷ್ಠ ಲಕ್ಷಣ
ಮುಳ್ಳುಗಳಿಲ್ಲದ, ಅರೆ-ನೆಟ್ಟಗೆ ಇರುವ ಟೂ೦ಗೆಗಳು. ಕಾಯಿಯು ಉದ್ದ, ಹೊಳೆಯುವ ಆಕರ್ಷಕ, ಗಾಡ ನೇರಳೆ, ಭಾಗಶಃ ಚುಕ್ಕೆಯಿರುವ ಕಾಂಡ, ತಲಾ 100 ಗ್ರಾಂ ತೂಕವಿರುತ್ತದೆ
ಪಂತ ರಿತುರಾಜ
ಅವಧಿ
75-85 ದಿನಗಳು
ವಿಶಿಷ್ಠ ಲಕ್ಷಣ
ಹಣ್ಣುಗಳು ಬಹುತೇಕ ಗುಂಡಾಗಿರುತ್ತವೆ. ಆಕರ್ಷಕ ನೇರಳೆ ಬಣ್ಣ, ಮೃದು, ಕಡಿಮೆ ಬೀಜ ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ. ಬ್ಯಾಕ್ಟೀರಿಯಾ ಬಾಡುವ ರೋಗಕ್ಕೆ ಕ್ಷೇತ್ರ ಪ್ರತಿರೋಧಕ ಶಕ್ತಿಯನ್ನು ಹೊಂದಿದೆ.

(ನರ್ಸರಿ) ಸಸಿ ಮಡಿ ತಯಾರಿಕೆ

ಸಸಿ ಮಡಿ ತಯಾರಿಕೆ
  • 1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 0.1 ಎಕರೆ (4 ಗುಂಟೆ) ಸಸಿ ಮಡಿ ಅಗತ್ಯವಿದೆ
  • 7.2 ಮೀ ಉದ್ದ X 1.2 ಮೀ ಅಗಲ X 10 ಸೆಮಿ. ಎತ್ತರದ ನಾಲ್ಕು ಮಡಿಗಳನ್ನು ತಯಾರಿಸಿ.
  • ಸಾಲಿನಲ್ಲಿ 5 ಸೆಂ.ಮೀ ಅಂತರದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಮಣ್ಣಿನಿಂದ ಮುಚ್ಚಿ.
  • ಮಡಿಯಲ್ಲಿನ ಸಸಿಗಳಿಗೆ ಮೊಳಕೆಯೊಡೆಯುವವರೆಗೆ ದಿನದಲ್ಲಿ ಎರಡು ಬಾರಿ ಮತ್ತು ಮೊಳಕೆಯೊಡೆದ ನಂತರ ಒಮ್ಮೆ ನೀರು ಹಾಕಿ.
  • ನಾಟಿ ಮಾಡುವ ಹತ್ತು ದಿನಗಳ ಮೊದಲು ಮೊಳಕೆ ಗಟಸಸಿ ಮಡಿಗಳಿಗೆ ನೀರು ಹಾಕುವ  ಪ್ರಮಾಣವನ್ನು ಕಡಿಮೆ ಮಾಡಿ.
  • ಕೊಳೆ ರೋಗದಿಂದ (ಡ್ಯಾಂಪಿಂಗ್ ರೋಗ) ಸಸಿಮಡಿಯನ್ನು ಸಂರಕ್ಷಿಸಲು ಬೀಜ ಮೊಳಕೆಯೊಡೆಯುವ 3 ದಿನಗಳ ನಂತರ ರಿಡೋಮಿಲ್ @ 20 ಗ್ರಾಂ.10 ಲೀ ನೀರಿನ್ನು ಸಿಂಪಡನೆ ಮಾಡಿ.
  • ಬಿತ್ತನೆ ಮಾಡಿದ 25 ದಿನಗಳ ನಂತರ 19:19:19 @ 5 ಗ್ರಾಂ + ಥೈಮೆತ್ಹೋಕ್ಷೊಮ್@ 0.25 ಗ್ರಾಂ/ಲೀಟರ್ ನೀರನ್ನು ಸಿಂಪಡನೆ ಮಾಡಿ.
ನರ್ಸರಿ ಅವಧಿ
  • 30-35 ದಿನಗಳು
  • ಗಿಡ ಎತ್ತರವು 15 ಸೆಂ.ಮೀ ಮತ್ತು 2-3 ದೊಡ್ಡ ಎಲೆಗಳನ್ನು ಹೊಂದಿರುವ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.
ಬೀಜದ ಪ್ರಮಾಣ
ತಳಿಗಳು
1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು 160 ಗ್ರಾಂ ಬೀಜಗಳು
ಹೈಬ್ರಿಡ್
1 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು, 80 ಗ್ರಾಂ ಬೀಜಗಳು

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 
  • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

  • ಕಾರ್ಬೆಂಡೆಜಿಮ್- 2 ಗ್ರಾಂ 

ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಮಡಿ ತಯಾರಿಕೆ- ಟ್ರಾಕ್ಟರ್ ಸಹಾಯದಿಂದ 2 ಅಡಿ ಅಥವಾ 3 ಅಡಿ ಅಗಲ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
2 ಅಡಿ
ಗಿಡಗಳ ನಡುವಿನ ಅಂತರ
2 ಅಡಿ
ಗಿಡಗಳ ಸಂಖ್ಯೆ
11,000
ಹೈಬ್ರಿಡ್
ಸಾಲುಗಳ ಅಂತರ
3 ಅಡಿ
ಗಿಡಗಳ ನಡುವಿನ ಅಂತರ
2 ಅಡಿ
ಗಿಡಗಳ ಸಂಖ್ಯೆ
7,333

ಬೇರು ಉಪಚಾರ

  • ಒಂದು ಚಪ್ಪಟೆಯಾದ ಪಾತ್ರೆಯಲ್ಲಿ 20 ಲೀಟರ್ ನೀರು ತೆಗೆದುಕೊಳ್ಳಿ.
  • 40 ಗ್ರಾಂ ಕಾರ್ಬೆಂಡೆಜಿಮ್ + 40 ಮೀ.ಲಿ. ಇಮಿಡಾಕ್ಲೋಪ್ರಿಡ್ ಬೆರೆಸಿ.
  • ನಾಟಿ ಮಾಡುವ ಮೊದಲು ಬೇರುಗಳನ್ನು 5 ನಿಮಿಷಗಳ ಕಾಲ ದ್ರಾವಣದಲ್ಲಿ ಅದ್ದಿ.
  • ಪ್ರೊ ಟ್ರೇಗಳಲ್ಲಿನ ಸಸ್ಯಗಳಿಗೆ – ಪ್ರೊ ಟ್ರೇಗಳನ್ನು 5 ನಿಮಿಷ ಪಾತ್ರೆಯಲ್ಲಿ ಅದ್ದಿ.

ನಾಟಿ ಮಾಡುವುದು

  • ಸಸಿಗಳನ್ನು ಬದುಗಳ ಮೇಲೆ 60 ಸೆಂ.ಮೀ ಅಂತರದಲ್ಲಿ  ಕಸಿ ಮಾಡಿ. 
  • ಗಾಳಿಯಾಡದಂತೆ ಬೇರುಗಳ ಸುತ್ತಲೂ ಮಣ್ಣಿನಿಂದ ಮುಚ್ಚಬೇಕು.
  • ತೀವ್ರವಾದ ಸೂರ್ಯನ ಶಾಖದಿಂದ ಸಂರಕ್ಷಣೆಗಾಗಿ ಸಸಿಗಳನ್ನು ಸಂಜೆ ಸಮಯದಲ್ಲಿ ನಾಟಿ ಮಾಡಬೇಕು.

ಪೋಷಕಾಂಶಗಳ ನಿರ್ವಹಣೆ

  • ಬೇಕಾಗುವ ಒಟ್ಟು ಪ್ರಮಾಣ: 100:50:30 ಎನ್‌ಪಿಕೆ ಕಿ.ಗ್ರಾಂ. ಪ್ರತಿ ಎಕರೆಗೆ
  • ಬಿತ್ತನೆಯ ಸಮಯದಲ್ಲಿ ಹಾಕಿ-
    ಯೂರಿಯಾ – 109 kg
    ಎಸಎಸಪಿ – 308 kg
    ಎಮ್ಓಪಿ – 50 kg

  • ಕಸಿ ಮಾಡಿದ 30 ದಿನಗಳ ನಂತರ-
    54 ಕೆಜಿ ಯೂರಿಯಾ

  • ಕಸಿ ಮಾಡಿದ 45 ದಿನಗಳ ನಂತರ-
    54 ಕೆಜಿ ಯೂರಿಯಾ

ನೀರಾವರಿ

  • ಹನಿ ನೀರಾವರಿ- ಪರ್ಯಾಯ ದಿನಗಳಲ್ಲಿ
  • ಸಾಲಿನಲ್ಲಿ ಹಾಯಿಸುವುದು  – ವಾರಕ್ಕೊಮ್ಮೆ (ಮಳೆಯಧಾರಿತ ಪ್ರಕಾರ)
  • ಬೇಸಿಗೆ ಹಂಗಾಮು- 3-4 ದಿನಗಳ ಮಧ್ಯಂತರದಲ್ಲಿ
  • ಪ್ರತಿ ಬಾರಿ ಬದನೆಕಾಯಿಯ ಕೊಯ್ಲಿನ ನಂತರ ಒಂದು ನೀರಾವರಿ ಒದಗಿಸಬೇಕು

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3-5 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 300 ಗ್ರಾಂ
ನಾಟಿ ಮಾಡಿದ 45 ದಿನಗಳ ನಂತರ
ವಿಧಾನ
ಸಿಂಪಡಣೆ
2,4-D
ಪ್ರತಿ ಎಕರೆಗೆ 400 ಗ್ರಾಂ

ಸಸ್ಯ ಪ್ರಚೋದಕಗಳು

  • ಹೂಬಿಡುವ ಹಂತ ಮತ್ತು ಉತ್ಪಾದಕತೆಯ ಸುಧಾರಣೆಗಾಗಿ, ಕಸಿ ಮಾಡಿದ 15 ದಿನಗಳ ನಂತರ, ಟ್ರೈಕೊಂಟನಾಲ್ @ 1.25 ಮಿಲಿ + ಬೊರಾಕ್ಸ್ 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡನೆ ಮಾಡಿ. 
  • ಹೂ ಉದರುವಿಕೆ ಕಡಿಮೆ ಮಾಡಲು ಮತ್ತು ಕಾಯಿ ಉತ್ಪಾದನೆ ಹೆಚ್ಚಾಗಲು ನೆಪ್ಥಲೀನ್ ಅಸಿಟಿಕ್ ಆಮ್ಲ 2 ಮಿಲಿ ಪ್ರತಿ 1ಲೀಟರ್ ನೀರಿಗೆ ಬೆರೆಸಿ ಕಸಿ ಮಾಡಿದ ನಂತರ 45 ಮತ್ತು 60 ದಿನಗಳಲ್ಲಿ ಸಿಂಪಡನೆ ಮಾಡಿ. 

ಕೀಟ ಮತ್ತು ರೋಗಗಳ ನಿರ್ವಹಣೆ

ಸಸಿಕೊಳೆ ರೋಗ
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ, ಇದರಿಂದ ಸುಲಭವಾಗಿ ಕಿತ್ತುಬರುತ್ತವೆ.
ಬೇಕಾಗುವ ಔಷಧ ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್
250.0 ಗ್ರಾಂ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಡ್ರೇನ್ಚಿಂಗ್ ಮಾಡಿ
ಮಣ್ಣಿನಿಂದ ಹರಡುವ ರೋಗಗಳು
ಲಕ್ಷಣಗಳು
ಹಾನಿಗೊಳಗಾದ ಗಿಡದ ಬೇರು ಕೊಳೆಯುತ್ತದೆ, ಗಿಡ ಸೊರಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ
ಬೇಕಾಗುವ ಔಷಧ ಪ್ರಮಾಣ
ಟ್ರೈಕೋಡರ್ಮ ವಿರಿಡೆ ಮತ್ತು ಸುಡೋಮೋನಾಸ್ ಪ್ಲೋರಾಜೇಂಟ್
40 ಗ್ರಾಂ/ಎಕರೆಗೆ + 40 ಗ್ರಾಂ/ಎಕರೆಗೆ
ಬಳಕೆ ವಿಧಾನ
ಎರಡನ್ನು ನೀರಿನಲ್ಲಿ ಬೆರೆಸಿ ಜಮೀನಿಗೆ ನಾಟಿ ಮಾಡುವ ಮೊದಲು ಬೇರನ್ನು ದ್ರಾವಣದಲ್ಲಿ ನೆನೆಸಿ ನಾಟಿಮಾಡಬೇಕು
ಬದನೆಯ ಸುಳಿಕೊರಕ
ಲಕ್ಷಣಗಳು
ಕಾಂಡ ಮತ್ತು ಹಣ್ಣಿನ ಮೇಲೆ ಕೊರೆತದಂತಹ ರಂಧ್ರಗಳನ್ನು, ಅದರಲ್ಲಿ ಹಿಕ್ಕೆಗಳು ಕಂಡುಬರುತ್ತವೆ. ಮರಿಹುಳುಗಳು ಕಾಂಡದ ಮೇಲ್ಭಾಗದಿಂದ ರಂದ್ರ ಮಾಡಿ ಕಾಂಡದೊಳಗೆ ಸೇರಿಕೊಂಡು ತಿರುಳನ್ನು ತಿನ್ನುತ್ತವೆ.
ಬೇಕಾಗುವ ಔಷಧ ಪ್ರಮಾಣ
ಎಮೆಮೆಕ್ಟಿನ್ ಬೆಂಜೋಯೇಟ್
100 ಮಿಲಿ/ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಎಲೆಚ್ಚುಕ್ಕೆ ರೋಗ
ಲಕ್ಷಣಗಳು
ಎಲೆಗಳ ಮೇಲೆ ದುಂಡಾದ ಅಥವಾ ಆಕಾರವಿಲ್ಲದ ಹಳದಿ - ಹಸಿರು ಕಲೆಗಳಾಗುತ್ತವೆ ಕ್ರಮೇಣವಾಗಿ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸೋಂಕಿತ ಎಲೆಗಳು ಅವಧಿಗೆ ಮುನ್ನವೇ ಬಿದ್ದುಹೋಗುತ್ತವೆ ಇದರಿಂದ ಇಳುವರಿ ಕಡಿಮೆಯಾಗುತ್ತದೆ.
ಬೇಕಾಗುವ ಔಷಧ ಪ್ರಮಾಣ
ಮಂಕೋಜೇಬ್
200 ಗ್ರಾಂ / ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ
ಮೈಕೋಪ್ಲಾಸ್ಮ ಸಣ್ಣಎಲೆ ನಂಜು ರೋಗ
ಲಕ್ಷಣಗಳು
ಎಲೆಯ ಗಾತ್ರ ಕಡಿಮೆಯಾಗುತ್ತದೆ ಗಿಡದ ಹೂವಿನ ಭಾಗಗಳು ಎಲೆಯಾಗಿ ಬದಲಾಗುತ್ತವೆ. ಇದು ಮೈಕೋಪ್ಲಾಸ್ಮ ಹುಳುವಿನಿಂದ ಬರುವ ರೋಗ ಮತ್ತು ಜಿಗಿಹುಳುಗಳಿಂದ ಹರಡುತ್ತದೆ.
ಬೇಕಾಗುವ ಔಷಧ ಪ್ರಮಾಣ
ಡೈಮಿಥೋಯೇಟ್
200 ಮಿಲಿ/ ಎಕರೆಗೆ
ಬಳಕೆ ವಿಧಾನ
ನೀರಿನಲ್ಲಿ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ನಾಟಿ ಮಾಡಿದ 70-130 ದಿನಗಳ ನಂತರ
ಕಟಾವಿನ ಬಾರಿ
8 ರಿಂದ 10
ಕೊಯ್ಲಿನ ಮಧ್ಯಂತರ
5 ದಿನಗಳು

ಇಳುವರಿ

ಇಳುವರಿ
ಪ್ರತಿ ಕೊಯ್ಲಿನ ಪ್ರಮಾಣ
6 ಕ್ವಿಂಟಾಲ್/ಎಕರೆಗೆ
ಕೊಯ್ಲು ಮಾಡಿದ ಒಟ್ಟು ಇಳುವರಿ
60 ಕ್ವಿಂಟಾಲ್ /ಎಕರೆಗೆ

Leave a Reply

Your email address will not be published. Required fields are marked *